ಗೋವಾದ ರೆಸಾರ್ಟ್ ನಲ್ಲಿ ರಷ್ಯಾದ ಬಾಲಕಿ ಮೇಲೆ ಅತ್ಯಾಚಾರ, ಕರ್ನಾಟಕದಲ್ಲಿ ಆರೋಪಿ ಬಂಧನ
ಉತ್ತರ ಗೋವಾದ ಅರಂಬೋಲ್ ನ ರೆಸಾರ್ಟ್ ವೊಂದರಲ್ಲಿ 12 ವರ್ಷದ ರಷ್ಯಾದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇರೆಗೆ ಕರ್ನಾಟಕದಲ್ಲಿ ವ್ಯಕ್ತಿಯೊಬ್ಬನನ್ನು ಗೋವಾ ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Published: 12th May 2022 11:52 AM | Last Updated: 12th May 2022 11:52 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಉತ್ತರ ಗೋವಾದ ಅರಂಬೋಲ್ ನ ರೆಸಾರ್ಟ್ ವೊಂದರಲ್ಲಿ 12 ವರ್ಷದ ರಷ್ಯಾದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇರೆಗೆ ಕರ್ನಾಟಕದಲ್ಲಿ ವ್ಯಕ್ತಿಯೊಬ್ಬನನ್ನು ಗೋವಾ ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ರವಿ ಲಮಾಣಿ ಬಂಧಿತ ಆರೋಪಿಯಾಗಿದ್ದಾನೆ. ಮೇ 6 ರಂದು ಗೋವಾದ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ತಾಯಿ ಮೇ 9 ರಂದು ದೂರು ದಾಖಲಿಸಿದ್ದರು. ನಂತರ ಮೇ 10 ರಂದು ವಿವಾಹಿತ ರವಿ ಲಮಾಣಿಯನ್ನು ಗದಗ್ ನಲ್ಲಿ ಪೆರ್ನೆಮ್ ಪೊಲೀಸರ ತಂಡವೊಂದು ಬಂಧಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರೆಸಾರ್ಟ್ ನ ಸ್ವೀಮ್ಮಿಂಗ್ ಫೂಲ್ ಹಾಗೂ ಹೋಟೆಲ್ ನಲ್ಲಿ ಕೊಠಡಿಯಲ್ಲಿ ಕೊಠಡಿ ಪರಿಚಾರಕಿಯಾಗಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಬಗ್ಗೆ ಆಕೆಯ ತಾಯಿ ದೂರು ನೀಡಿದ್ದಾಗಿ ಪೆರ್ನೆಮ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿಕ್ರಮ್ ನಾಯಕ್ ಹೇಳಿದ್ದಾರೆ.
ಕೆಲವು ಅಗತ್ಯ ವಸ್ತಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗಿದ್ದಾಗ ತನ್ನ ಮಗಳ ಮೇಲೆ ಅತ್ಯಾಚಾರವಾಗಿದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದು, ಘಟನೆ ನಂತರ ಆರೋಪಿ ಅಲ್ಲಿಂದ ಪಲಾಯನವಾಗಿದ್ದ. ಆದರೆ, ದೂರು ಸ್ವೀಕರಿಸಿದ 24 ಗಂಟೆಯೊಳಗೆ ಆತನನ್ನು ಗದಗ್ ನಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆರೋಪಿ ರವಿ ಲಮಾಣಿ ವಿರುದ್ಧ ಐಪಿಸಿ ಸೆಕ್ಷನ್ 376( ಅತ್ಯಾಚಾರ) ಗೋವಾ ಬಾಲಕರ ಕಾಯ್ದೆಯ ಸೆಕ್ಷನ್ 8 ಮತ್ತು ಪೋಕ್ಸೊ ಕಾಯ್ಡೆಯ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ನಾಯಕ್ ಹೇಳಿದ್ದಾರೆ.