ಗದಗ ಜಿಲ್ಲೆಯ ದಂಡಿನ ದುರ್ಗಮ್ಮಗೆ ಮಹಿಳೆಯರಿಂದ ಅರೆಬೆತ್ತಲೆ, ಪ್ರಾಣಿಬಲಿ ಸೇವೆ: ಜಿಲ್ಲಾಡಳಿತ, ಪೊಲೀಸರ ಮನವಿ, ಎಚ್ಚರಿಕೆಗೆ ಡೋಂಟ್ ಕೇರ್!

ಗದಗ ಜಿಲ್ಲೆಯ ದಂಡಿನ ದುರ್ಗಮ್ಮನ ಮಹಿಳಾ ಭಕ್ತರು ದೇವಿಯನ್ನು ಒಲಿಸಿಕೊಳ್ಳಲು  ತಮ್ಮ ದೇಹದ ಮೇಲ್ಭಾಗವನ್ನು ಮಾತ್ರ ಬೇವಿನ ಸೊಪ್ಪಿನಿಂದ ಮುಚ್ಚಿಕೊಂಡು ಅರೆಬೆತ್ತಲೆಯಾಗಿ ವಿಧಿವಿಧಾನ ನಡೆಸಿ ಪ್ರಾಣಿಗಳನ್ನು ಬಲಿ ಕೊಡುತ್ತಿದ್ದರಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಇದರ ವಿರುದ್ಧ ಭಕ್ತರಿಗೆ ಮನವರಿಕೆ ಮಾಡಿಕೊಡಲು ಹರಸಾಹಸ ಪಡಬೇಕಾಯಿತು.

Published: 12th May 2022 09:54 AM  |   Last Updated: 12th May 2022 09:54 AM   |  A+A-


Police officials warn devotees of action at Dandin Durgamma temple near Gadag

ಗದಗದ ದಂಡಿನ ದುರ್ಗಮ್ಮಗೆ ಅರೆಬೆತ್ತಲೆಯಾಗಿ ಸೇವೆ ಸಲ್ಲಿಸಲು ಬಂದ ಮಹಿಳೆಗೆ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡುತ್ತಿರುವುದು

The New Indian Express

ಗದಗ: ಜಿಲ್ಲೆಯ ದಂಡಿನ ದುರ್ಗಮ್ಮನ ಮಹಿಳಾ ಭಕ್ತರು ದೇವಿಯನ್ನು ಒಲಿಸಿಕೊಳ್ಳಲು  ತಮ್ಮ ದೇಹದ ಮೇಲ್ಭಾಗವನ್ನು ಮಾತ್ರ ಬೇವಿನ ಸೊಪ್ಪಿನಿಂದ ಮುಚ್ಚಿಕೊಂಡು ಅರೆಬೆತ್ತಲೆಯಾಗಿ ವಿಧಿವಿಧಾನ ನಡೆಸಿ ಪ್ರಾಣಿಗಳನ್ನು ಬಲಿ ಕೊಡುತ್ತಿದ್ದರಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಇದರ ವಿರುದ್ಧ ಭಕ್ತರಿಗೆ ಮನವರಿಕೆ ಮಾಡಿಕೊಡಲು ಹರಸಾಹಸ ಪಡಬೇಕಾಯಿತು.

ಗದಗದ ದಂಡಿನ ದುರ್ಗಮ್ಮ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಕಳೆದ ಮಂಗಳವಾರ ಆರಂಭವಾಗಿದ್ದು, ಅಕ್ಕಪಕ್ಕದ ಜಿಲ್ಲೆಗಳು ಹಾಗೂ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದಿಂದ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.

ಸೀರೆಗಳನ್ನು ವಿತರಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದರೂ, ಮಹಿಳೆಯರು ದಶಕಗಳಿಂದ ಅನುಸರಿಸಿಕೊಂಡು ಬಂದಿರುವ ಆಚರಣೆಯನ್ನು ಮಾಡಬೇಕೆಂದು ಹಠಹಿಡಿದು ಮಾಡುತ್ತಿದ್ದರು. ಆಡಳಿತ ಮಂಡಳಿ ತಡೆಯಲು ಮುಂದಾದಾಗ ಭಕ್ತರು ಸಮೀಪದ ಹೊಲಗಳಿಗೆ ಓಡಿಹೋದರು. ವಿಧಿವಿಧಾನಗಳನ್ನು, ಸಂಪ್ರದಾಯಗಳನ್ನು ಮಾಡಿದರೆ ದೇವಿಯು ತಮ್ಮ ಕುಟುಂಬದ ಸದಸ್ಯರಿಗೆ ಆರೋಗ್ಯ ಮತ್ತು ಸಂಪತ್ತನ್ನು ಅನುಗ್ರಹಿಸುತ್ತಾಳೆ ಎಂಬುದು ಇಲ್ಲಿನ ಮಹಿಳೆಯರ ನಂಬಿಕೆಯಾಗಿದೆ.

ಹಿಂದೆ, ಹರಿಂಶಿಕಾರಿ ಸಮುದಾಯ, ಅಲೆಮಾರಿ ಬುಡಕಟ್ಟು ಜನಾಂಗದವರು ಮಾತ್ರ ಈ ಆಚರಣೆಯನ್ನು ಅನುಸರಿಸುತ್ತಿದ್ದರು,ಈಗ ಎಲ್ಲಾ ಸಮುದಾಯಗಳು ಇದನ್ನು ಆಚರಿಸಲು ಪ್ರಾರಂಭಿಸಿದ್ದಾರೆ. ದೇವಸ್ಥಾನದ ಬಳಿ ನಿನ್ನೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು.

ಪೊಲೀಸ್ ಅಧಿಕಾರಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾಣಿ ಬಲಿ ನೀಡದಂತೆ ಹಾಗೂ ಅರೆಬೆತ್ತಲೆ ಸೇವೆಯನ್ನು ನಿಲ್ಲಿಸುವಂತೆ ಭಕ್ತರಿಗೆ ತಿಳಿಸಿದರು. ಆದರೆ ಅವರಲ್ಲಿ ಹಲವರು ದೂರದ ಸ್ಥಳಗಳಿಂದ ಬಂದವರಿದ್ದರು. ಅವರು ತಮ್ಮ ಸೇವೆಯನ್ನು ಮುಂದುವರಿಸುತ್ತೇವೆ ಎಂದು ಪಟ್ಟು ಹಿಡಿದರು. ಕೆಲವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರೆ, ಇನ್ನು ಕೆಲವರು ಪಕ್ಕದ ಹೊಲಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಭಕ್ತರು, “ಅದನ್ನು ನಡೆಸುವುದು ಭಕ್ತಿಯ ವಿಷಯ. ಪ್ರತಿ ವರ್ಷ ನಾವು ಪ್ರಾಣಿಗಳನ್ನು ಬಲಿ ಕೊಡುತ್ತೇವೆ. ದೇವಿಯು ಅದನ್ನು ಇಷ್ಟಪಟ್ಟು ನಮ್ಮನ್ನು ಆಶೀರ್ವದಿಸುತ್ತಾಳೆ ಎನ್ನುತ್ತಾರೆ.

ಇಂತಹ ಆಚರಣೆಗಳನ್ನು ನಿಲ್ಲಿಸಲು ಕೆಲವರಿಗೆ ಮನವರಿಕೆ ಮಾಡಿ ಸೀರೆ ಹಂಚಿದೆವು. ಆದರೆ ಅನೇಕರು ನಮ್ಮ ಮಾತು ಕೇಳದೆ ಪ್ರಾಣಿಗಳನ್ನು ಬಲಿ ಕೊಡಲು ಹತ್ತಿರದ ಹೊಲಗಳಿಗೆ ಹೋದರು. ಸಾವಿರಾರು ಜನರನ್ನು ನಿಭಾಯಿಸುವುದು ಈ ಸಂದರ್ಭದಲ್ಲಿ ಕಷ್ಟಕರವಾಗಿದೆ ಎಂದು ಜಿಲ್ಲಾಡಳಿತ ಅಧಿಕಾರಿಗಳು ಹೇಳುತ್ತಾರೆ.

ಕೆಲವು ಭಕ್ತರ ಸಂಪ್ರದಾಯ ನಿಲ್ಲಿಸಿದ ಪೊಲೀಸರು: ಪ್ರಾಣಿಬಲಿ ವಿರುದ್ಧ ಆಂದೋಲನ ನಡೆಸುತ್ತಿರುವ ರುದ್ರಣ್ಣ ಗುಳಗುಳಿ, ಪ್ರಾಣಿಗಳನ್ನು ಬಲಿ ಕೊಡುವುದನ್ನು ನಿಲ್ಲಿಸುವಂತೆ ನಾವು ಜನರಿಗೆ ಹೇಳುತ್ತಲೇ ಬಂದಿದ್ದೇವೆ.ನಾವು ಈಗ 5G ತಂತ್ರಜ್ಞಾನದ ಯುಗದಲ್ಲಿದ್ದೇವೆ. ಯಾರಿಗೂ ಹಾನಿ ಮಾಡುವುದನ್ನು ದೇವತೆಗಳು ಎಂದಿಗೂ ಇಷ್ಟಪಡುವುದಿಲ್ಲ. ವಾರ್ಷಿಕ ಜಾತ್ರೆಗಳಲ್ಲಿ ಸಾವಿರಾರು ಭಕ್ತರು ಪ್ರಾಣಿ ಬಲಿ ಕೊಡಲು ಸೇರುತ್ತಾರೆ, ಅದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸುತ್ತಾರೆ.

ದಂಡಿನ ದುರ್ಗಮ್ಮ ದೇವಸ್ಥಾನಕ್ಕೆ ಈ ವಿಶಿಷ್ಟ ಹೆಸರು ಬರಲು ಒಂದು ಕಥೆಯಿದೆ. ಹಿಂದಿನ ದಿನಗಳಲ್ಲಿ, ಯುದ್ಧದ ಸಮಯದಲ್ಲಿ ಗದಗದಲ್ಲಿ ವಾಸಿಸುವ ಜನರ ಮೇಲೆ ದಾಳಿ ಮಾಡಲು ಸೈನಿಕರ ಗುಂಪು ಬಂದಿತ್ತು. ದುರ್ಗಮ್ಮ ಆ ಸೈನಿಕರನ್ನು ಬೇರೆ ಪ್ರದೇಶಗಳಿಗೆ ತಿರುಗಿಸುವ ಮೂಲಕ ಗದಗವನ್ನು ಉಳಿಸಿದಳು. ದೇವಿಯು ದೊಡ್ಡ ದಂಡನ್ನು ನಿಲ್ಲಿಸಿದಳು, ಇದರಿಂದ ಅವಳನ್ನು ದಂಡಿನ್ ದುರ್ಗಮ್ಮ ಎಂದು ಕರೆಯುತ್ತಾರೆ ಎಂದು ಹೇಳಲಾಗುತ್ತದೆ.


Stay up to date on all the latest ರಾಜ್ಯ news
Poll
BS yediyurappa

ಬಿಜೆಪಿ ಸಂಸದೀಯ ಮಂಡಳಿಗೆ ಬಿ.ಎಸ್. ಯಡಿಯೂರಪ್ಪ ಸೇರ್ಪಡೆಯಿಂದ 2023 ರ ಕರ್ನಾಟಕ ಚುನಾವಣೆಯಲ್ಲಿ ಪಕ್ಷಕ್ಕೆ ನೆರವಾಗುವುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp