
ಸಾಂದರ್ಭಿಕ ಚಿತ್ರ
ಬೆಂಗಳೂರು: ಭಾರೀ ಮಳೆಯಿಂದಾಗಿ ಬೆಂಗಳೂರು ತೀವ್ರ ಜರ್ಝರಿತವಾಗಿದ್ದು, ವಿಶೇಷವಾಗಿ ಮೂಲಸೌಕರ್ಯಗಳ ಕೊರತೆಯಿಂದಾಗಿ ನಾಗರಿಕರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ.
ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಂಗಳೂರು ರಸ್ತೆಗಳಲ್ಲಿ ಪಾದಚಾರಿಗಳಿಗೆ ಮತ್ತು ವಾಹನ ಬಳಕೆದಾರರಿಗೆ ಸಂಚಾರ ಕಷ್ಟವಾಗಿದೆ. ರಸ್ತೆ ಗುಂಡಿಗಳು, ಉಬ್ಬುಗಳು, ತೆರೆದ ಚರಂಡಿಗಳು ಮತ್ತು ನೀರಿನಿಂದ ತುಂಬಿರುವ ಮ್ಯಾನ್‌ಹೋಲ್‌ಗಳ ಬಗ್ಗೆ ಅನೇಕರು ದೂರುವುದರಿಂದ ಇದು ವಿಶೇಷವಾಗಿ ಸತ್ಯವಾಗಿದೆ.
ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಜನಪ್ರಿಯ ಹಾಸ್ಯ ನಟಿ ಸುನೇತ್ರಾ ಪಂಡಿತ್'ಗೆ ಗಂಭೀರ ಗಾಯ: ಆಸ್ಪತ್ರೆಗೆ ದಾಖಲು
ಹೆಚ್ ಎಸ್ ಆರ್ ಲೇಔಟ್ ನಲ್ಲಿ ವಾಜಪೇಯಿ ಸ್ಟೇಡಿಯಂ ಕುಸಿತದಂತಹ ಮೂಲಸೌಕರ್ಯಗಳ ಹಾನಿ ಅಲ್ಲದೇ ವಿದ್ಯುತ್ ಲೈನ್ ಗಳು, ಮರಗಳು ನೆಲಕ್ಕುರುವ ಘಟನೆಗಳು ನಡೆಯುತ್ತಿದ್ದು, ಜಲಾವೃತಗೊಂಡ ರಸ್ತೆಗಳಿಂದಾಗಿ ಅನೇಕ ಅಪಘಾತಗಳು ಸಂಭವಿಸುತ್ತಿವೆ.
ಬೊಮ್ಮನಹಳ್ಳಿಯಲ್ಲಿ ನೀರಿನಿಂದ ತುಂಬಿದ ರಸ್ತೆ ಕಾಣದೆ ಚರಂಡಿಗೆ ಬಿದ್ದು ಗಾಯಕನೊಬ್ಬ, ಪಾಲಿಕೆಯ ನಿರ್ಲಕ್ಷ್ಯದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದರು. ನಗರದಲ್ಲಿ ನಡೆಯುತ್ತಿರುವ ಅಪಘಾತಗಳು, ಗಾಯಗಳ ಬಗ್ಗೆ ಸರ್ಕಾರ ಏಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಟ್ವೀಟರ್ ಬಳಕೆದಾರರು ಪ್ರಶ್ನಿಸಿದ್ದಾರೆ.
ರಸ್ತೆ ಗುಂಡಿಗಳನ್ನು ಮುಚ್ಚುವುದು ಕಷ್ಟಕರವಾಗುತ್ತಿದೆ ಎಂದು ಇತ್ತೀಚಿಗೆ ಹೊಸದಾಗಿ ಅಧಿಕಾರ ವಹಿಸಿಕೊಂಡ ಬಿಬಿಎಂಪಿ ಕಮೀಷನರ್ ತುಷಾರ್ ಗಿರಿನಾಥ್ ಹೇಳಿದ್ದರು. ರಸ್ತೆ ಗುಂಡಿ ಮುಚ್ಚುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ, ಬಿಬಿಎಂಪಿ ಕಳೆದ ನವೆಂಬರ್ ತಿಂಗಳಿನಲ್ಲಿಯೇ ಆಶ್ವಾಸನೆ ನೀಡಿದ್ದರೂ ಕೆಲಸ ಮಾತ್ರ ನಿಧಾನಗತಿಯಲ್ಲಿ ಸಾಗುತ್ತಿದೆ.