ಬೆಂಗಳೂರು: ಸೂಚನಾ ಫಲಕ ಇಲ್ಲದಿರುವುದೇ ರೈತನ ಸಾವಿಗೆ ಕಾರಣ
ಮದುವೆಯ ಆರತಕ್ಷತೆಯಲ್ಲಿ ಪಾಲ್ಗೊಂಡು ಮನೆಗೆ ಮರಳುತ್ತಿದ್ದ 64 ವರ್ಷದ ರೈತರೊಬ್ಬರು ಯಲಹಂಕ ರೈಲ್ವೆ ನಿಲ್ದಾಣದ ಬಳಿ ನಿರ್ಮಿಸಲಾಗುತ್ತಿದ್ದ ಅಂಡರ್‌ಪಾಸ್‌ಗೆ ಬಿದ್ದು ಸಾವನ್ನಪ್ಪಿದ್ದಾರೆ.
Published: 13th May 2022 06:36 PM | Last Updated: 13th May 2022 06:36 PM | A+A A-

ಅಂಡರ್‌ಪಾಸ್ ಕಾಮಗಾರಿ
ಬೆಂಗಳೂರು: ಮದುವೆಯ ಆರತಕ್ಷತೆಯಲ್ಲಿ ಪಾಲ್ಗೊಂಡು ಮನೆಗೆ ಮರಳುತ್ತಿದ್ದ 64 ವರ್ಷದ ರೈತರೊಬ್ಬರು ಯಲಹಂಕ ರೈಲ್ವೆ ನಿಲ್ದಾಣದ ಬಳಿ ನಿರ್ಮಿಸಲಾಗುತ್ತಿದ್ದ ಅಂಡರ್‌ಪಾಸ್‌ಗೆ ಬಿದ್ದು ಸಾವನ್ನಪ್ಪಿದ್ದಾರೆ.
ನೈಋತ್ಯ ರೈಲ್ವೆ ವಲಯದ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರು, ರೈಲ್ವೆ ನಿಲ್ದಾಣದಿಂದ ಕೇವಲ 250 ಮೀ ದೂರದಲ್ಲಿ ಸ್ಥಳದಲ್ಲಿ ನಡೆಯುತ್ತಿರುವ ಕಾಮಗಾರಿಯ ಸ್ಥಳದಲ್ಲಿ ಯಾವುದೇ ಫಲಕ, ಬ್ಯಾರಿಕೇಡ್‌ಗಳು ಮತ್ತು ಸಾಕಷ್ಟು ಬೆಳಕು ಇಲ್ಲದಿರುವುದೇ ರೈತನ ಸಾವಿಗೆ ಕಾರಣವಾಗಿದೆ.
ಇದನ್ನು ಓದಿ: ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ವಾಜಪೇಯಿ ಉದ್ಯಾನವನ ನಿರ್ಮಾಣ: ಸಚಿವ ಮುನಿರತ್ನ
ಭಾನುವಾರ ರಾತ್ರಿ 15 ಅಡಿ ಆಳದ ಗುಂಡಿಗೆ ಬಿದ್ದಿದ್ದ ರೈತ ಮುನಿಕೃಷ್ಣಪ್ಪ ಅವರ ಮುಖ ಸಂಪೂರ್ಣ ಛಿದ್ರಗೊಂಡಿದ್ದು, ಪೊಲೀಸರು ಸೋಮವಾರ ಬೆಳಗ್ಗೆ ಆಳವಾದ ಗುಂಡಿಯಿಂದ ಮೃತದೇಹವನ್ನು ಹೊರತೆಗೆದಿದ್ದಾರೆ.
ಮುನಿಕೃಷ್ಣಪ್ಪ ಅವರು ಪತ್ನಿ ಮತ್ತು 29 ಹಾಗೂ 25 ವರ್ಷದ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಯಲಹಂಕ ನ್ಯೂ ಟೌನ್ ಮತ್ತು ಹಳೆ ಯಲಹಂಕ ಟೌನ್ ನಡುವೆ ಸಂಪರ್ಕ ಒದಗಿಸುವ ಉದ್ದೇಶದಿಂದ ರೈಲ್ವೆ ಅಂಡರ್
ತಂದೆಯ ಶವವನ್ನು ಪಡೆಯಲು ಸ್ಥಳಕ್ಕೆ ಧಾವಿಸಿದ ಹಿರಿಯ ಪುತ್ರ ಮೋಹನ್ ಕುಮಾರ್ ಅವರು. ತನ್ನ ತಂದೆ ಕುಡಿದ ಮತ್ತಿನಲ್ಲಿ ಬಿದ್ದಿದ್ದಾರೆ ಎಂದು ಹೇಳುತ್ತಿರುವುದು ಸಂಪೂರ್ಣ ಸುಳ್ಳು. “ಸ್ಥಳದಲ್ಲಿ ಸಂಪೂರ್ಣ ಕತ್ತಲೆ ಇದ್ದು, ಆಳವಾದ ಗುಂಡಿ ಇದೆ. ಅಲ್ಲದೆ ಅದನ್ನು ತೆರೆದು ಬಿಟ್ಟಿದ್ದಾರೆ. ಕೆಲಸ ಮಾಡುವವರ ನಿರ್ಲಕ್ಷ್ಯ ಮತ್ತು ಅಲ್ಲಿ ಯಾವುದೇ ಸೂಚನಾ ಫಲಕ ಇಲ್ಲದಿರುವುದೇ ತಮ್ಮ ತಂದೆ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.