ಬೆಂಗಳೂರು: ಹಣಕಾಸಿನ ವಿಚಾರವಾಗಿ ಸ್ನೇಹಿತನಿಂದಲೇ ಬಿಪಿಒ ಸಿಬ್ಬಂದಿ ಹತ್ಯೆ
ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಬಿಪಿಒ ನಲ್ಲಿ ಕೆಲಸ ಮಾಡುತ್ತಿದ್ದ 31 ವರ್ಷದ ಉದ್ಯೋಗಿಯೊಬ್ಬರನ್ನು ಆತನ ಸ್ನೇಹಿತನೇ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಗುರುವಾರ ನಡೆದಿದೆ.
Published: 14th May 2022 10:44 AM | Last Updated: 14th May 2022 10:44 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಬಿಪಿಒ ನಲ್ಲಿ ಕೆಲಸ ಮಾಡುತ್ತಿದ್ದ 31 ವರ್ಷದ ಉದ್ಯೋಗಿಯೊಬ್ಬರನ್ನು ಆತನ ಸ್ನೇಹಿತನೇ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಗುರುವಾರ ನಡೆದಿದೆ.
ಮೃತ ಜಯಕುಮಾರ್ ಥಣಿಸಂದ್ರ ನಿವಾಸಿಯಾಗಿದ್ದು, ನಾಗವಾರದ ಐಟಿ ಪಾರ್ಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ರಾಹಿಲ್ ಖಾನ್ (35) ಬಾಣಸವಾಡಿ ನಿವಾಸಿ. ಅವರೂ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ.
ಉದ್ಯಮ ಆರಂಭಿಸಲು ಜಯಕುಮಾರ್ ಬ್ಯಾಂಕ್ ನಿಂದ ಸಾಲ ಪಡೆದಿದ್ದು, ರಾಹಿಲ್ ಖಾನ್ ಶ್ಯೂರಿಟಿ ನೀಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ತಿಂಗಳು ಜಯಕುಮಾರ್ ಇಎಂಐ ಪಾವತಿಸದ ಕಾರಣ ಇಬ್ಬರ ನಡುವೆ ಜಗಳ ನಡೆದಿದ್ದು, ಕೋಪದ ಭರದಲ್ಲಿ ಖಾನ್ ಜಯಕುಮಾರ್ ಚಾಕುವಿನಿಂದ ಪದೇ ಪದೇ ಹಲ್ಲೆ ನಡೆಸಿ ಪರಾರಿಯಾಗಿದ್ದ.
ದಾರಿಹೋಕರು ಪೊಲೀಸರಿಗೆ ಎಚ್ಚರಿಕೆ ನೀಡಿದರು ಮತ್ತು ರಾಹಿಲ್ ಖಾನ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.