42 ಏರ್ ಪೋರ್ಟ್, ಒಂದು ವರ್ಷದ ಅವಧಿ: ಕುಡಿದ ಮತ್ತಿನಲ್ಲಿ ಕಾರ್ಯನಿರ್ವಹಿಸಿದ್ದ ಸಿಬ್ಬಂದಿಗಳೆಷ್ಟು ಗೊತ್ತೆ?
ವೈಮಾನಿಕ ನಿಯಂತ್ರಕ ಡಿಜಿಸಿಎ ಡಾಟಾ ವಿಮಾನ ನಿಲ್ದಾಣಗಳಲ್ಲಿ ಕುಡಿತ ಮತ್ತಿನಲ್ಲಿ ಕಾರ್ಯನಿರ್ವಹಿಸಿದ್ದ ಏರ್ ಪೋರ್ಟ್ ಸಿಬ್ಬಂದಿಗಳ ಕುರಿತು ಅಂಕಿ-ಅಂಶ ಬಿಡುಗಡೆ ಮಾಡಿದೆ.
Published: 15th May 2022 01:31 PM | Last Updated: 15th May 2022 01:46 PM | A+A A-
ನವದೆಹಲಿ: ವೈಮಾನಿಕ ನಿಯಂತ್ರಕ ಡಿಜಿಸಿಎ ಡಾಟಾ ವಿಮಾನ ನಿಲ್ದಾಣಗಳಲ್ಲಿ ಕುಡಿತ ಮತ್ತಿನಲ್ಲಿ ಕಾರ್ಯನಿರ್ವಹಿಸಿದ್ದ ಏರ್ ಪೋರ್ಟ್ ಸಿಬ್ಬಂದಿಗಳ ಕುರಿತು ಅಂಕಿ-ಅಂಶ ಬಿಡುಗಡೆ ಮಾಡಿದ್ದು, 42 ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರ ಪೈಕಿ 84 ಮಂದಿ 2021 ರ ಜನವರಿಯಿಂದ 2022 ರ ಮಾರ್ಚ್ ವರೆಗೂ ಕುಡಿದ ಮತ್ತಿನಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದೆ.
ಕುಡಿದ ಅಮಲಿನಲ್ಲಿ ಕಾರ್ಯನಿರ್ವಹಿಸಿದ್ದ 84 ಸಿಬ್ಬಂದಿಗಳ ಪೈಕಿ ಶೇ.64 ರಷ್ಟು ಮಂದಿ ಚಾಲಕರಾಗಿದ್ದಾರೆ ಎಂದು ಡಿಜಿಸಿಎ ಅಂಕಿ-ಅಂಶಗಳ ಮೂಲಕ ತಿಳಿದುಬಂದಿದೆ.
ಅಮಲು ಪತ್ತೆ ಪರೀಕ್ಷೆಯಲ್ಲಿ ಮದ್ಯ ಸೇವನೆ ಮಾಡಿರುವುದು ದೃಢಪಟ್ಟವರ ಪೈಕಿ ಹಲವು ಕಾರ್ಮಿಕರು ಏರ್ ಪೋರ್ಟ್ ಆಪರೇಟರ್ ಗಳ ಮೂಲಕ ನೇಮಕವಾದವರಾಗಿದ್ದರೆ ಗಣನೀಯ ಪ್ರಮಾಣದಲ್ಲಿ ಬೇರೆ ಸಂಸ್ಥೆಗಳಿಂದಲೂ ನೇಮಕವಾದವರಿದ್ದಾರೆ.
35 ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ)ದಲ್ಲಿ 56 ಉದ್ಯೋಗಿಗಳು, ಅದಾನಿ ಸಮೂಹದ ಸಂಸ್ಥೆಗಳು ನಿರ್ವಹಿಸುತ್ತಿರುವ ನಾಲ್ಕು ವಿಮಾನ ನಿಲ್ದಾಣಗಳಲ್ಲಿ 17 ಮಂದಿ ಉದ್ಯೋಗಿಗಳು ಜಿಎಂಆರ್ ಗ್ರೂಪ್ ನಿರ್ವಹಣೆಯಲ್ಲಿರುವ 2 ವಿಮಾನ ನಿಲ್ದಾಣಗಳಲ್ಲಿ ಇಬ್ಬರು ಉದ್ಯೋಗಿಗಳು, ಫೇರ್ ಫ್ಯಾಕ್ಸ್ ಇಂಡಿಯಾ ನಿರ್ವಹಣೆಯಲ್ಲಿರುವ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಬ್ಬರು ಉದ್ಯೋಗಿಗಳು ಮದ್ಯಸೇವನೆ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ವಿಫಲರಾಗಿದ್ದಾರೆ.
ಆದರೆ ಬೆಂಗಳೂರು ವಿಮಾನ ನಿಲ್ದಾಣದ ಆಪರೇಟರ್ ಬಿಐಎಎಲ್ ಸ್ಪಷ್ಟನೆ ನೀಡಿದ್ದು, ಮದ್ಯಸೇವನೆ ಮಾಡಿ ಕಾರ್ಯನಿರ್ವಹಣೆ ಮಾಡಿರುವ ನೌಕರರರು ತನ್ನ ನೌಕರರಲ್ಲ ಎಂದು ಹೇಳಿದೆ.