ಕೆರೆಗೆ ಹಾರಿ ಜೀವ ಕಳೆದುಕೊಳ್ಳಲು ನಿರ್ಧರಿಸಿದ್ದೆ: ಆಸಿಡ್ ದಾಳಿಕೋರ ನಾಗೇಶ್ ತಪ್ಪೊಪ್ಪಿಗೆ!
ಹೊಸಕೋಟೆ ಬಳಿ ಕೆರೆಗೆ ಹಾರಿ ಪ್ರಾಣ ಬಿಡಲು ನಿರ್ಧರಿಸಿದ್ದೆ ಎಂದು ಆಸಿಡ್ ದಾಳಿ ಆರೋಪಿ ನಾಗೇಶ್ ತನಿಖಾಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಕಾನೂನು ಸಹಾಯ ಪಡೆಯಲು ತನ್ನ ಸಹೋದರನಿಗೆ ಕರೆ ಮಾಡಿದ್ದೆ. ಆದರೆ, ಅವರು ನಿರಾಕರಿಸಿ, ಮನೆಗೆ ಬರುವಂತೆ ಹೇಳಿದರು.
Published: 15th May 2022 09:36 AM | Last Updated: 15th May 2022 09:37 AM | A+A A-

ಆರೋಪಿ ನಾಗೇಶ್
ಬೆಂಗಳೂರು: ಹೊಸಕೋಟೆ ಬಳಿ ಕೆರೆಗೆ ಹಾರಿ ಪ್ರಾಣ ಬಿಡಲು ನಿರ್ಧರಿಸಿದ್ದೆ ಎಂದು ಆಸಿಡ್ ದಾಳಿ ಆರೋಪಿ ನಾಗೇಶ್ ತನಿಖಾಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಕಾನೂನು ಸಹಾಯ ಪಡೆಯಲು ತನ್ನ ಸಹೋದರನಿಗೆ ಕರೆ ಮಾಡಿದ್ದೆ. ಆದರೆ, ಅವರು ನಿರಾಕರಿಸಿ, ಮನೆಗೆ ಬರುವಂತೆ ಹೇಳಿದರು.
ನಂತರ, 27 ವರ್ಷದ ಎಂಬಿಎ ಪದವೀಧರ ನಾಗೇಶ್ ಜಾಮೀನು ಅರ್ಜಿ ಸಲ್ಲಿಸಲು ನೇರವಾಗಿ ನ್ಯಾಯಾಲಯದ ಆವರಣದಲ್ಲಿ ವಕೀಲರನ್ನು ಸಂಪರ್ಕಿಸಿದ್ದಾನೆ. ಆದರೆ, ಅವರ ಪೊಲೀಸರ ಮುಂದೆ ಶರಣಾಗುವಂತೆ ಸಲಹೆ ನೀಡಿದ್ದಾರೆ. ವಕೀಲರ ಸಲಹೆಯಿಂದ ಅಸಮಾಧಾನಗೊಂಡು ತನ್ನ ಜೀವವನ್ನು ಕಳೆದುಕೊಳ್ಳಲು ನಿರ್ಧರಿಸಿ ಬಸ್ ನಲ್ಲಿ ಹೊಸಕೋಟೆಗೆ ಹೋಗಿದ್ದಾನೆ.
ದಾರಿಯಲ್ಲಿ ತನ್ನ ಫೋನ್ ಅನ್ನು ಎಸೆದು, ತನ್ನ ಪಾಪಗಳ ಪರಿಹಾರಕ್ಕಾಗಿ ಪೂಜೆಗಾಗಿ ತಿರುಪತಿಗೆ ಭೇಟಿ ನೀಡಲು ಯೋಜಿಸಿದ್ದ. ಆದರೆ ಆತ ತಮಿಳುನಾಡಿಗೆ ಹೋಗಲು ನಿರ್ಧರಿಸಿದ್ದು, ಆಶ್ರಮದಲ್ಲಿ ಪುರೋಹಿತರ ಗುಂಪು ಸೇರಲು ಯಶಸ್ವಿಯಾಗಿದ್ದ.
ಸಂತ್ರಸ್ತೆ ಮೇಲೆ ಆಸಿಡ್ ಎರಚುವ ಸಂದರ್ಭದಲ್ಲಿ ಆತನ ಕೈಗಳಿಗೂ ಸುಟ್ಟಗಾಯಗಳು ಉಂಟಾಗಿವೆ ಎಂದು ವರದಿಯಾಗಿದೆ. ಪ್ರಥಮ ಚಿಕಿತ್ಸೆಗಾಗಿ ಕ್ಲಿನಿಕ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಆ್ಯಸಿಡ್ ತನ್ನ ಕೈ ಮೇಲೆ ಬಿದ್ದಿತ್ತು ಎಂದು ನರ್ಸಿಂಗ್ ಸಿಬ್ಬಂದಿಗೆ ಆರೋಪಿ ನಾಗೇಶ್ ಹೇಳಿದ್ದ.