
ಆಶ್ರಮದಿಂದ ಆರೋಪಿಯನ್ನು ಬಂಧನಕ್ಕೊಳಪಡಿಸಿದ ಎಎಸ್ಐ ಶಿವಣ್ಣ ಮತ್ತು ಕಾನ್ಸ್ಟೆಬಲ್ ರವಿಕುಮಾರ್.
ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ ಆರೋಪಿ ನಾಗೇಶ್ ನನ್ನು ಕೊನೆಗೂ ಪೊಲೀಸರು ಬಂಧನಕ್ಕೊಳಪಡಿಸಿದ್ದು, ಸಂತ್ರಸ್ತೆಯ ಕುಟುಂಬಸ್ಥರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.
ಆರೋಪಿ ಬಂಧನ ಕುರಿತು ಯುವತಿಯ ಚಿಕ್ಕಮ್ಮ ರತ್ನಾ ಅವರು ಮಾತನಾಡಿ, ಇಂತಹ ಕ್ರೂರ ವರ್ತನೆ ಅಂತ್ಯೆಗೊಳ್ಳಲಿ, ಯಾವ ಮಹಿಳೆಗೂ ಇಂತಹ ನೋವು ಬಾರದಿರಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆ್ಯಸಿಡ್ ದಾಳಿ ಪ್ರಕರಣ; ಪೊಲೀಸರಿಗೆ ಸಹಾಯ ಮಾಡಿದ ವಾಂಟೆಡ್ ಪೋಸ್ಟರ್ಸ್!
ಶುಕ್ರವಾರ ಆರೋಪಿ ಬಂಧನ ಕುರಿತು ಮಾಹಿತಿ ತಿಳಿದಿತ್ತು. ಇದಕ್ಕೂ ಮುನ್ನ ಪ್ರತೀನಿತ್ಯ ನನ್ನ ಪತಿ ಪೊಲೀಸ್ ಠಾಣೆಗೆ ತೆರಳಿ ಆರೋಪಿ ಬಂಧನದ ಕುರಿತು ಮಾಹಿತಿ ಕೇಳುತ್ತಿದ್ದರೆ. ಆರೋಪಿ ಯಾವುದೇ ಸಾಕ್ಷ್ಯಾಧಾರ ಸಿಗದಂತೆ ಮಾಡಿ ತಲೆ ಮರೆಸಿಕೊಂಡಿದ್ದು, ಆತನನ್ನು ಹುಡುಕುವುದು ಕಷ್ಟಸಾಧ್ಯ ಎಂದು ನಮಗೂ ತಿಳಿದಿತ್ತು. ಇಡೀ ಪಶ್ಚಿಮ ವಿಭಾಗದ ಪೊಲೀಸರು ಆರೋಪಿ ಬೆನ್ನು ಬಿದ್ದಿರುವುದಾಗಿ ಪೊಲೀಸರು ಹೇಳಿದ್ದರು. ಆರೋಪಿ ಬಂಧಿಸುವಲ್ಲಿ ಮಾಧ್ಯಮಗಳ ಪಾತ್ರ ಕೂಡ ದೊಡ್ಡದಿದೆ. ಅವರಿಗೆ ಧನ್ಯವಾದಗಲನ್ನು ಹೇಳಲು ಬಯಸುತ್ತೇವೆಂದು ಹೇಳಿದ್ದಾರೆ.
ಆ್ಯಸಿಡ್ ದಾಳಿ ನಿಯಂತ್ರಿಸಲು ಕಾನೂನು ತರಬೇಕಿದೆ. ಆ್ಯಸಿಡ್ ಖರೀದಿ ಮಾಡಲು ಕಷ್ಟಸಾಧ್ಯವಾಗಬೇಕು. ಆ್ಯಸಿಡ್ ಮಾರಾಟ ಮಾಡಿದ್ದ ವ್ಯಕ್ತಿಯನ್ನು ಪ್ರಕರಣದ ಸಹ ಆರೋಪಿ ಎಂದು ಪರಿಗಣಿಸಬೇಕು. ಬಂಧಿತ ಆರೋಪಿಯಿಂದ ಕಿರುಕುಳಕ್ಕೊಳಗಾದ ಇತರೆ ಯಾವುದೇ ಮಹಿಳೆಯರು ಇದ್ದಾರೆಯೇ ಎಂದು ಪೊಲೀಸರು ಪತ್ತೆ ಮಾಡಬೇಕು ಯುವತಿಯ ಮತ್ತೊಬ್ಬ ಕುಟುಂಬಸ್ಥರು ಹೇಳಿದ್ದಾರೆ.
ಇದನ್ನೂ ಓದಿ: ಆ್ಯಸಿಡ್ ದಾಳಿ ಪ್ರಕರಣ: ಮೂತ್ರ ವಿಸರ್ಜನೆ ನೆಪದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ನಾಗನಿಗೆ ಪೊಲೀಸರ ಗುಂಡೇಟು
ಈ ನಡುವೆ ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸರಿಂದ ಗುಂಡೇಟು ತಿಂದಿರುವ ಆರೋಪಿ ನಾಗೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ನಂತರ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದುಕೊಲ್ಳುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.