ತಾಳೆ ಕೃಷಿಯಿಂದ ಅಧಿಕ ಲಾಭ ಗಳಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ರೈತರು!
ದಕ್ಷಿಣ ಕನ್ನಡ ಜಿಲ್ಲೆಯ ರೈತರು, ಎಣ್ಣೆಗಾಗಿ ತಾಳೆ ಮರಗಳನ್ನು ಬೆಳೆಯುವ ಮೂಲಕ ಉತ್ತಮ ಲಾಭ ಗಳಿಸುತ್ತಿದ್ದಾರೆ. ಹಳದಿ ಎಲೆ ರೋಗದಿಂದ ಅಡಿಕೆ ಮರ ರಕ್ಷಣೆಗಾಗಿ ಪರ್ಯಾಯವಾಗಿ ತಾಳೆ ಮರ ಬೆಳೆದ ರೈತ ನಾಗೇಶ್ ಇದೀಗ ಪ್ರತಿ ಟನ್ ಗೆ ರೂ. 21, 300 ಆದಾಯ ಗಳಿಸುತ್ತಿದ್ದಾರೆ.
Published: 16th May 2022 04:30 PM | Last Updated: 16th May 2022 04:30 PM | A+A A-

ಸಾಂದರ್ಭಿಕ ಚಿತ್ರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ರೈತರು, ಎಣ್ಣೆಗಾಗಿ ತಾಳೆ ಮರಗಳನ್ನು ಬೆಳೆಯುವ ಮೂಲಕ ಉತ್ತಮ ಲಾಭ ಗಳಿಸುತ್ತಿದ್ದಾರೆ. ಹಳದಿ ಎಲೆ ರೋಗದಿಂದ ಅಡಿಕೆ ಮರ ರಕ್ಷಣೆಗಾಗಿ ಪರ್ಯಾಯವಾಗಿ ತಾಳೆ ಮರ ಬೆಳೆದ ರೈತ ನಾಗೇಶ್ ಇದೀಗ ಪ್ರತಿ ಟನ್ ಗೆ ರೂ. 21, 300 ಆದಾಯ ಗಳಿಸುತ್ತಿದ್ದಾರೆ.
ನಾಗೇಶ್ ಅವರಂತೆ ಜಿಲ್ಲೆಯಲ್ಲಿನ ಅನೇಕ ರೈತರು ತಾಳೆ ಮರ ಬೆಳೆಯುತ್ತಿದ್ದಾರೆ. ಈ ಹಿಂದೆ ಜಿಲ್ಲೆಯಲ್ಲಿ 40 ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಮರ ಬೆಳೆಯಲಾಗುತಿತ್ತು. ಆದರೆ, ಇದೀಗ ಅದು 60 ಹೆಕ್ಟೇರ್ ಗೆ ಹೆಚ್ಚಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಎರಡು ತಿಂಗಳ ಹಿಂದೆ ಒಂದು ಟನ್ ತಾಳೆ ಹಣ್ಣು 15,000 ರೂ.ಗೆ ಮಾರಾಟ ವಾಗುತಿತ್ತು. ಆದರೆ, ಇದೀಗ ಹೆಚ್ಚುವರಿ ಬೇಡಿಕೆಯಿಂದ ರೂ. 6,300 ಆಗಿದೆ. ಮುಂದೆಯೂ ಕೂಡಾ ಬೆಲೆ ಹೆಚ್ಚಾಗುವ ವಿಶ್ವಾಸವಿದೆ ಎಂದು ತಾಳೆ ಬೆಳೆಗಾರರೊಬ್ಬರು ತಿಳಿಸಿದರು.
ಒಂದು ಮರದಿಂದ ವರ್ಷಕ್ಕೆ ಸುಮಾರು 200 ಕೆಜಿ ಇಳುವರಿ ಪಡೆಯುತ್ತೇವೆ, 1,250 ತಾಳೆ ಮರಗಳನ್ನು ಹೊಂದಿದ್ದು, ಪ್ರತಿ ವರ್ಷ 10 ಟನ್ ಇಳುವರಿ ಬರುತ್ತದೆ. ಸಸಿಗಳನ್ನು ಪೂರೈಸುವ ಕಂಪನಿಯೇ ಉತ್ಪನ್ನವನ್ನು ಸಾಗಾಟ ಮಾಡಿ, ನಮ್ಮ ಬ್ಯಾಂಕ್ ಖಾತೆ ಹಣವನ್ನು ಜಮೆ ಮಾಡುತ್ತದೆ ಎಂದು ಸುಳ್ಯ ತಾಲೂಕಿನ ಪ್ರೇಮ್ ವಸಂತ್ ಹೇಳಿದರು.
ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ಸುತ್ತಮುತ್ತಲಿನ ಪ್ರದೇಶ ತಾಳೆ ಕೃಷಿಗೆ ಸೂಕ್ತವಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಹೆಚ್ ಆರ್ ನಾಯಕ್ .
ದೇಶದಲ್ಲಿ ಪ್ರತಿ ವರ್ಷ ಸುಮಾರು 236 ಲಕ್ಷ ಟನ್ ತಾಳೆಎಣ್ಣೆಯ ಬೇಡಿಕೆಯಿದೆ.ಆದರೆ, ಕೇವಲ 70 ರಿಂದ 80 ಟನ್ ನಷ್ಟು ಮಾತ್ರ ತಾಳೆ ಎಣ್ಣೆ ಉತ್ಪಾದಿಸಲಾಗುತ್ತಿದೆ. ಈ ಬೇಡಿಕೆ ಪೂರೈಸಲು ಇಂಡೋನೇಷ್ಯಾ, ಮಲೇಷಿಯಾದಿಂದ ಅಡುಗೆ ಎಣ್ಣೆ ಆಮದು ಮಾಡಿಕೊಳ್ಳಲಾಗುತ್ತಿದೆ. ತಾಳೆ ಕೃಷಿಗೆ ಸರ್ಕಾರದಿಂದ ಸಬ್ಸಿಡಿ ಮತ್ತಿತರ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.