ಬೆಂಗಳೂರು: ಟೆಸ್ಟ್ ಡ್ರೈವ್ ನೆಪದಲ್ಲಿ ಕಾರು ಕದ್ದ ಖತರ್ನಾಕ್ ಕಳ್ಳ!
ಓಎಲ್ಎಕ್ಸ್ ನಲ್ಲಿ ಮಾರಾಟಕ್ಕಿಟ್ಟಿದ್ದ ಕಾರೊಂದನ್ನು ಟೆಸ್ಟ್ ಡ್ರೈವ್ ನೆಪದಲ್ಲಿ ಮಾಲೀಕನಿಂದ ಪಡೆದು ಪರಾರಿಯಾಗಿದ್ದ ಖತರ್ನಾಕ್ ಕಳ್ಳನೊಬ್ಬನನ್ನು ಅಮೃತಹಳ್ಳಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
Published: 16th May 2022 11:53 AM | Last Updated: 16th May 2022 01:50 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಓಎಲ್ಎಕ್ಸ್ ನಲ್ಲಿ ಮಾರಾಟಕ್ಕಿಟ್ಟಿದ್ದ ಕಾರೊಂದನ್ನು ಟೆಸ್ಟ್ ಡ್ರೈವ್ ನೆಪದಲ್ಲಿ ಮಾಲೀಕನಿಂದ ಪಡೆದು ಪರಾರಿಯಾಗಿದ್ದ ಖತರ್ನಾಕ್ ಕಳ್ಳನೊಬ್ಬನನ್ನು ಅಮೃತಹಳ್ಳಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಅಮೃತ ನಗರದ ನಿವಾಸಿ ಎಂ.ಜಿ.ವೆಂಕಟೇಶ್ ನಾಯ್ಕ (36) ಬಂಧಿತ ಆರೋಪಿ. ಈತನಿಂದ ಕಾರು ಹಾಗೂ ಮೊಬೈಲ್ ಫೋನ್'ನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಕಳೆದ ಜ.30ರಂದು ಹೆಬ್ಬಾಳ ಕಾಫಿಬೋರ್ಡ್ ಲೇ ಔಟ್ ನಿವಾಸಿ ಎಂಜಿನಿಯರ್ ರವೀಂದ್ರ ಇಲೂರಿ ಅವರ ಬ್ರೀಜಾ ಕಾರನ್ನು ಖರೀದಿಸುವ ನೆಪದಲ್ಲಿ ಟೆಸ್ಟ್ ಡ್ರೈವ್ ಮಾಡುವುದಾಗಿ ಕಾರು ಪಡೆದು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪೊಲೀಸರು ಬಂದನಕ್ಕೊಳಪಡಿಸಿದ್ದಾರೆ.
ಇದನ್ನೂ ಓದಿ: ಹೆಬ್ಬಾಳ ಬಸ್ ನಿಲ್ದಾಣದಲ್ಲಿ ವಿದ್ಯುತ್ ಶಾಕ್'ಗೆ ವ್ಯಕ್ತಿ ಬಲಿ: ಜಾಹೀರಾತು ಸಂಸ್ಥೆ ನಿರ್ಲಕ್ಷ್ಯ ಕಾರಣ ಎಂದ ಬೆಸ್ಕಾಂ!
ಟೆಸ್ಟ್ ಡ್ರೈವ್'ಗೆಂದು ಕಾರು ತೆಗೆದುಕೊಂಡು ಹೋಗಿದ್ದ ವೆಂಕಟೇಶ್ ಮರಳಿ ಬರುವಿಕೆಗಾಗಿ ರವೀಂದ್ರ ಅವರು ಒಂದು ದಿನ ಕಾದು ನೋಡಿದ್ದಾರೆ. ಆದರೆ, ಹಿಂತಿರುಗಿ ಬಾರದದಿದ್ದಕ್ಕೆ ಪೊಲೀಸರಿಗೆ ರವೀಂದ್ರ ದೂರುನೀಡಿದ್ದಾರೆ.
ಬಳಿಕ ಪೊಲೀಸರು ಆರೋಪಿ ಪತ್ತೆಯಗಾಗಿ ಓಎಲ್ಎಕ್ಸ್ ಕಂಪನಿಸಂಪರ್ಕಿಸಿ ಸುಮಾರು ಎರಡೂವರೆ ಸಾವಿರ ಓಎಲ್ಎಕ್ಸ್ ಐಪಿಎಡ್ರೆಸ್ ಜಾಲಾಡಿದ್ದಾರೆ. ಈ ಪೈಕಿ 2 ಐಪಿ ಎಡ್ರೆಸ್ ಗಳ ಬಗ್ಗೆ ಅನುಮಾನ ಬಂದು ತಾಂತ್ರಿಕ ತನಿಖೆ ಮಾಡಿದಾಗ ಆರೋಪಿಯ ಜಾಡು ಸಿಕ್ಕಿದೆ. ದಾಸರಹಳ್ಳಿ ಮುಖ್ಯರಸ್ತೆಯಲ್ಲಿ ಆರೋಪಿಯು ಓಡಾಡುತ್ತಿರುವ ಬಗ್ಗೆ ದೊರೆತ ಸುಳುವಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕತ್ತಿ ತೋರಿಸಿ ಚಿನ್ನಾಭರಣ ದರೋಡೆ ಮಾಡಿದ್ದ ನಟೋರಿಯಸ್ ರೌಡಿ ಬಂಧನ
ಬಳಿಕ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ತ್ವರಿತ ಹಣಗಳಿಸಲು ಆರೋಪಿ ಕದ್ದ ಕಾರುಗಳನ್ನು ಮಾರಾಟ ಮಾಡುತ್ತಿದ್ದ. ಈ ಹಿಂದೆ ಕೂಡ ಹಲವು ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.