
ಸಂಗ್ರಹ ಚಿತ್ರ
ಬೆಂಗಳೂರು: ಅಡುಗೆ ಮನೆಯಲ್ಲಿನ ಅತ್ಯಗತ್ಯ ವಸ್ತುಗಳಲ್ಲೊಂದಾಗಿರುವ ಟೊಮೆಟೋ ದರ ಗಗನಕ್ಕೇರಿದ್ದು, ಪ್ರತಿ ಕಿಲೋ ಟೊಮೆಟೋ ಬೆಲೆ ರೂ.90ಕ್ಕೆ ಏರಿಕೆಯಾಗಿದೆ.
ಭಾನುವಾರದಂದು ಹಾಪ್ಕಾಮ್ಸ್ ಮಳಿಗೆಗಳಲ್ಲಿ ಪ್ರತಿ ಕಿಲೋ ಟೊಮೆಟೋ ದರವು 75 ರೂ ಆಗಿದ್ದರೂ, ಚಿಲ್ಲರೆ ವ್ಯಾಪಾರದಲ್ಲಿ, ನಾಟಿ ಮತ್ತು ಫಾರ್ಮ್ಗಳ ಬೆಲೆಗಳು ಗಾತ್ರವನ್ನು ಅವಲಂಬಿಸಿ 80-90 ರೂಗೆ ಏರಿಕೆ ಮಾಡಲಾಗಿದೆ.
ಬೆಲೆ ಏರಿಕೆಯಿಂದ ಆತಂಕಗೊಂಡಿರುವ ಹಾಪ್ಕಾಮ್ಸ್ ಅಧಿಕಾರಿಗಳು ಬೆಲೆಗಳನ್ನು ಹೇಗೆ ಕಡಿಮೆ ಮಾಡಬಹುದು ಮತ್ತು ಹೇಗೆ ನಿಯಂತ್ರಿಸಬಹುದು ಎಂಬುದರ ಕುರಿತು ಚಿಂತನೆಗಳ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಕೋವಿಡ್ ಗೂ ಟೊಮೆಟೋ ಜ್ವರಕ್ಕೂ ಯಾವುದೇ ಸಂಬಂಧವಿಲ್ಲ, ಯಾರೂ ಆತಂಕಪಡುವ ಅಗತ್ಯವಿಲ್ಲ: ಡಾ ಕೆ ಸುಧಾಕರ್
ಚಿಲ್ಲರೆ ವ್ಯಾಪಾರಿಗಳು ಮಾತನಾಡಿ, ನಮಗೂ ಹೆಚ್ಚಿನ ಬೆಲೆಗೆ ಟೊಮೆಟೋ ಸಿಗುತ್ತಿದ್ದು, ಖರೀದಿ ಕಷ್ಟಸಾಧ್ಯವಾಗುತ್ತಿದೆ. ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಬೆಲೆ ಏರಿಕೆ ಮತ್ತು ಬೇಡಿಕೆಯ ಕುಸಿತವಾಗುತ್ತಿರುವ ಹಿನ್ನೆಲಯಲ್ಲಿ ತಳ್ಳಗಾಡಿ ವ್ಯಾಪಾರಿಗಳು ಟೊಮೆಟೋ ಮಾರಾಟವನ್ನೇ ಸ್ಥಗಿತಗೊಳಿಸಿದ್ದಾರೆ.
ನನ್ನ ಮಗಳಿಗೆ ಟೊಮೆಟೋ ಕರ್ರಿ ಎಂದರೆ ಬಹಳ ಇಷ್ಟ. ಆದರೆ, ಟೊಮೆಟೋ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಟೊಮೆಟೋ ಖರೀದಿ ನಿಲ್ಲಿಸಿ, ಅಡುಗೆಗೆ ಟೊಮೆಟೋ ಕೆಟ್ಚಪ್ ಗಳನ್ನು ಬಳಕೆ ಮಾಡುತ್ತಿದ್ದೇನೆಂದು ಗೃಹಿಣಿ ನುಪೂರ್ ಎಂಬುವವರು ಹೇಳಿದ್ದಾರೆ.
ದಿನಗೂಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿರುವ ಶಾಂತಿ ಎಂಬುವವರು ಮಾತನಾಡಿ, ಟೊಮೆಟೋ ದರ ಏರಿಕೆಯಾಗುತ್ತಿದ್ದು, ದರ ಕಡಿಮೆ ಇರುವ ಹಾಗೂ ಅಗತ್ಯ ವಸ್ತುಗಳನ್ನು ಮಾತ್ರ ಖರೀದಿ ಮಾಡಲು ನಿರ್ಧರಿಸಿದ್ದೇನೆಂದು ಹೇಳಿದ್ದಾರೆ.
ಈ ನಡುವೆ ರೈತರು ಹಾಗೂ ವಿತರಕರು ಮಾತನಾಡಿ, ಅತಿವೃಷ್ಟಿಯಿಂದ ಬೆಳೆಗಳು ಹಾನಿಗೊಳಗಾಗಿವೆ. ಹೀಗಾಗಿ ದರ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.