
ರಥದ ಚಕ್ರಕ್ಕೆ ಸಿಲುಕಿ ಇಬ್ಬರ ಸಾವು
ಗುಂಡ್ಲುಪೇಟೆ: ಪಾರ್ವಾಂತಾಂಬ ಜಾತ್ರೆ ವೇಳೆ ದುರಂತ ಸಂಭವಿಸಿದ್ದು, ರಥದ ಚಕ್ರ ಹರಿದು ಇಬ್ಬರ ಸಾವನ್ನಪ್ಪಿರುವ ಘಟನೆ ಭಾನುವಾರ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಪಾರ್ವತಿ ಬೆಟ್ಟದಲ್ಲಿ ಭಾನುವಾರ ನಡೆದ ಜಾತ್ರಾ ಮಹೋತ್ಸವದಲ್ಲಿ ರಥದ ಚಕ್ರ ಹರಿದು ಇಬ್ಬರು ಮೃತ ಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ತಾಲೂಕಿನ ಕಂದೇಗಾಲ ಗ್ರಾಮದ ಸರ್ಪಭೂಷಣ್ (27) ಮೃತ ಯುವಕ. ಅದೇ ಗ್ರಾಮದ ಸ್ವಾಮಿ (40) ಹಾಗೂ ಕೊಡಸೋಗೆ ಗ್ರಾಮದ ಕರಿನಾಯಕ (50) ಎಂಬುವವರ ಕಾಲು ಮುರಿದಿದೆ.
Two persons killed when decorated car ran over one person and other in stampede during car festival held after two yrs at Pravathi hills near Gundlupet, Karnataka. Tye villagers accuse if police failure @XpressBengaluru @Cloudnirad @santwana99 pic.twitter.com/VeVdW81hOr
— K Shiva Kumar (@ShivascribeTNIE) May 15, 2022
ಜಾತ್ರೆಯ ಅಂಗವಾಗಿ ನಡೆದ ರಥೋತ್ಸವದ ಸಂದರ್ಭದಲ್ಲಿ ಭಕ್ತರು ಒಮ್ಮೆಲೆ ತೇರು ಎಳೆದಿದ್ದರಿಂದ, ರಥ ವೇಗವಾಗಿ ಮುಂದೆ ಚಲಿಸಿತು. ಈ ವೇಳೆ ನೂಕು ನುಗ್ಗಲು ಉಂಟಾಗಿ ಸರ್ಪಭೂಷಣ್ ಮತ್ತು ಇತರರು ರಥದ ಕೆಳಗೆ ಬಿದ್ದು ಚಕ್ರಕ್ಕೆ ಸಿಲುಕಿದರು. ರಥವು ಅವರ ಮೇಲೆ ಹರಿದ ಪರಿಣಾಮ ಸರ್ಪಭೂಷಣ್ ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇನ್ನಿಬ್ಬರ ಕಾಲಿನ ಮೇಲೆ ತೇರು ಹರಿದಿದ್ದರಿಂದ ಕಾಲು ಮುರಿದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಗೊಂಡವರಿಗೆ ಪಟ್ಟಣದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆನೀಡಿ, ಮೈಸೂರಿಗೆ ಕಳುಹಿಸಲಾಗಿದೆ. ಶಾಸಕ ಸಿ.ಎಸ್. ನಿರಂಜನ ಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.