ರಾಷ್ಟ್ರಗೀತೆ ಹಾಡೋದನ್ನ ಮುತಾಲಿಕ್ ಹೇಳಿಕೊಡಬೇಕಾ?: ಜಮೀರ್ ಅಹ್ಮದ್ ಖಾನ್
ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಪಡಿಸಬೇಕೆಂಬ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿಕೆಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಕಿಡಿಕಾರಿದ್ದಾರೆ. ರಾಷ್ಟ್ರಗೀತೆ ಹಾಡೋದನ್ನು ಅವರಿಂದ ಕಲಿಯಬೇಕಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
Published: 16th May 2022 07:40 PM | Last Updated: 16th May 2022 08:04 PM | A+A A-

ಜಮೀರ್ ಅಹ್ಮದ್ ಖಾನ್
ಬೆಂಗಳೂರು: ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಪಡಿಸಬೇಕೆಂಬ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿಕೆಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಕಿಡಿಕಾರಿದ್ದಾರೆ. ರಾಷ್ಟ್ರಗೀತೆ ಹಾಡೋದನ್ನು ಅವರಿಂದ ಕಲಿಯಬೇಕಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ಪೆನ್ಷನ್ ಮೊಹಲ್ಲಾದಲ್ಲಿ ಉರ್ದು ಬಾಲಕಿಯರ ಮಾದರಿ ಪ್ರಾಥಮಿಕ ಪಾಠಶಾಲೆ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್ ಖಾನ್, ರಾಷ್ಟ್ರಗೀತೆಯೊಂದಿಗೆ ನಾವು ಶಾಲೆ ಆರಂಭಿಸಿದ್ದೇವೆ. ನಾವು ಹಿಂದಿನಿಂದಲೂ ರಾಷ್ಟ್ರಗೀತೆ ಹಾಡಿಕೊಂಡೆ ಬರುತ್ತಿದ್ದೇವೆ. ಆದರೆ, ಬೇಕೆಂತಲೇ ಉರ್ದು ಶಾಲೆಯಲ್ಲಿ ರಾಷ್ಟ್ರಗೀತೆ ಹಾಡುತ್ತಿಲ್ಲ ಎನ್ನುವ ವಿವಾದ ಸೃಷ್ಟಿಸಲಾಗುತ್ತಿದೆ ಎಂದರು.
ನಮ್ಮ ರಾಷ್ಟ್ರ ಮತ್ತು ನಮ್ಮ ರಾಷ್ಟ್ರಗೀತೆ ನಮ್ಮ ಹೆಮ್ಮೆ. ಪ್ರಮೋದ್ ಮುತಾಲಿಕ್ ಅವರಿಂದ ನಾವು ರಾಷ್ಟ್ರಗೀತೆ ಹಾಡುವುದನ್ನು ಕಲಿಯಬೇಕಿಲ್ಲ. ಇದೆಲ್ಲಾ ಮುಂಬರುವ ವಿಧಾನಸಭಾ ಚುನಾವಣೆಯ ಗಿಮಿಕ್ ಎಂದು ಜಮೀರ್ ಅಹ್ಮದ್ ಖಾನ್, ಪ್ರಮೋದ್ ಮುತಾಲಿಕ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಟೀಂನ ವೈಸ್ ಕ್ಯಾಪ್ಟನ್ ಗೋರಿ ಪಾಳ್ಯದ ಬಸ್ಸು ಜಮೀರಣ್ಣ, ಡಿಕೆ ಟೀಂನ ಉಪಾಧ್ಯಕ್ಷ ನಲಪಾಡ್, ಇಬ್ಬರಿಗೂ ಸಾಬ್ರೇ ಬೇಕು!
ನಾವು ಭಾರತಾಂಬೆಯ ಮಕ್ಕಳು. ನಮಗೂ ರಾಷ್ಟ್ರ ಮತ್ತು ರಾಷ್ಟ್ರಗೀತೆಯ ಮೇಲೆ ಅಪಾರ ಗೌರವ ಅಭಿಮಾನ ಇದೆ. ಉರ್ದು ಶಾಲೆಗಳಲ್ಲಿ ರಾಷ್ಟ್ರಗೀತೆ ಹಾಡುತ್ತಿಲ್ಲ ಎಂದು ಸುಳ್ಳು ಆರೋಪಿಸಿ ವಿಷಬೀಜ ಬಿತ್ತಲಾಗುತ್ತಿದೆ. ಇದು ಕೇವಲ ರಾಜಕೀಯ ಗಿಮಿಕ್ ಎಂದು ಜಮೀರ್ ಅಹ್ಮದ್ ಖಾನ್ ಟ್ವೀಟ್ ಮಾಡುತ್ತಿದ್ದಾರೆ.
ನಾವೂ ಭಾರತಾಂಬೆಯ ಮಕ್ಕಳು. ನಮಗೂ ರಾಷ್ಟ್ರ ಮತ್ತು ರಾಷ್ಟ್ರಗೀತೆಯ ಮೇಲೆ ಅಪಾರ ಗೌರವ, ಅಭಿಮಾನ ಇದೆ. ಉರ್ದು ಶಾಲೆಗಳಲ್ಲಿ ರಾಷ್ಟ್ರಗೀತೆ ಹಾಡುತ್ತಿಲ್ಲ ಎಂದು ಸುಳ್ಳು ಆರೋಪಿಸಿ ವಿಷಬೀಜ ಬಿತ್ತಲಾಗುತ್ತಿದೆ. ಇದು ಕೇವಲ ರಾಜಕೀಯ ಗಿಮಿಕ್. 2/2#ನಮ್ಮರಾಷ್ಟ್ರಮತ್ತುರಾಷ್ಟ್ರಗೀತೆನಮ್ಮಹೆಮ್ಮೆ
— B Z Zameer Ahmed Khan (@BZZameerAhmedK) May 16, 2022