
ಕುರಿಗಳ ಸಾವು
ಚಿತ್ರದುರ್ಗ: ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಇಂದು ಚಿತ್ರದುರ್ಗದಲ್ಲಿ ಸಿಡಿಲಿಗೆ 150 ಕುರಿಗಳು, 1 ಎತ್ತು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.
ಏಕಾಏಕಿ ಸೋಮವಾರ ಸಂಜೆ ಚಿತ್ರದುರ್ಗ (Chitradurga) ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಹಲವೆಡೆ ಸುರಿದ ಧಾರಾಕಾರ ಮಳೆಗೆ (Rain) ರೈತರು (Farmers) ತತ್ತರಿಸುವಂತೆ ಮಾಡಿದೆ. ಸಿಡಿಲು (Thunderbolt), ಗುಡುಗು ಸಹಿತ ಮಳೆ ಆರ್ಭಟಕ್ಕೆ ರಾಸು ಜಾನುವಾರುಗಳು ನೆಲಕಪ್ಪಳಿಸಿ ಸಾವನ್ನಪ್ಪಿರೋ ದಾರುಣ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಅಡವಿಮಲ್ಲಾಪುರ ಗ್ರಾಮದಲ್ಲಿ 150 ಕುರಿಗಳು ಸಿಡಿಲಿಗೆ ಬಲಿಯಾಗಿವೆ.
Over 150 cattle dead in #Chitradurga due to lightening, heavy down pour. Investigation on@NewIndianXpress @XpressBengaluru @KannadaPrabha @Cloudnirad @IMDWeather @metcentre_bng @KarnatakaSNDMC @Amitsen_TNIE @S27chandr1_TNIE @NammaKarnataka_ @NammaBengaluroo @CMofKarnataka pic.twitter.com/kLaCA4LVtD
— Bosky Khanna (@BoskyKhanna) May 16, 2022
ಜಮೀನಿನಲ್ಲಿ ಕುರಿ ಮೇಯಿಸಲು ತೆರಳಿದ್ದ ರೈತರಿಗೆ ವರುಣ ದೇವ ಬಿಗ್ ಶಾಕ್ ಕೊಟ್ಟಿದ್ದು, ಸುಮಾರು 114, ಮೇಕೆಗಳು, 39 ಕುರಿಗಳು, 1 ಹಸು ಸಾವನ್ನಪ್ಪಿವೆ. ಮೃತ ಜಾನುವಾರುಗಳು ರೈತ ಪಾಪಯ್ಯ, ಬಯ್ಯಣ್ಣ, ಹಾಗೂ ನಾಲ್ವರು ರೈತರಿಗೆ ಸೇರಿದವಾಗಿವೆ. ಎಂದಿನಂತೆ ನಿತ್ಯ ಕುರಿ, ಮೇಕೆಗಳನ್ನು ಮೇಯಿಸಲು ಜಮೀನಿಗೆ ರೈತರು ತೆರಳಿದ್ದರು. ಕುರಿಗಳು ಬಯಲಿನಲ್ಲಿ ಮೇಯುತ್ತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದಿದ್ದು, ಈ ವೇಳೆ ಅಲ್ಲಿದ್ದ ಕುರಿಗಳು ಸಾವನ್ನಪ್ಪಿವೆ. ತಮ್ಮ ಕಣ್ಣೆದೆರೇ ನಡೆದ ದುರ್ಘಟನೆ ನೋಡಿ ರೈತರು ಕಣ್ಣೀರು ಹಾಕ್ತಿದ್ದಾರೆ. ಸರಿ ಸುಮಾರು 150ಕ್ಕೂ ಅಧಿಕ ಜಾನುವಾರುಗಳು ಏಕಕಾಲದಲ್ಲೇ ಸಾವನ್ನಪ್ಪಿರೋದಕ್ಕೆ ಲಕ್ಷಾಂತರ ರೂಪಾಯಿ ನಷ್ಟಕ್ಕೆ ರೈತರು ಸಿಲುಕಿದ್ದಾರೆ.
ಅಷ್ಟೇ ಅಲ್ಲದೇ ಚಿಕ್ಕೇರಹಳ್ಳಿ ಗ್ರಾಮದ ರೈತ ಮಹಿಳೆ ಈರಮ್ಮ ಎಂಬಾಕೆಗೆ ಸೇರಿದ ಒಂದು ಎತ್ತು ಕೂಡ ಬರ ಸಿಡಿಲಿನ ಆರ್ಭಟಕ್ಕೆ ಸಿಲುಕಿ ಸಾವನ್ನಪ್ಪಿದೆ.