ಬೆಂಗಳೂರಿನಲ್ಲಿ 2,108 ಗುಂಡಿಗಳಿಗೆ ದೀರ್ಘಾವಧಿ ದುರಸ್ತಿ ಕಾರ್ಯದ ಅಗತ್ಯವಿದೆ: ಪಿ.ಎನ್.ರವೀಂದ್ರ
ಬೆಂಗಳೂರು ನಗರದಲ್ಲಿ ಈವರೆಗೆ 10,282 ಗುಂಡಿಗಳ ಸಮೀಕ್ಷೆ ನಡೆಸಲಾಗಿದ್ದು, ಎಣಿಕೆ ಕಾರ್ಯ ಮುಂದುವರೆದಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯೋಜನೆಗಳ ವಿಶೇಷ ಆಯುಕ್ತ ಪಿ ಎನ್ ರವೀಂದ್ರ ಅವರು ಮಂಗಳವಾರ ಹೇಳಿದ್ದಾರೆ.
Published: 18th May 2022 12:15 PM | Last Updated: 18th May 2022 12:29 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಬೆಂಗಳೂರು ನಗರದಲ್ಲಿ ಈವರೆಗೆ 10,282 ಗುಂಡಿಗಳ ಸಮೀಕ್ಷೆ ನಡೆಸಲಾಗಿದ್ದು, ಎಣಿಕೆ ಕಾರ್ಯ ಮುಂದುವರೆದಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯೋಜನೆಗಳ ವಿಶೇಷ ಆಯುಕ್ತ ಪಿ ಎನ್ ರವೀಂದ್ರ ಅವರು ಮಂಗಳವಾರ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಸ್ತೆ ಗುಂಡಿಗಳನ್ನು ಮುಚ್ಚುವುದು ಬಿಬಿಎಂಪಿಗೆ ಸದ್ಯದ ಅಗತ್ಯವಾಗಿದ್ದು, ಅವುಗಳನ್ನು ಮುಚ್ಚಲು ಪಾಲಿಕೆ ಮುಂದಾಗಿದೆ. 10,282 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದೆ. 202 ರಸ್ತೆ ಗುಂಡುಗಳು ಗಂಭೀರ ಸ್ವರೂಪದ ಗುಂಡಿಗಳು ಎಂದು ಗುರುತಿಸಲಾಗಿದ್ದು, ಈ ಗುಂಡಿಗಳನ್ನು ಮುಚ್ಚಲು ದೀರ್ಘಾವ ಯೋಜನೆ ರೂಪಿಸಬೇಕಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರಿನ ಮಳೆ ಅವಾಂತರ ಸ್ಥಿತಿಗತಿ ಅರಿಯಲು ಖುದ್ದು ಭೇಟಿ ನೀಡುತ್ತೇನೆ, ಬಿಬಿಎಂಪಿ ಕಂಟ್ರೋಲ್ ರೂಂ ಸ್ಥಾಪನೆ: ಸಿಎಂ ಬೊಮ್ಮಾಯಿ
‘ಎಂಜಿನಿಯರ್ಗಳಿಂದ ಬರುವ ಬೇಡಿಕೆ ಆಧರಿಸಿ ಪಾಲಿಕೆಯ ಬಿಸಿ ಡಾಂಬರು ಮಿಶ್ರ ಮಾಡುವ ಘಟಕದಿಂದ ಡಾಂಬರು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತದೆ. ಸ್ಥಳೀಯ ಸಹಾಯಕ ಎಂಜಿನಿಯರ್ಗಳು ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗಳು ರಸ್ತೆ ಗುಂಡಿ ಮುಚ್ಚುವ ಕಾರ್ಯದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಜೊತೆ ಮುಚ್ಚಿರುವ ರಸ್ತೆಗುಂಡಿಗಳನ್ನು ಆಯಾ ವಲಯ ಆಯುಕ್ತರು, ಮುಖ್ಯ ಎಂಜಿನಿಯರ್ಗಳು, ಕಾರ್ಯಪಾಲಕ ಎಂಜಿನಿಯರ್ಗಳೂ ಪರಿಶೀಲಿಸುತ್ತಾರೆ’ ಎಂದು ತಿಳಿಸಿದರು.
ರಸ್ತೆ ಗುಂಡಿ ನಿರ್ವಹಣೆಗೆ ಎಇಇ ಅವರು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಮೂಲಕ ದೂರು ನೀಡಲು ಸೂಚನೆ ನೀಡಲಾಗಿದೆ. ಆ ಮೂಲಕ ಬಂದ ದೂರನ್ನು ಪರಿಗಣಿಸಿ ಬಿಬಿಎಂಪಿ ಕಾರ್ಯೋನ್ಮುಖವಾಗುತ್ತಿದೆ ಎಂದರು.