ಬೆಂಗಳೂರು ಮಳೆಗೆ ಮೃತಪಟ್ಟ ಇಬ್ಬರು ಕಾರ್ಮಿಕರ ಕುಟುಂಬಕ್ಕೆ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ಪ್ರಕಟ
ನಿನ್ನೆಯ ಮಳೆಗೆ ಉಲ್ಲಾಳ ಸಮೀಪ ಪೈಪ್ ಲೈನ್ ನಲ್ಲಿ ಸಿಲುಕಿ ಮೃತಪಟ್ಟ ಇಬ್ಬರು ಕಾರ್ಮಿಕರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
Published: 18th May 2022 01:09 PM | Last Updated: 18th May 2022 02:23 PM | A+A A-

ರಾಜರಾಜೇಶ್ವರಿ ನಗರದ ಆರ್ ಆರ್ ವಾರ್ಡ್ ನಲ್ಲಿ ಸಿಎಂ ಬೊಮ್ಮಾಯಿ ಹಾಗೂ ಇತರರು ಪ್ರವಾಹ ಪೀಡಿತ ಪ್ರದೇಶಗಳನ್ನು ತಪಾಸಣೆ ನಡೆಸಿದರು.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಲವಾರು ತಗ್ಗು ಪ್ರದೇಶಗಳಿಂದ ಭಾರೀ ಮಳೆಯಾದಾಗ ಮೇಲುಗಡೆಯಿಂದ ತಗ್ಗು ಪ್ರದೇಶಗಳಿಗೆ ನೀರು ಹರಿದುಬರುತ್ತದೆ. ಭೌಗೋಳಿಕವಾಗಿ ಭೂಪ್ರದೇಶಗಳ ರಚನೆಯೇ ಹಾಗಿದೆ. ಇನ್ನು ರಾಜಕಾಲುವೆ ಒತ್ತುವರಿ ಮಾಡಿ ಅಲ್ಲಿ ಮನೆಗಳನ್ನು ಕಟ್ಟಿಕೊಂಡಿರುವುದರಿಂದ ನೀರು ಹೋಗಲು ಅವಕಾಶ ಸಿಗದೆ ಮನೆಗಳಿಗೆ ನೀರು ನುಗ್ಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
.@CMofKarnataka @RAshokaBJP @CTRavi_BJP inspect Dattatreya ward, RR Nagar flood affected areas to take stock of damage@NewIndianXpress @XpressBengaluru @KannadaPrabha @Cloudnirad @rrnagaricare @NammaBengaluroo @namma_BTM @BAFBLR @BBMPCOMM @BSKRising @_kanakapuraroad @Namma_ORRCA pic.twitter.com/3FbpppjiXu
— Bosky Khanna (@BoskyKhanna) May 18, 2022
ತೀವ್ರ ಮಳೆಯಾದ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇ ಔಟ್ ಗೆ ಅಧಿಕಾರಿಗಳು ಹಾಗೂ ಸಂಪುಟ ಸಹೋದ್ಯೋಗಿಗಳೊಂದಿಗೆ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಈ ಪ್ರದೇಶದಲ್ಲಿ 15-20 ಜನರ ಮನೆಗಳಿಗೆ ನುಗ್ಗಿದೆ. ಮಳೆ ಬಂದಾಗ ನೀರು ನುಗ್ಗುದಂತೆ ಮಾಡಲು ರಾಜಕಾಲುವೆಗಳಿಂದ ಹೊರಗೆ ನೀರು ಹೋಗುವಂತೆ ಮಾಡಬೇಕು. ಹಲವಾರು ಕಡೆ ರಾಜಕಾಲುವೆ ನೀರು ಹೋಗಿ ಒಂದು ಕಡೆ ನಿಲ್ಲುವಂತಹ ಪರಿಸ್ಥಿತಿಯಿದೆ, ಅವುಗಳನ್ನು ಗುರುತಿಸಿ ಕಾಮಗಾರಿ ಮಾಡುತ್ತೇವೆ. ಈ ವರ್ಷದಲ್ಲಿ ರಾಜಕಾಲುವೆ ತೆರವು ಕಾರ್ಯಾಚರಣೆ ಮಾಡಲು ಸೂಚನೆ ನೀಡಲಾಗಿದ್ದು ಅದಕ್ಕೆ 16 ಕೋಟಿ ರೂಪಾಯಿ ಒದಗಿಸಲಾಗಿದೆ ಎಂದರು.
ಇದನ್ನೂ ಓದಿ: ರಾಜಕಾಲುವೆ ಒತ್ತುವರಿಯಿಂದ ಮಳೆ ಅನಾಹುತ, ಮನೆಗೆ ನೀರು ನುಗ್ಗಿ ಹಾನಿಯಾದವರಿಗೆ 25 ಸಾವಿರ ರೂ. ಪರಿಹಾರ: ಸಿಎಂ ಬೊಮ್ಮಾಯಿ
ತಗ್ಗು ಪ್ರದೇಶಗಳಲ್ಲಿ, ಕೆರೆಗಳನ್ನು ಒತ್ತುವರಿ ಮಾಡಿ ಅಲ್ಲಿ ಮನೆಗಳನ್ನು ಕಟ್ಟಿಕೊಂಡಿರುವುದನ್ನು ಪತ್ತೆ ಹಚ್ಚುತ್ತೇವೆ. ಮುಖ್ಯ ಕಾಲುವೆ ಜೊತೆಗೆ ಎರಡನೇ ಕಾಲುವೆಗಳನ್ನು ಪತ್ತೆಹಚ್ಚಿ ವಾರ್ಡ್ ಗಳಲ್ಲಿರುವ ಚರಂಡಿಗಳನ್ನು ಸರಿಪಡಿಸಲು ಕ್ರಮಕೈಗೊಳ್ಳುತ್ತೇವೆ. ರಾಜಕಾಲುವೆ 800 ಕಿಲೋ ಮೀಟರ್ ಇವೆ, ಈಗ 400 ಕಿಲೋ ಮೀಟರ್ ಕಾಮಗಾರಿ ಕೈಗೊಳ್ಳುತ್ತೇವೆ ಎಂದರು.
ಸರ್ಕಾರದಿಂದ ಪರಿಹಾರ: ಮನೆಗಳಿಗೆ ನೀರು ನುಗ್ಗಿ ಅನಾಹುತರಾದ ಕುಟುಂಬಸ್ಥರಿಗೆ ತಲಾ 25 ಸಾವಿರ ರೂಪಾಯಿ ಹಾಗೂ ನಿನ್ನೆ ಮಳೆಗೆ ಉಲ್ಲಾಳ ಸಮೀಪ ಪೈಪ್ ಲೈನ್ ನಲ್ಲಿ ಸಿಲುಕಿ ಮೃತಪಟ್ಟ ಇಬ್ಬರು ಕಾರ್ಮಿಕರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ ಸಂದರ್ಭದಲ್ಲಿ ಪ್ರಕಟಿಸಿದರು.
#BengaluruRains
— TNIE Karnataka (@XpressBengaluru) May 18, 2022
When it rains, Bengaluru city road turns into stream. Our News Photographer @shrirambn captures glimpse of Vaddarapalya in Horamavu which was flooded for Tuesday heavy rain.@NewIndianXpress @Cloudnirad pic.twitter.com/ACUok4ccb2