ನಟಿ ಚೇತನಾ ರಾಜ್ ಸಾವು: ಪರವಾನಗಿ ಇಲ್ಲದೇ ಶಸ್ತ್ರಚಿಕಿತ್ಸೆ?; ಶೆಟ್ಟಿ ಕಾಸ್ಮೆಟಿಕ್ ಸೆಂಟರ್ ಗೆ ನೋಟಿಸ್!!
ನಟಿ ಚೇತನಾ ರಾಜ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಿಂದ ಶೆಟ್ಟಿ ಕಾಸ್ಮೆಟಿಕ್ ಸೆಂಟರ್ ಗೆ ನೋಟಿಸ್ ಜಾರಿ ಮಾಡಲಾಗಿದೆ.
Published: 18th May 2022 08:02 PM | Last Updated: 18th May 2022 08:04 PM | A+A A-

ನಟಿ ಚೇತನಾ ರಾಜ್
ಬೆಂಗಳೂರು: ನಟಿ ಚೇತನಾ ರಾಜ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಿಂದ ಶೆಟ್ಟಿ ಕಾಸ್ಮೆಟಿಕ್ ಸೆಂಟರ್ ಗೆ ನೋಟಿಸ್ ಜಾರಿ ಮಾಡಲಾಗಿದೆ.
Karnataka | District Health Officer Bengaluru Urban serves notice to Shetty's Cosmetic Centre, in connection with the death of Kannada actor Chethana Raj after the fat removal surgery.
— ANI (@ANI) May 18, 2022
ಕೊಬ್ಬನ್ನು ತೆಗೆಯುವ ಶಸ್ತ್ರಚಿಕಿತ್ಸೆ (ಲೈಪೋ ಸಕ್ಷನ್)ಯ ನಂತರ ಕನ್ನಡ ನಟಿ ಚೇತನ ರಾಜ್ ಅವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಆರೋಗ್ಯಾಧಿಕಾರಿ ಅವರು ಶೆಟ್ಟಿ ಸೌಂದರ್ಯವರ್ಧಕ ಕೇಂದ್ರಕ್ಕೆ ನೋಟಿಸ್ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಬೆಂಗಳೂರು ಜಿಲ್ಲಾ ಆರೋಗ್ಯಾಧಿಕಾರಿಗಳು, 'ಶೆಟ್ಟಿ ಸೌಂದರ್ಯವರ್ಧಕ ಕೇಂದ್ರವು ಪಾಲಿಕ್ಲಿನಿಕ್ ಮತ್ತು ಡಿಸ್ಪೆನ್ಸರಿಯನ್ನು ನಡೆಸಲು ಮಾತ್ರ ಪರವಾನಗಿಯನ್ನು ಹೊಂದಿತ್ತು, ಅವರು ಚೇತನಾ ರಾಜ್ ಅವರಿಗೆ ನಡೆಸಲಾದ ಶಸ್ತ್ರಚಿಕಿತ್ಸೆಯ ಕಾರ್ಯವಿಧಾನಕ್ಕಾಗಿ ಅಲ್ಲ. ಹೀಗಾಗಿ ಅವರು ಈ ಘಟನೆಯ ಕುರಿತು ಲಿಖಿತ ವಿವರಣೆಯನ್ನು ಸಲ್ಲಿಸಬೇಕಾಗಿದೆ. ಸ್ಪಂದಿಸದಿದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು' ಎಂದು ಎಚ್ಚರಿಕೆ ನೀಡಿದ್ದಾರೆ.
Shetty's Cosmetic Centre had license only to run a polyclinic&dispensary, not for procedure they did (on Chethana Raj). They need to submit a written explanation of this incident. If they don't respond, necessary action will be taken: District Health Officer, Bengaluru Urban Dist pic.twitter.com/uDorBcEFZL
— ANI (@ANI) May 18, 2022
ಚೇತನಾ ಪರ ದೂರು ನೀಡಿರುವ ಅವರ ತಂದೆ ವರದರಾಜು, ವೈದ್ಯರ ನಿರ್ಲಕ್ಷ್ಯ ದಿಂದಲೇ ಮಗಳು ಚೇತನಾ ಸಾವನ್ನಪ್ಪಿರುವುದಾಗಿ ಆರೋಪಿಸಿದ್ದಾರೆ. ಡಾ.ಸಾಹೇಬ್ ಗೌಡ ಶೆಟ್ಟಿ, ಡಾ.ಶೆಟ್ಟಿ ಕಾಸ್ಮಿಟಿಕ್ ಸೆಂಟರ್ ಮೇಲೆ ಗಂಭೀರ ಆರೋಪ ಮಾಡಲಾಗಿದ್ದು, ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ಸಿಆರ್ ಪಿಸಿ 174(C) ಅಡಿ UDR (Unnatural Death Report) ದಾಖಲಾಗಿದೆ. ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಲಿದ್ದು, ಆರೋಪ ಸಾಬೀತಾದಲ್ಲಿ ಐಪಿಎಸ್ ಸೆಕ್ಷನ್ ಅಡಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಎಫ್ಎಸ್ಎಲ್ ರಿಪೋರ್ಟ್, ಮರಣೋತ್ತರ ಪರೀಕ್ಷಾ ವರದಿ ಹಾಗೂ ವೈದ್ಯರ ಕಮಿಟಿ ನೀಡುವ ವರದಿ ಬಳಿಕ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಸುಬ್ರಹ್ಮಣ್ಯಪುರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ: ಫ್ಯಾಟ್ ಸರ್ಜರಿ ವೇಳೆ ಕನ್ನಡದ ನಟಿ ಚೇತನಾ ರಾಜ್ ಸಾವು: ಕ್ಲಿನಿಕ್ ವಿರುದ್ಧ ಕೇಸ್ ದಾಖಲು
ಚೇತನಾ ಮೃತದೇಹ ಶ್ವಾಸಕೋಶ ಸೇರಿದಂತೆ ಕೆಲ ಅಂಗಾಂಗಗಳ ಮಾದರಿ ಸಂಗ್ರಹಿಸಲಾಗಿದ್ದು, ಅದರ ಮಾದರಿಯನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆ ಸಿಬ್ಬಂದಿ ಎಫ್ಎಸ್ಎಲ್ಗೆ ರವಾನೆ ಮಾಡಲಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್ಎಸ್ಎಲ್ ರಿಪೋರ್ಟ್ ಈ ಪ್ರಕರಣದಲ್ಲಿ ಮಹತ್ವವಾಗಿದ್ದು, ಅದರ ವರದಿ ಬಂದ ಬಳಿಕವಷ್ಟೇ ಚೇತನಾ ಸಾವಿಗೆ ನಿಖರ ಕಾರಣವಾಗಿರುವ ಸಾಕ್ಷಿ ಲಭ್ಯವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: 'ಗೀತಾ, ದೊರೆಸಾನಿ' ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಕಿರುತೆರೆ ನಟಿ ಚೇತನಾ ರಾಜ್ ಫ್ಯಾಟ್ ಸರ್ಜರಿ ವೇಳೆ ಸಾವು!
ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಚೇತನಾರ ಪೋಷಕರು ನೀಡಿದ ದೂರಿನ ಪ್ರಕಾರ, ನಟಿ ಮೇ 16 ರಂದು ಫ್ಯಾಟ್ ಸರ್ಜರಿಗೆ ಒಳಗಾಗಿದ್ದರು. ಸ್ವಲ್ಪ ಸಮಯದ ನಂತರ ಅವರು ಉಸಿರಾಟದ ತೊಂದರೆ ಅನುಭವಿಸಿದ ಕಾರಣ ಕೂಡಲೇ ಅವರನ್ನು ಮಂಜುನಾಥ ನಗರದ ಕಾಡೆ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅದಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದರು. ದೂರಿನ ಆಧಾರದ ಮೇಲೆ ಸಿಆರ್ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ‘ಅಸ್ವಾಭಾವಿಕ ಮರಣ ವರದಿ’ಯ ಅಡಿಯಲ್ಲಿ (ಯುಡಿಆರ್) ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತ ವಿನಾಯಕ ಪಾಟೀಲ್ ಮಾಹಿತಿ ನೀಡಿದ್ದರು. ಚೇತನಾ ಸರ್ಜರಿಗೆ ಒಳಗಾದ ಬಗ್ಗೆ ಪೋಷಕರಿಗೆ ಮಾಹಿತಿ ಇರಲಿಲ್ಲ. ನಟಿ ಸ್ನೇಹಿತರೊಂದಿಗೆ ಸರ್ಜರಿಗೆ ತೆರಳಿದ್ದರು ಎಂದು ವರದಿಯಾಗಿದೆ.