ಬೆಂಗಳೂರಿನಲ್ಲಿ ದಾಖಲೆಯ ಮಳೆಯ ಅವಾಂತರ: ಇಬ್ಬರು ಕಾರ್ಮಿಕರು ಸಾವು, ಪೈಪ್ ಲೈನ್ ನಲ್ಲಿ ಮೃತದೇಹ
ನಿನ್ನೆ ಮಂಗಳವಾರ ಸಾಯಂಕಾಲದಿಂದ ರಾಜಧಾನಿ ಬೆಂಗಳೂರಲ್ಲಿ (Bengaluru) ಸುರಿದ ದಿಢೀರ್ ಭಾರೀ ಮಳೆಗೆ (Rain) ಆದ ಅವಾಂತರಗಳು ಒಂದೆರಡಲ್ಲ. ನಿನ್ನೆ ಮಧ್ಯಾಹ್ನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
Published: 18th May 2022 10:55 AM | Last Updated: 18th May 2022 02:19 PM | A+A A-

ಮಳೆ ನಿಂತ ಮೇಲೆ ಇಂದು ಬೆಳಗ್ಗೆ ಬಿಬಿಎಂಪಿ ಕಾರ್ಮಿಕರು ರಸ್ತೆಬದಿ ಸ್ವಚ್ಛಗೊಳಿಸುತ್ತಿರುವುದು
ಬೆಂಗಳೂರು: ನಿನ್ನೆ ಮಂಗಳವಾರ ಸಾಯಂಕಾಲದಿಂದ ರಾಜಧಾನಿ ಬೆಂಗಳೂರಲ್ಲಿ (Bengaluru) ಸುರಿದ ದಿಢೀರ್ ಭಾರೀ ಮಳೆಗೆ (Rain) ಆದ ಅವಾಂತರಗಳು ಒಂದೆರಡಲ್ಲ. ನಿನ್ನೆ ಮಧ್ಯಾಹ್ನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
ಉಲ್ಲಾಳ ಉಪನಗರದ ಉಪಕಾರ್ ಲೇಔಟ್ನಲ್ಲಿ (Upakar Layout) ಪೈಪ್ ಲೈನ್ ಕಾಮಗಾರಿ ವೇಳೆ ಈ ದುರಂತ ಸಂಭವಿಸಿದೆ. ಅವಘಡ ಸಂಭವಿಸಿದೆ. ಪೈಪ್ ಲೈನ್ ಕಾಮಗಾರಿ ಸ್ಥಳದಲ್ಲಿ ಮಳೆ ನೀರು ತುಂಬಿಕೊಂಡು ಇಬ್ಬರು ಕಾರ್ಮಿಕರು ಉಸಿರು ಕಟ್ಟಿ ಮೃತಪಟ್ಟಿದ್ದಾರೆ. ಮೂವರು ಕಾರ್ಮಿಕರು ಕೆಲಸ ಮಾಡುತ್ತಾ ಇದ್ದರು. ಅದೃಷ್ಟವಶಾತ್ ಓರ್ವ ಅಲ್ಲಿಂದ ಪಾರಾಗಿ, ಇಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಬಿಹಾರ ಮೂಲದ ದೇವ್ ಭರತ್ ಹಾಗೂ ಉತ್ತರ ಪ್ರದೇಶದ ಅಂಕಿತ್ ಕುಮಾರ್ ಅಂತ ಗುರುತಿಸಲಾಗಿದೆ. ರಾತ್ರಿಯಿಡೀ ಪೈಪ್ ಲೈನ್ನಲ್ಲೇ ಮೃತದೇಹವಿದ್ದು ಇಂದು ಬೆಳಗ್ಗೆ ಹೊರತೆಗೆಯಲಾಗಿದೆ.
ಇದನ್ನೂ ಓದಿ: ಬೆಂಗಳೂರು ಮಳೆಗೆ ಮೃತಪಟ್ಟ ಇಬ್ಬರು ಕಾರ್ಮಿಕರ ಕುಟುಂಬಕ್ಕೆ ಸರ್ಕಾರದಿಂದ ತಲಾ 5 ಲಕ್ಷ ರೂ.ಪರಿಹಾರ ಪ್ರಕಟ
ಕಾವೇರಿ ಐದನೇ ಹಂತದ ಕಾಮಗಾರಿಗಾಗಿ ಬೃಹತ್ ಪೈಪ್ ಗೆ ಒಳಗೆ ಮೂವರು ಕಾರ್ಮಿಕರು ಇಳಿದಿದ್ದರು. ಮಳೆ ಬರುತ್ತಿದ್ದಂತೆ ಕಾಮಗಾರಿಗೆ ಅಳವಡಿಕೆ ಮಾಡಿದ್ದ ಪೈಪ್ ಗೆ ನೀರು ತುಂಬಿಕೊಂಡಿದೆ. ಹೀಗಾಗಿ ಪೈಪ್ ತುಂಬಿ ಕಾಮಾಗಾರಿಗೆ ಅಗೆಯಲಾಗಿದ್ದ ಹೊಂಡಕ್ಕೂ ನೀರು ತುಂಬಿದೆ. ಮೂವರ ಪೈಕಿ ಓರ್ವ ನೀರು ತುಂಬುತ್ತಿದ್ದಂತೆ ಹೊರಕ್ಕೆ ಬಂದು ಬಚಾವ್ ಆಗಿದ್ದಾನೆ. ಆದರೆ ನೀರಿನ ರಭಸಕ್ಕೆ ಇಬ್ಬರು ಕಾರ್ಮಿಕರು ಪೈಪ್ ಒಳಗೆಯೇ ಹಲವು ದೂರ ಕೊಚ್ಚಿ ಹೋಗಿದ್ದಾರೆ. ಉಸಿರು ಕಟ್ಟಿ ಇಬ್ಬರು ಸತ್ತಿದ್ದು, ರಾತ್ರಿಯಿಡೀ ಮೃತ ದೇಹ ಅದೇ ಪೈಪ್ ಲೈನ್ ನಲ್ಲಿ ಇತ್ತು.
ಇಬ್ಬರು ಕಾರ್ಮಿಕರ ಸಾವಿಗೆ ಸಂಬಂಧಿಸಿದಂತೆ ಇಬ್ಬರು ಗುತ್ತಿಗೆದಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
2-3 ಅಡಿಯವರೆಗೆ ನೀರಿನಿಂದ ಜಲಾವೃತ: ನಗರದ ಬಹುತೇಕ ಭಾಗಗಳು 2-3 ಅಡಿ ಆಳದ ನೀರಿನಿಂದ ಜಲಾವೃತವಾಗಿವೆ, ನೀರು ಕೆಳಗೆ ಹರಿಯುವ ಪ್ರದೇಶಗಳಲ್ಲಿ ಹೂಳು, ಕೆಸರು ಮತ್ತು ಕಸ ತುಂಬಿಹೋಗಿದೆ. ಮಂಗಳವಾರ ತಡರಾತ್ರಿ ಮತ್ತು ಬುಧವಾರ ಬೆಳಗ್ಗೆ ನಗರದ ಬಹುತೇಕ ಭಾಗಗಳಲ್ಲಿ ನೀರು ಹರಿದಿರುವುದು ಮಾತ್ರವಲ್ಲದೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿಬ್ಬಂದಿ ಸ್ಥಳಕ್ಕೆ ತಲುಪಲು ಸಾಧ್ಯವಾಗದ ಕಾರಣ ಕಸ ಮತ್ತು ಹೂಳು ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಾಗರಿಕರು ಕಂಡುಬಂದರು.
ಇದನ್ನೂ ಓದಿ: ರಾಜಕಾಲುವೆ ಒತ್ತುವರಿಯಿಂದ ಮಳೆ ಅನಾಹುತ, ಮನೆಯೊಳಗೆ ನೀರು ನುಗ್ಗಿ ಹಾನಿಯಾದವರಿಗೆ 25 ಸಾವಿರ ರೂ ಪರಿಹಾರ: ಸಿಎಂ ಬೊಮ್ಮಾಯಿ ಘೋಷಣೆ
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ ನಗರದಲ್ಲಿ ಮಂಗಳವಾರ ರಾತ್ರಿ 8.30 ರಿಂದ 8.30 ರವರೆಗೆ 11cms (114.6mm) ಮಳೆ ದಾಖಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (ಕೆಎಸ್ಎನ್ಡಿಎಂಸಿ) ಪ್ರಕಾರ ಹೊರಮಾವಿನಲ್ಲಿ 155 ಮಿ ಮೀ ಗರಿಷ್ಠ ಮಳೆ ದಾಖಲಾಗಿದ್ದರೆ, ಯಲಹಂಕದಲ್ಲಿ 129 ಮಿಮೀ, ವಿದ್ಯಾಪೀಠ 127 ಮಿಮೀ, ರಾಜಮಹಲ್ 122 ಮಿಮೀ, ನಾಗಪುರ 120 ಮಿಮೀ ಮತ್ತು ಸಂಪಂಗಿರಾಮನಗರ 119 ಮಿಮೀ ಮಳೆ ದಾಖಲಾಗಿದೆ.
ಕಂಟ್ರೋಲ್ ರೂಂಗೆ ನೂರಾರು ಕರೆಗಳು: ಬಿಬಿಎಂಪಿ ನಿಯಂತ್ರಣ ಕೊಠಡಿಯ ಕೇಂದ್ರ ಕಚೇರಿಯೊಂದರಲ್ಲೇ ರಾತ್ರಿಯಿಡೀ 1500ಕ್ಕೂ ಹೆಚ್ಚು ಕರೆಗಳು ಬಂದಿವೆ. ಎಲ್ಲಾ ಎಂಟು ವಲಯಗಳ ನಿಯಂತ್ರಣ ಕೊಠಡಿಗಳಿಗೆ 8000 ಕರೆಗಳು ಬಂದಿವೆ, ಅವುಗಳಲ್ಲಿ ಹೆಚ್ಚಿನವು ತಗ್ಗು ಪ್ರದೇಶಗಳಿಗೆ, ಮನೆಗಳಿಗೆ ನೀರು ನುಗ್ಗಿದ್ದು, ಕಾರುಗಳು ಹಾನಿಗೊಳಗಾದ ಮತ್ತು ಹೂಳು ತುಂಬಿಕೊಂಡವುಗಳಿಗೆ ಸಂಬಂಧಿಸಿದವು. ನೀರನ್ನು ತೆರವುಗೊಳಿಸಲು ನೆಲಮಾಳಿಗೆಯಿಂದ ಪಂಪ್ ಮಾಡಲಾಗುವುದು, ಇಡೀ ದಿನ ತೆಗೆದುಕೊಳ್ಳುತ್ತದೆ ಎಂದು ಹಿರಿಯ ಬಿಬಿಎಂಪಿ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ. ಹೂಳು ಮತ್ತು ಕಸವನ್ನು ತೆರವುಗೊಳಿಸಲು ಸುಮಾರು 2-3 ದಿನಗಳು ಬೇಕಾಗುತ್ತದೆ. ಆದಷ್ಟು ಬೇಗ ತೆರವುಗೊಳಿಸಲು ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ದಾಖಲೆಯ ಮಳೆಯ ಅವಾಂತರ: ಇಬ್ಬರು ಕಾರ್ಮಿಕರು ಸಾವು, ಪೈಪ್ ಲೈನ್ ನಲ್ಲಿ ಮೃತದೇಹ
ಶಾಂತಿನಗರ, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ದೇವೇನಗಲ್ಲಿ ಮುಖ್ಯರಸ್ತೆ, ಕೋರಮಂಗಲ, ಇಂದಿರಾನಗರ ಮುಂತಾದ ಕಡೆಗಳಲ್ಲಿ ನೀರು ನಿಂತಿದ್ದರಿಂದ ಸಂಚಾರ ಪೊಲೀಸರು ಟ್ರಾಫಿಕ್ ನಿರ್ವಹಣೆ ಮಾಡಲು ಹರಸಾಹಸ ಪಡುತ್ತಿರುವುದು ಕಂಡು ಬಂತು. ಮಂಗಳವಾರ ರಾತ್ರಿಯಿಂದಲೇ ನೀರು ತುಂಬಿ ವಾಹನಗಳು ಜಖಂಗೊಂಡಿರುವುದರಿಂದ ವಿಮಾನ ನಿಲ್ದಾಣ ರಸ್ತೆಯಲ್ಲಿ 3 ಕಿ.ಮೀ.ವರೆಗೆ ಟ್ರಾಫಿಕ್ ಜಾಮ್ ಬುಧವಾರ ಬೆಳಗ್ಗೆಯೂ ಮುಂದುವರಿದಿದೆ. ಹೆಬ್ಬಾಳ ಮೇಲ್ಸೇತುವೆಯಲ್ಲಿ ಬುಧವಾರ ಬೆಳಗ್ಗೆಯೂ ನೀರು ನಿಂತಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು.