ಗದಗ: ಡಿಜಿಟಲ್ ನಲ್ಲೂ ಜಾನುವಾರಗಳ ಖರೀದಿ, ಮಾರಾಟ ಜೋರು!
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಮುಖಿಯಾದ ನಂತರ ಜಿಲ್ಲೆಯಲ್ಲಿ ಜಾನುವಾರುಗಳ ಮಾರಾಟ ಮತ್ತು ಖರೀದಿ ಡಿಜಿಟಲ್ ಆಗಿದೆ. ಮಾರಾಟಗಾರರು ಜಾನುವಾರುಗಳು ಮಾರುಕಟ್ಟೆಗೆ ಬರುವ ಮುನ್ನವೇ ಸೋಷಿಯಲ್ ಮೀಡಿಯಾದಲ್ಲಿ ಫೋಟೋದೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.
Published: 19th May 2022 02:02 PM | Last Updated: 19th May 2022 02:27 PM | A+A A-

ಜಾನುವಾರುಗಳ ಸಾಂದರ್ಭಿಕ ಚಿತ್ರ
ಗದಗ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಮುಖಿಯಾದ ನಂತರ ಜಿಲ್ಲೆಯಲ್ಲಿ ಜಾನುವಾರುಗಳ ಮಾರಾಟ ಮತ್ತು ಖರೀದಿ ಡಿಜಿಟಲ್ ಆಗಿದೆ. ಮಾರಾಟಗಾರರು ಜಾನುವಾರುಗಳು ಮಾರುಕಟ್ಟೆಗೆ ಬರುವ ಮುನ್ನವೇ ಸೋಷಿಯಲ್ ಮೀಡಿಯಾದಲ್ಲಿ ಫೋಟೋದೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.
ಮುಂಗಾರು ಆರಂಭವಾಗುತ್ತಿದ್ದಂತೆಯೇ ರೈತರು ಜಾನುವಾರಗಳನ್ನು ಖರೀದಿಸುವುದು ಸಾಮಾನ್ಯವಾಗಿದೆ. ಆದರೆ, ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚಾಗಿ, ಹಸುಗಳ ಬಳಕೆ ಕಡಿಮೆಯಾಗಿದೆ. ಆದಾಗ್ಯೂ, ತೈಲ ಬೆಲೆ ಹೆಚ್ಚಳದಿಂದಾಗಿ ಟ್ರಾಕ್ಟರ್ ವೆಚ್ಚವನ್ನು ರೈತರು ಭರಿಸಲಾಗದೆ ಹಸುಗಳಿಗೆ ಮತ್ತೆ ಬೇಡಿಕೆ ಬಂದಿದೆ.
ತಮ್ಮ ಜಾನುವಾರಗಳನ್ನು ಮಾರುಕಟ್ಟೆಗೆ ಕೊಂಡೊಯ್ಯುವುದನ್ನು ತಪ್ಪಿಸಲು, ಮಾರಾಟಗಾರರು ಫೋಟೋಗಳು ಮತ್ತು ಮಾಹಿತಿಯನ್ನು ಅಪ್ಲೋಡ್ ಮಾಡಲು ವಾಟ್ಸಾಪ್ ಗುಂಪುಗಳನ್ನು ಬಳಸುತ್ತಿದ್ದಾರೆ. ಅಂತಿಮವಾಗಿ ಜಾನುವಾರು ನೋಡಲು ಮತ್ತು ಮಾರಾಟ ಮಾಡಲು ಒಬ್ಬರನ್ನೊಬ್ಬರು ಕರೆಯುತ್ತಾರೆ ಎಂದು ಗದಗ ರೈತ ತೋಂಟದಪ್ಪ ಸುದಿ ಹೇಳಿದರು.
ಅನೇಕ ರೈತರು ಜಾನುವಾರುಗಳನ್ನು ಹುಡುಕಲು ಇಂಟರ್ ನೆಂಟ್ ಬಳಸುತ್ತಿದ್ದಾರೆ. ವಾಟ್ಸಾಪ್ ಗ್ರೂಪ್ ನಲ್ಲಿ ಜಾನುವಾರುಗಳ ಚಿತ್ರ ಸಮೇತ ಮಾಹಿತಿಯನ್ನು ಕಳುಹಿಸುತ್ತಿರುವ ರೈತರು, ಇತರ ಸಮಾನ ಗುಂಪಿನ ಸದಸ್ಯರಿಗೆ ಶೇರ್, ವಾವರ್ಡ್ ಮಾಡುವಂತೆ ಹೇಳುತ್ತಿದ್ದಾರೆ. ಈ ಗ್ರೂಪ್ ಗಳೊಂದಿಗೆ ಗ್ರಾಹಕರನ್ನು ಕೂಡಾ ಅವರು ಪಡೆಯುತ್ತಿದ್ದಾರೆ.
ಈ ಮಧ್ಯೆ, ಆಫ್ ಲೈನ್ ಮಾರಾಟದಲ್ಲೂ ಜಾನುವಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಗದಗಿನ ಎಪಿಎಂಸಿ ಆವರಣದಲ್ಲಿರುವ ಜಾನುವಾರು ಮಾರುಕಟ್ಟೆಯಲ್ಲಿ ಕಳೆದ ಶನಿವಾರ ಹಲವು ವರ್ಷಗಳ ನಂತರ ಒಂದೇ ದಿನದಲ್ಲಿ 300 ಜಾನುವಾರುಗಳ ಮಾರಾಟವಾಗಿದೆ.