
ಶಾಲಾ ಸಿಬ್ಬಂದಿಗಳೊಂದಿಗೆ ವಿದ್ಯಾರ್ಥಿನಿ ದಿಶಾ
ಟಿ. ನರಸೀಪುರ: ಬನ್ನೂರಿನ ಆದಿ ಚುಂಚನಗಿರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಬಿ.ಎಂ. ದಿಶಾ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿ ಸಾಧನೆಗೈದಿದ್ದಾರೆ.
ಬಸವನಹಳ್ಳಿ ಗ್ರಾಮದ ಕೃಷಿಕ ಕುಟುಂಬದ ದೀಶಾ ಎಲ್ಲಾ ವಿಷಯಗಳಲ್ಲಿ ಎ+ ಗ್ರೇಡ್ ನೊಂದಿಗೆ 625ಕ್ಕೆ ಅಂಕ ಗಳಿಸುವ ಮೂಲಕ ರೈತ ಕುಟುಂಬದ ಹೆಣ್ಣು ಮಕ್ಕಳಲ್ಲಿ ಸ್ಪೂರ್ತಿ ಮೂಡಿಸಿದ್ದಾರೆ.ಮಗಳ ಸಾಧನೆ ಹೆಮ್ಮೆಯನ್ನುಂಟು ಮಾಡಿದೆ ಎಂದು ತಂದೆ ಮಹೇಶ್ ತಿಳಿಸಿದ್ದಾರೆ.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮುವ ಮೂಲಕ ಶಾಲೆಗೆ ಕೀರ್ತಿ ತಂದಿರುವ ದಿಶಾ ಅವರನ್ನು ಆದಿಚುಂಚನಗಿರಿ ಪ್ರೌಢಶಾಲೆಯ ಅಧೀಕ್ಷಕ ಎ.ಎನ್. ಆನಂದ್, ಮುಖ್ಯ ಶಿಕ್ಷಕಿ ಹೆಚ್ .ಆರ್. ಪಲ್ಲವಿ ಹಾಗೂ ಸಹ ಶಿಕ್ಷಕರು ಅಭಿನಂದಿಸಿದ್ದಾರೆ.
ತರಗತಿ ಟೆಸ್ಟ್ ಗಳು ಹಾಗೂ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಯಾವಾಗಲೂ ಉತ್ತಮ ಅಂಕ ಪಡೆಯುತ್ತಿದ್ದ ದೀಶಾ ಸಾಧನೆ ಬಗ್ಗೆ ಭರವಸೆ ಇತ್ತು. ಇದೀಗ ನಾವೆಲ್ಲ ಶಿಕ್ಷಕರು ಆತನ ಬಗ್ಗೆ ಹೆಮ್ಮೆ ಪಡುತ್ತಿದ್ದೇವೆ ಎಂದು ಶಿಕ್ಷಕ ಹೆಚ್.ಆರ್. ರಮೇಶ್ ಸಂತಸ ವ್ಯಕ್ತಪಡಿಸಿದ್ದಾರೆ.
ಪಿಯುಸಿಯಲ್ಲಿ ವಿಜ್ಞಾನ ವಿಷಯ ಪಡೆದುಕೊಂಡು ವೈದ್ಯಳಾಗುವ ಕನಸು ಇಟ್ಟುಕೊಂಡಿರುವುದಾಗಿ ವಿದ್ಯಾರ್ಥಿನಿ ಬಿ.ಎಂ. ದಿಶಾ ತನ್ನ ಅನಿಸಿಕೆ ಹಂಚಿಕೊಂಡಿದ್ದಾರೆ.