ಬೆಂಗಳೂರಿನಲ್ಲಿ ಮತ್ತೆ ಜಿಟಿ ಜಿಟಿ ಮಳೆಕಾಟ: ವರುಣನ ಆರ್ಭಟದ ಮಧ್ಯೆ ಸಿಎಂ ಬೊಮ್ಮಾಯಿ ಸಿಟಿ ರೌಂಡ್ಸ್
ಕಳೆದ ಮಂಗಳವಾರ ಸಾಯಂಕಾಲದಿಂದ ಸತತವಾಗಿ ಧೋ ಎಂದು ಸುರಿದ ಮಳೆಗೆ ನಗರದ ಬಹುತೇಕ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ, ಇಬ್ಬರು ಕಾರ್ಮಿಕರು ಮೃತಪಟ್ಟು, ವಾಹನಗಳಿಗೆ ಆದ ಅನಾಹುತ ಅಷ್ಟಿಷ್ಟಲ್ಲ, ಹಲವು ಕಡೆಗಳಲ್ಲಿ ಸಂಚಾರಕ್ಕೆ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿತ್ತು.
Published: 19th May 2022 10:37 AM | Last Updated: 19th May 2022 02:15 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕಳೆದ ಮಂಗಳವಾರ ಸಾಯಂಕಾಲದಿಂದ ಸತತವಾಗಿ ಧೋ ಎಂದು ಸುರಿದ ಮಳೆಗೆ ನಗರದ ಬಹುತೇಕ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ, ಇಬ್ಬರು ಕಾರ್ಮಿಕರು ಮೃತಪಟ್ಟು, ವಾಹನಗಳಿಗೆ ಆದ ಅನಾಹುತ ಅಷ್ಟಿಷ್ಟಲ್ಲ, ಹಲವು ಕಡೆಗಳಲ್ಲಿ ಸಂಚಾರಕ್ಕೆ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿತ್ತು.
ಇಷ್ಟೆಲ್ಲಾ ಕಷ್ಟಪಟ್ಟ ನಂತರ ನಿನ್ನೆ ಹಗಲು ವೇಳೆ ಸ್ವಲ್ಪ ಮಟ್ಟಿಗೆ ಮಳೆ ನಿಂತು ಹೋಯಿತು ಎಂದು ನಗರದ ನಾಗರಿಕರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುತ್ತಿರುವಾಗಲೇ ಇಂದು ಬೆಳಗ್ಗೆ ಮತ್ತೆ ಸಿಲಿಕಾನ್ ಸಿಟಿಗೆ ವರುಣನ ಕಾಟ ಶುರುವಾಗಿದೆ.
ಸಿಎಂ ಸಿಟಿ ರೌಂಡ್ಸ್ : ಬಿಟ್ಟೂಬಿಡದಂತೆ ನಗರದ ಬಹುತೇಕ ಕಡೆ ಮಳೆ ಸುರಿಯುತ್ತಿದೆ. ಈ ಮಳೆಯ ಮಧ್ಯೆ ಸಿಎಂ ಬಸವರಾಜ ಬೊಮ್ಮಾಯಿ ಸಿಟಿ ರೌಂಡ್ಸ್ ಹಾಕುತ್ತಿದ್ದಾರೆ. ಸಿಎಂ ಬೊಮ್ಮಾಯಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಸಿಎಂ ಬೊಮ್ಮಾಯಿಯವರಿಗೆ ಸಚಿವರಾದ ಆರ್ ಅಶೋಕ್, ಕೆ ಗೋಪಾಲಯ್ಯ, ವಿ.ಸೋಮಣ್ಣ, ಸಂಸದ ಪಿ.ಸಿ. ಮೋಹನ್ , ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ , ಪೊಲೀಸ್ ಕಮಿಷನರ್ ಸಿ.ಹೆಚ್.ಪ್ರತಾಪ್ ರೆಡ್ಡಿ ಬಿಬಿಎಂಪಿ, BWSSB ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಸಾಥ್ ನೀಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ #BBMP ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡುವ ಸಲುವಾಗಿ ಮುಖ್ಯಮಂತ್ರಿ @BSBommai , ಬಿಬಿಎಂಪಿ ಆಡಳಿತಾಧಿಕಾರಿ @BBMPAdmn , ಪಾಲಿಕೆ ಮುಖ್ಯ ಆಯುಕ್ತ @BBMPCOMM ಸೇರಿದಂತೆ ಸಚಿವರು, ಶಾಸಕರು ಮತ್ತು ಅಧಿಕಾರಿಗಳು ಬಸ್ ನಲ್ಲಿ ಪರಿವೀಕ್ಷಣೆಗೆ ತೆರಳಿದರು.#BBMPCares pic.twitter.com/gNE2iysQXz
— BBMPCares (@BBMPCares) May 19, 2022
ಸಿಎಂ ಬೊಮ್ಮಾಯಿ ಜೆಸಿ ನಗರ 60 ಅಡಿ ರಸ್ತೆಗೆ ಭೇಟಿ ನೀಡಿ ಜಿಟಿ-ಜಿಟಿ ಮಳೆ ನಡುವೆಯೂ ಹಾನಿ ಪರಿಶೀಲನೆ ನಡೆಸುತ್ತಿದ್ದಾರೆ. ನಂತರ ಕಮಲನಾಗರದ ಶಂಕರಮಠ ಬಳಿ ಪರಿಶೀಲನೆ , ಕಾಲುವೆಗಳ ಹೂಳು ತೆಗೆದಿರುವುದನ್ನು ವೀಕ್ಷಿಸಲಿದ್ದಾರೆ.
Karnataka CM Basavaraj Bommai, along with his cabinet ministers and senior officials, visit flood-hit areas in Bengaluru following heavy rainfall here. pic.twitter.com/FVSPyFCPOm
— ANI (@ANI) May 19, 2022