ಕೆಂಪೇಗೌಡ ಅಂತರಾಷ್ಟ್ರೀಯ ನಿಲ್ದಾಣದ ಗೇಟ್ ಕೀ ನಾಪತ್ತೆ: ಪ್ರಯಾಣಿಕರು ಕೆಲ ಕಾಲ ಕಂಗಾಲು!
ಕೆಂಪೇಗೌಡ ಅಂತರಾಷ್ಟ್ರೀಯ ನಿಲ್ದಾಣದ ಆಗಮನದ ಗೇಟ್ ಕೀ ನಾಪತ್ತೆಯಾದ ಪರಿಣಾಮ ವಿಮಾನ ನಿಲ್ದಾಣಕ್ಕೆ ಬಂದಿದ್ದ ಅಂತರಾಷ್ಟ್ರೀಯ ಪ್ರಯಾಣಿಕರು ಕೆಲ ಕಾಲ ಕಂಗಾಲಾದ ಘಟನೆ ಬುಧವಾರ ಕಂಡು ಬಂದಿತು.
Published: 19th May 2022 01:53 PM | Last Updated: 19th May 2022 02:25 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ನಿಲ್ದಾಣದ ಆಗಮನದ ಗೇಟ್ ಕೀ ನಾಪತ್ತೆಯಾದ ಪರಿಣಾಮ ವಿಮಾನ ನಿಲ್ದಾಣಕ್ಕೆ ಬಂದಿದ್ದ ಅಂತರಾಷ್ಟ್ರೀಯ ಪ್ರಯಾಣಿಕರು ಕೆಲ ಕಾಲ ಕಂಗಾಲಾದ ಘಟನೆ ಬುಧವಾರ ಕಂಡು ಬಂದಿತು.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಲೇಖಕ ಮತ್ತು ಪತ್ರಕರ್ತ ವೀರ್ ಸಾಂಘ್ವಿಯವರು ಟ್ವೀಟ್ ಮಾಡಿದ್ದು, ಈ ವಿಚಾರವನ್ನು ಹಂಚಿಕೊಂಡು ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಬರಲು ಪ್ರಯಾಣಿಕರು 20 ನಿಮಿಷಗಳ ಕಾಯಬೇಕಾಯಿತು. ನಿಲ್ದಾಣದ ಆಗಮನದ ಕೀ ನಾಪತ್ತೆಯಾಗಿದ್ದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿತ್ತು. ಬೀಗ ತೆಗೆಯಲು ಸಾಕಷ್ಟು ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದರು. ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಮತ್ತು ಇಮಿಗ್ರೇಷನ್ (ವಲಸೆ) ನಲ್ಲಿನ ಕಾರ್ಯನಿರ್ವಹಣೆ ಉತ್ತಮವಾಗಿದೆ. ಆದರೆ, ಸಿಐಎಸ್ಎಫ್ ಮತ್ತು ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ ಸಮಸ್ಯೆಗಳಿವೆ ಎಂದು ಹೇಳಿಕೊಂಡಿದ್ದಾರೆ.
ಈ ಟ್ವೀಟ್'ಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇವೆಂದು ಹೇಳಿದ್ದಾರೆ.
ಈ ಬಗ್ಗೆ ನಾವು ವಿಷಾದ ವ್ಯಕ್ತಪಡಿಸಿತ್ತೇವೆ. ನಮ್ಮ ಕಾಳಜಿಯನ್ನು ನಮ್ಮ ಕಾರ್ಯಾಚರಣೆ ತಂಡದೊಂದಿಗೆ ಹಂಚಿಕೊಳ್ಳಲಾಗಿದ್ದು, ತಂಡವು ಪರಿಶೀಲನೆ ನಡೆಸುತ್ತಿದೆ ಹೇಳಿದೆ.