ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ತಾನು ಧರಿಸಿದ್ದ ಶರ್ಟ್ ನಿಂದ ಇಡ್ಲಿ-ವಡೆಯನ್ನು ಮುಚ್ಚಿದ್ದ ವ್ಯಾಪಾರಿ: ಶಿಸ್ತು ಕ್ರಮಕ್ಕೆ ಸಾರ್ವಜನಿಕರ ಆಗ್ರಹ
ರೈಲಿನಿಂದ ಇಡ್ಲಿ-ವಡೆ ಮಾರಾಟ ಮಾಡುವ ವ್ಯಾಪಾರಿ ತಾನು ಧರಿಸುವ ಶರ್ಟ್ ನಲ್ಲಿ ಆಹಾರವನ್ನು ಮುಚ್ಚಿದ್ದ ವಿಡಿಯೊ ವೈರಲ್ ಆಗಿದ್ದು ರೈಲುಗಳಲ್ಲಿ ಮಾರಾಟ ಮಾಡಿಕೊಂಡು ಬರುವ ಊಟ ತಿಂಡಿಗಳ ಸ್ವಚ್ಛತೆ ಬಗ್ಗೆ ಮತ್ತೆ ಮತ್ತೆ ಪ್ರಯಾಣಿಕರು, ಸಾರ್ವಜನಿಕರು ಪ್ರಶ್ನೆ ಮಾಡುವಂತೆ ಮಾಡಿದೆ.
Published: 19th May 2022 09:47 AM | Last Updated: 19th May 2022 09:47 AM | A+A A-

ಶರ್ಟ್ ನಿಂದ ಆಹಾರ ಮುಚ್ಚಿರುವುದು
ಹುಬ್ಬಳ್ಳಿ: ರೈಲಿನಿಂದ ಇಡ್ಲಿ-ವಡೆ ಮಾರಾಟ ಮಾಡುವ ವ್ಯಾಪಾರಿ ತಾನು ಧರಿಸುವ ಶರ್ಟ್ ನಲ್ಲಿ ಆಹಾರವನ್ನು ಮುಚ್ಚಿದ್ದ ವಿಡಿಯೊ ವೈರಲ್ ಆಗಿದ್ದು ರೈಲುಗಳಲ್ಲಿ ಮಾರಾಟ ಮಾಡಿಕೊಂಡು ಬರುವ ಊಟ ತಿಂಡಿಗಳ ಸ್ವಚ್ಛತೆ ಬಗ್ಗೆ ಮತ್ತೆ ಮತ್ತೆ ಪ್ರಯಾಣಿಕರು, ಸಾರ್ವಜನಿಕರು ಪ್ರಶ್ನೆ ಮಾಡುವಂತೆ ಮಾಡಿದೆ.
ರೈಲು ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಪ್ರಯಾಣಿಕರಿಗೆ ಮಾರಾಟ ಮಾಡುವ ಆಹಾರ ಬಗ್ಗೆ ವ್ಯಾಪಾರಿಗಳು ಸ್ವಚ್ಛತೆಗೆ ಗಮನ ಹರಿಸಬೇಕೆಂದು ಮತ್ತು ಧರಿಸಿದ್ದ ಶರ್ಟ್ ನಿಂದ ಇಡ್ಲಿ-ವಡೆಯನ್ನು ಮುಚ್ಚಿದ್ದ ವ್ಯಾಪಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂಡು ವಿಡಿಯೊ ಮಾಡಿದವರು ಹಾಗೂ ಈ ವಿಡಿಯೊವನ್ನು ವೀಕ್ಷಿಸಿದವರು ರೈಲ್ವೆ ಇಲಾಖೆಯನ್ನು ಒತ್ತಾಯಿಸುತ್ತಿದ್ದಾರೆ.
#Hubballi
— Arunkumar Huralimath (@Arunkumar_TNIE) May 18, 2022
Video gone viral where a food vender covers food items with his shirt @ Hubballi Railway Station, later sells same food to passengers. Public demand railway officials to give importance to hygienic & to take action against that vendor@AshwiniVaishnaw @SWRRLY @drmubl pic.twitter.com/VAItiD4HKW