ಹಿಂದುತ್ವ ಪ್ರಯೋಗಾಲಯವಾದ ಕರಾವಳಿ ಕರ್ನಾಟಕ ಭಾಗದಲ್ಲಿ ಕೋಮು ಧ್ರುವೀಕರಣ: ಸಮೀಕ್ಷೆಯಿಂದ ಬಹಿರಂಗ
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಕೋಮು ಧ್ರುವೀಕರಣವು ಬಹುತೇಕ ಪೂರ್ಣಗೊಂಡಿದೆ. ಇದು ತೀಕ್ಷ್ಣವಾದ ಸಾಮಾಜಿಕ ವಿಭಜನೆಗೆ ಕಾರಣವಾಗಿದೆ ಎಂದು ರಾಜಕೀಯ ವಿಶ್ಲೇಷಕರ ಗುಂಪು ನಿಯೋಜಿಸಿದ ಸ್ವತಂತ್ರ ಸಮೀಕ್ಷೆಯಿಂದ ಬಹಿರಂಗಗೊಂಡಿದೆ.
Published: 20th May 2022 07:24 AM | Last Updated: 20th May 2022 02:15 PM | A+A A-

ಉಡುಪಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ನಿರಾಕರಿಸಿದ್ದಕ್ಕೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಹೊರಬರುತ್ತಿರುವುದು
ಬೆಂಗಳೂರು: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಕೋಮು ಧ್ರುವೀಕರಣವು ಬಹುತೇಕ ಪೂರ್ಣಗೊಂಡಿದೆ. ಇದು ತೀಕ್ಷ್ಣವಾದ ಸಾಮಾಜಿಕ ವಿಭಜನೆಗೆ ಕಾರಣವಾಗಿದೆ ಎಂದು ರಾಜಕೀಯ ವಿಶ್ಲೇಷಕರ ಗುಂಪು ನಿಯೋಜಿಸಿದ ಸ್ವತಂತ್ರ ಸಮೀಕ್ಷೆಯಿಂದ ಬಹಿರಂಗಗೊಂಡಿದೆ.
ಈ ಬಗ್ಗೆ ನಡೆಸಲಾದ ಗುಣಮಟ್ಟದ ಸಮೀಕ್ಷೆಯಿಂದ ತಿಳಿದುಬಂದ ಅಂಶವೆಂದರೆ ಕರಾವಳಿ ಪ್ರದೇಶಗಳಲ್ಲಿ ಕೋಮುವಾದವು ಇಲ್ಲಿನ ಸಾಮಾಜಿಕ ರಚನೆಯ ಭಾಗವಾಗಿದೆ. ಈ ಪ್ರದೇಶವನ್ನು ಹಿಂದಿನಿಂದಲೂ ಹಿಂದುತ್ವ ಪ್ರಯೋಗಾಲಯವೆಂದು ಪರಿಗಣಿಸಲಾಗಿದೆ ಎಂಬುದು.
ಕರ್ನಾಟಕದಲ್ಲಿ ಹಿಜಾಬ್, ಹಲಾಲ್ ಮಾಂಸ ನಿಷೇಧ ಮತ್ತು ಇತರ ಕೋಮುವಾದಿ ಸಮಸ್ಯೆಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ಕೆರಳಿಸುವ ಸ್ವಲ್ಪ ಸಮಯಕ್ಕೆ ಮೊದಲು ನಡೆಸಲಾದ ಸಮೀಕ್ಷೆಯಲ್ಲಿ ವಿಶ್ಲೇಷಕರ ಪ್ರಕಾರ, "ಇಲ್ಲಿ ಧ್ರುವೀಕರಣ ಬಹಳ ಜೋರಾಗಿದೆ. ಮಾಧ್ಯಮಗಳಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ, ವಿಶೇಷವಾಗಿ WhatsApp ನಲ್ಲಿ ಎದ್ದಿರುವ ಕೋಮು ಸೂಕ್ಷ್ಮ ವಿಷಯಗಳ ಪರಿಣಾಮವಿರಬಹುದು ಎಂದು ವಿಶ್ಲೇಷಿಸಲಾಗಿದೆ.
ಇದನ್ನೂ ಓದಿ: ಕೋಮುಗಲಭೆ, ದ್ವೇಷ ಭಾಷಣಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವೇಕೆ? ಕಾಂಗ್ರೆಸ್
ದಕ್ಷಿಣ ಕನ್ನಡದಲ್ಲಿ ಶೇಕಡಾ 96ಕ್ಕಿಂತ ಹೆಚ್ಚು ಹಿಂದೂಗಳು ಮತ್ತು ಶೇಕಡಾ 98ರಷ್ಟು ಅಲ್ಪಸಂಖ್ಯಾತರು ಧ್ರುವೀಕರಣಗೊಂಡಿದ್ದಾರೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ, ಉಡುಪಿ ಜಿಲ್ಲೆಯಲ್ಲಿ ಸುಮಾರು 90 ಶೇಕಡಾ ಜನಸಂಖ್ಯೆಯು ಆಮೂಲಾಗ್ರವಾಗಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಇತರ ಭಾಗಗಳ ಮಲೆನಾಡು ಭಾಗಗಳಲ್ಲಿ, ತೀಕ್ಷ್ಣವಾದ ಧ್ರುವೀಕರಣ ಸುಮಾರು 85 ರಿಂದ 70 ಪ್ರತಿಶತದಷ್ಟು ಕಡಿಮೆಯಾಗಿದೆ.
ಸ್ಥಾಪಿತ ಹಿತಾಸಕ್ತಿಗಳಿಂದ "ಧ್ರುವೀಕರಣದ ಬಲೆ"ಯಲ್ಲಿ ಕಾಂಗ್ರೆಸ್ ಪಕ್ಷ ಆಟವಾಡಿದೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ. ಹಲವು ಸಂದರ್ಭಗಳಲ್ಲಿ ಕೋಮು ಸಮಸ್ಯೆಗಳನ್ನು ನಿಭಾಯಿಸುವ ಪ್ರಬುದ್ಧತೆಯ ಕೊರತೆಯು ಈ ಧ್ರುವೀಕರಣಕ್ಕೆ ಕಾರಣವಾಗಿದೆ. ಐದಾರು ಕ್ಷೇತ್ರಗಳಲ್ಲಿ ಜಾತ್ಯತೀತ ಮತದಾರರ ಸಂಖ್ಯೆ ಕುಗ್ಗಿದೆ ಎಂದು ತಿಳಿದುಬಂದಿದೆ.
ಇದಕ್ಕೆ ವ್ಯತಿರಿಕ್ತವಾಗಿ, ಜೆಡಿಎಸ್ನ ತಳಹದಿಯಾಗಿರುವ ಹಳೇ ಮೈಸೂರಿನ ಒಕ್ಕಲಿಗ ಹೃದಯಭಾಗ - ವಿಶೇಷವಾಗಿ ತುಮಕೂರು, ಹಾಸನ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಹಾಗೇ ಉಳಿದಿದೆ ಎಂದು ಸಮೀಕ್ಷೆ ತಿಳಿಸಿದೆ. ವಿಶ್ಲೇಷಕರಲ್ಲಿ ಒಬ್ಬರಾದ ರಾಜಶೇಖರ ಎಸ್, ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಈ ಎಲ್ಲಾ ಸಂಶೋಧನೆಗಳು ಹಿಜಾಬ್ ಮತ್ತು ಹಲಾಲ್ ಸಮಸ್ಯೆ ತಲೆದೋರುವುದಕ್ಕೆ ಹಿಂದಿನವು. ಬಹುಶಃ ಈಗ, ತುಂಬಾ ಧ್ರುವೀಕರಣದ ನಂತರ, ಫಲಿತಾಂಶಗಳು ತೀಕ್ಷ್ಣ ಮತ್ತು ವಿಭಿನ್ನವಾಗಿರಬಹುದು ಎನ್ನುತ್ತಾರೆ.