
ಸಾಂದರ್ಭಿಕ ಚಿತ್ರ
ತುಮಕೂರು: ದ್ವಿಚಕ್ರ ವಾಹನಗಳ ಮಧ್ಯೆ ನಡೆದ ಅಪಘಾತದಲ್ಲಿ ನಾಲ್ವರು ಮೃತಪಟ್ಟ ಘಟನೆ ತುಮಕೂರಿನಲ್ಲಿ ಶುಕ್ರವಾರ ಸಂಜೆ ನಡೆದಿದೆ.
ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಶೆಟ್ಟಗೊಂಡನಹಳ್ಳಿ ಗೇಟ್ ಬಳಿ ಈ ಅಪಘಾತ ನಡೆದಿದ್ದು, ಬುಕ್ಕಾಪಟ್ಟಣದಿಂದ ಯಡಿಯೂರು ಕಡೆಗೆ ಹೊರಟಿದ್ದ ಬೈಕ್ಗಳಿಗೆ ಸಿ.ಎಸ್.ಪುರದಿಂದ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ನಾಲ್ಕು ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತಪಟ್ಟವರನ್ನು ಬುಕ್ಕಾಪಟ್ಟಣದ ಭೂತೇಶ್ (25), ಶಶಿಧರ್ (26), ನವೀನ್ (28) ಮತ್ತು ಸಿ.ಎಸ್.ಪುರ ಗ್ರಾಮದ ರಂಗನಾಥ್ ( 24) ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.