
ಸಂಗ್ರಹ ಚಿತ್ರ
ಮಡಿಕೇರಿ: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ದುರ್ಗಾ ವಾಹಿನಿ ಘಟಕದ ವತಿಯಿಂದ ಗುರುವಾರ ವಿರಾಜಪೇಟೆಯಲ್ಲಿ ‘ಹಿಂದೂ ಸಮಾಜೋತ್ಸವ’ ಕಾರ್ಯಕ್ರಮ ನಡೆಯಿತು.
ವಿರಾಜಪೇಟೆಯ ತಾಲೂಕು ಮೈದಾನದಲ್ಲಿ ನಡೆದ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ತೋಂಟದಾರ್ಯ ಸಂಸ್ಥಾನ ಮಠ ಬಸವಾಪಟ್ಟಣದ ಸ್ವಾಮೀಜಿ ಶ್ರೀ ಸ್ವತಂತ್ರ ಬಸವಾಲಿಂಗ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಮೈದಾನದಲ್ಲಿ ಡೊಳ್ಳು ಕುಣಿತದೊಂದಿಗೆ ಆರಂಭವಾದ ಈ ಮೆರವಣಿಗೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಶಾಲೆಯೊಳಗೆ ಶಸ್ತ್ರಾಸ್ತ್ರ ತರಬೇತಿ ನೀಡಿಲ್ಲ: ಸಾಯಿ ಶಂಕರ್ ಶಾಲಾ ಆಡಳಿತ ಮಂಡಳಿ ಸ್ಪಷ್ಟನೆ
ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾರಂಭದ ಮುಖ್ಯ ಭಾಷಣಕಾರರಲ್ಲಿ ಒಬ್ಬರಾದ ಹರಿಕಾ ಮಂಜುನಾಥ್ ಅವರು, ಹಿಂದೂ ಹೆಣ್ಣುಮಕ್ಕಳು ಜಾಗೃತಿ ಮೂಡಿಸಬೇಕು. ಆಗ ಮಾತ್ರ ನಾವು ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಧರ್ಮವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.