ಬೆಂಗಳೂರು ಶಾಪಿಂಗ್ ಮಾಲ್ನಲ್ಲಿ ಆಯತಪ್ಪಿ ಬಿದ್ದ ಸ್ನೇಹಿತರು: ಯುವತಿ ಸಾವು
ಬೆಂಗಳೂರಿನ ಬ್ರಿಗೇಡ್ ರಸ್ತೆಯ ‘5 ಅವೆನ್ಯೂ’ ಶಾಪಿಂಗ್ ಮಾಲ್ವೊಂದರ ಕಟ್ಟಡದಿಂದ ಯುವಕ-ಯುವತಿಯರಿಬ್ಬರು ಆಯತಪ್ಪಿ ಬಿದ್ದಿದ್ದು, ಯುವತಿ ಸಾವನ್ನಪ್ಪಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.
Published: 21st May 2022 06:06 PM | Last Updated: 21st May 2022 06:06 PM | A+A A-

ದುರಂತ ನಡೆದ ಶಾಪಿಂಗ್ ಮಾಲ್
ಬೆಂಗಳೂರು: ಬೆಂಗಳೂರಿನ ಬ್ರಿಗೇಡ್ ರಸ್ತೆಯ ‘5 ಅವೆನ್ಯೂ’ ಶಾಪಿಂಗ್ ಮಾಲ್ವೊಂದರ ಕಟ್ಟಡದಿಂದ ಯುವಕ-ಯುವತಿಯರಿಬ್ಬರು ಆಯತಪ್ಪಿ ಬಿದ್ದಿದ್ದು, ಯುವತಿ ಸಾವನ್ನಪ್ಪಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮೂಲಗಳ ಪ್ರಕಾರ ‘ಆಂಧ್ರಪ್ರದೇಶ ಮೂಲದ ಲಿಯಾ, ನಗರದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಾಕ್ಸ್ಟೌನ್ನಲ್ಲಿ ನೆಲೆಸಿದ್ದರು. ಸ್ನೇಹಿತ ಕ್ರಿಸ್ ಪೀಟರ್ (18) ಜೊತೆ ಶನಿವಾರ ಶಾಪಿಂಗ್ಗೆ ಬ್ರಿಗೇಡ್ ರಸ್ತೆಯ ‘5 ಅವೆನ್ಯೂ’ ಶಾಪಿಂಗ್ ಮಾಲ್ ಗೆ ಬಂದಿದ್ದರು. ಆ ವೇಳೆಯೇ ಇಬ್ಬರೂ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ’. ಈ ಪೈಕಿ ಯುವತಿ ಲಿಯಾ ಸಾವನ್ನಪ್ಪಿದ್ದು, ಸ್ನೇಹಿತ ಕ್ರಿಸ್ ಪೀಟರ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಧಾರವಾಡ: ಮರಕ್ಕೆ ಕ್ರೂಸರ್ ಡಿಕ್ಕಿ: ನಿಶ್ಚಿತಾರ್ಥ ಮುಗಿಸಿ ವಾಪಸಾಗುತ್ತಿದ್ದ ಏಳು ಮಂದಿ ದಾರುಣ ಸಾವು
ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ನೀಡಿರುವ ಮಾಹಿತಿಯಂತೆ, 'ತೀವ್ರ ಗಾಯಗೊಂಡ ಯುವತಿಯನ್ನು ನಿಮ್ಹಾನ್ಸ್ ಕರೆದೊಯ್ಯಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಎಚ್ಎಎಲ್ ನಿವಾಸಿ ಕ್ರಿಸ್ ಪೀಟರ್ ಅವರ ಕಾಲು ಮುರಿದಿದ್ದು, ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಲಿಯಾ ಹಾಗೂ ಪೀಟರ್ ಮಾಲ್ನ ಒಂದೇ ಕಡೆ ನಿಂತಿದ್ದರು. ಏಕಾಏಕಿ ಲಿಯಾ ಆಯತಪ್ಪಿ ಬಿದ್ದಿದ್ದರು. ಅವರನ್ನು ಹಿಡಿದುಕೊಳ್ಳಲು ಯತ್ನಿಸಿ ಪೀಟರ್ ಸಹ ಬಿದ್ದಿದ್ದ. ನೆಲಮಹಡಿಯಲ್ಲಿ ಯುವತಿ ಮೇಲೆಯೇ ಪೀಟರ್ ಬಿದ್ದಿದ್ದ. ಅವರಿಬ್ಬರನ್ನು ಗಮನಿಸಿದ್ದ ಸ್ಥಳೀಯರು ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು’ ಎಂದೂ ಹೇಳಿದರು. ಘಟನೆ ಬಗ್ಗೆ ಮಾಹಿತಿ ನೀಡಿದ ಕೇಂದ್ರ ವಿಭಾಗದ ಡಿಸಿಪಿ (ಪ್ರಭಾರ) ಎಸ್.ಡಿ. ಶರಣಪ್ಪ, ‘ಯುವಕ–ಯುವತಿ ಶಾಪಿಂಗ್ಗೆ ಬಂದಿದ್ದಾಗ ಆಯತಪ್ಪಿ ಬಿದ್ದಿರುವುದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ’ ಎಂದರು.
ಸೆಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳು:
ಬೆಂಗಳೂರಿನಲ್ಲಿ ಶಾಂಪಿಗ್ ಗೆ ಬಂದಿದ್ದ ಯುವಕ ಯುವತಿ ಕಾಲು ಜಾರಿ ಬಿದ್ದ ಪ್ರಕರಣದಲ್ಲಿ ನಿಮ್ಹಾನ್ಸ್ ನಲ್ಲಿ ಯುವತಿ ಲಿಯಾ (18) ಅಸುನೀಗಿದ್ದಾರೆ. ಯುವತಿ ಬೆಂಗಳೂರಿನ ಕಾಕ್ಸ್ ಟೌನ್ ನ ನಿವಾಸಿ. ಯುವಕ ಕ್ರಿಸ್ ಪೀಟರ್ (18) ಎಚ್ಎಎಲ್ ನಿವಾಸಿ. ಶಾಪಿಂಗ್ ಗೆ ವೇಳೆ ಕಾಲು ಜಾರಿ ಯುವತಿ ಮೊದಲು ಬಿದ್ದಿದ್ದಾಳೆ. ಯುವತಿಯನ್ನ ಹಿಡಿದುಕೊಳ್ಳಲು ಹೋಗಿ ಯುವಕ ಕೂಡ ಬಿದ್ದಿದ್ದಾನೆ. ಯುವತಿಯ ಮೇಲೆ ಯುವಕ ಬಿದ್ದಿದ್ದರಿಂದ ಬದುಕಿದ್ದಾನೆ. ಯುವಕನ ಕಾಲು ಮುರಿದಿದ್ದು ಚಿಕಿತ್ಸೆ ಮುಂದುವರೆಸಲಾಗಿದೆ. ಯುವತಿಗೆ ಗಂಭೀರ ಗಾಯಗಳಾಗಿರೋದ್ರಿಂದ ಮೃತ ಪಟ್ಟಿದ್ದಾಳೆ. ಇಬ್ಬರೂ ಸೆಂಟ್ ಜೋಸೆಫ್ ಕಾಲೇಜ್ ನಲ್ಲಿ ಇಬ್ಬರೂ ದ್ವಿತೀಯ ವರ್ಷದ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳು.
ಕೇಂದ್ರ ವಿಭಾಗದ ಪ್ರಭಾರ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಸ್ಪಷ್ಟನೆ:
ಕಾಂಪ್ಲೆಕ್ಸ್ ಮೇಲಿಂದ ಯುವಕ-ಯುವತಿ ಕೆಳಗೆ ಬಿದ್ದಿದ್ದ ಪ್ರಕರಣದಲ್ಲಿ ಸ್ನೇಹಿತರ ಜೊತೆ ಶಾಪಿಂಗ್ಗೆ ಬಂದಿದ್ದಾಗ ಅವಘಡ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯಂತೆ ಸ್ಟೇರ್ ಕೇಸ್ನಿಂದ ಆಯತಪ್ಪಿ ಬಿದ್ದಿದ್ದಾರೆ. ಯುವಕ ಕ್ರಿಸ್ ಬೆಂಗಳೂರಿನವನು, ಯವತಿ ಲೀಯಾ ಆಂಧ್ರದವಳು. ರಕ್ತಸ್ರಾವದಿಂದ ಚಿಕಿತ್ಸೆ ಫಲಿಸದೆ ಲೀಯಾ ಆಸ್ಪತ್ರೆಯಲ್ಲಿ ಸಾವು. ಘಟನೆಗೆ ನಿಖರ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸ್ತಿದ್ದೇವೆ. ಯುವಕ ಕ್ರಿಸ್ ಅಪಾಯದಿಂದ ಪಾರಾಗಿದ್ದಾನೆ ಆದರೆ ಶಾಕ್ನಲ್ಲಿದ್ದಾನೆ ಎಂದು ಕೇಂದ್ರ ವಿಭಾಗ ಪ್ರಭಾರ ಡಿಸಿಪಿ ಡಾ. ಎಸ್.ಡಿ. ಶರಣಪ್ಪ ಹೇಳಿದ್ದಾರೆ.