ಸಿಲಿಕಾನ್ ಸಿಟಿಯನ್ನು ಸ್ವಿಮ್ಮಿಂಗ್ ಫೂಲ್ ಮಾಡಿದ ಹೆಗ್ಗಳಿಕೆ ಬಿಜೆಪಿ ಸರ್ಕಾರಕ್ಕೆ ಸಲ್ಲಬೇಕು- ಎಚ್ ಡಿಕೆ
ಸಿಲಿಕಾನ್ ಸಿಟಿಯನ್ನು ಸ್ವಿಮ್ಮಿಂಗ್ ಫೂಲ್ ಮಾಡಿದ ಹೆಗ್ಗಳಿಕೆ ಬಿಜೆಪಿ ಸರ್ಕಾರಕ್ಕೆ ಸಲ್ಲಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
Published: 22nd May 2022 11:37 PM | Last Updated: 22nd May 2022 11:39 PM | A+A A-

ಸಾರ್ವಜನಿಕರಿಂದ ಅಹವಾಲು ಆಲಿಸಿದ ಕುಮಾರಸ್ವಾಮಿ
ಬೆಂಗಳೂರು: ಸಿಲಿಕಾನ್ ಸಿಟಿಯನ್ನು ಸ್ವಿಮ್ಮಿಂಗ್ ಫೂಲ್ ಮಾಡಿದ ಹೆಗ್ಗಳಿಕೆ ಬಿಜೆಪಿ ಸರ್ಕಾರಕ್ಕೆ ಸಲ್ಲಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಅಭಿವೃದ್ಧಿಯಲ್ಲಿ ಕ್ಷೇತ್ರವಾರು ತಾರತಮ್ಮ ಮಾಡಿ, ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎನ್ನುವ ನೀತಿ ಖಂಡನೀಯ. ಅನುದಾನದ ಹೊಳೆ ಹರಿದ ಕ್ಷೇತ್ರಗಳೇ ಈಗ ನೀರಿನಲ್ಲಿ ತೇಲುತ್ತಿವೆ. ಚಿಕ್ಕಬೆಟ್ಟಹಳ್ಳಿಗೆ ಒಂದು ತಿಂಗಳ ಒಳಗಾಗಿ ಮೂಲಸೌಕರ್ಯ ಕಲ್ಪಿಸುವ ಕೆಲಸಗಳು ಶುರುವಾಗಬೇಕು. ತಪ್ಪಿದರೆ ಖುದ್ದು ನಾನೇ ಅಲ್ಲಿಗೆ ಹೋಗಿ ಧರಣಿ ಕೂರಬೇಕಾಗುತ್ತದೆ. ಜಾತಿ, ಧರ್ಮದ ಹೆಸರಿನಲ್ಲಿ ಅಭಿವೃದ್ಧಿ ತಾರತಮ್ಯ ಮಾಡುವುದು ಹೇಯ, ರಾಕ್ಷಸಿ ಮನಸ್ಥಿತಿ ಎನ್ನದೇ ವಿಧಿ ಇಲ್ಲ ಎಂದಿದ್ದಾರೆ.
ಸಿಲಿಕಾನ್ ಸಿಟಿಯನ್ನು ಸ್ವಿಮ್ಮಿಂಗ್ ಪೂಲ್ ಮಾಡಿದ ಹೆಗ್ಗಳಿಕೆ ಬಿಜೆಪಿ ಸರಕಾರಕ್ಕೇ ಸಲ್ಲಬೇಕು. ಅಭಿವೃದ್ಧಿಯಲ್ಲಿ ಕ್ಷೇತ್ರವಾರು ತಾರತಮ್ಮ ಮಾಡಿ, ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎನ್ನುವ ನೀತಿ ಖಂಡನೀಯ. ಅನುದಾಲದ ಹೊಳೆ ಹರಿದ ಕ್ಷೇತ್ರಗಳೇ ಈಗ ನೀರಿನಲ್ಲಿ ತೇಲುತ್ತಿವೆ. 8/9#ರಿಪಬ್ಲಿಕ್_ಆಫ್_ಯಲಹಂಕ
— H D Kumaraswamy (@hd_kumaraswamy) May 22, 2022
ಸರ್ವ ಜನಾಂಗದ ಜನರನ್ನು ಸಮಭಾವದಿಂದ ಕಂಡು ಸರ್ವ ಜನಾಂಗದ ತೋಟ ನಿರ್ಮಿಸಿದ್ದರು ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಯಲಹಂಕದಲ್ಲಿ ಅಭಿವೃದ್ಧಿ ವಿಚಾರದಲ್ಲಿ ನಿರ್ದಿಷ್ಟವಾಗಿ ಒಂದು ಸಮುದಾಯವನ್ನೇ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿ, ಅವರು ವಾಸಿಸುವ ಬಡಾವಣೆಯನ್ನು ಕಡೆಗಣಿಸಿ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಹೆಚ್'ಡಿಕೆ ನಗರ ಸುತ್ತಿ ಆರೋಗ್ಯ ಸುಧಾರಿಸಿಕೊಳ್ಳಲಿ: ಸಚಿವ ವಿ. ಸೋಮಣ್ಣ
ರಕ್ಕಸ ಮಳೆಯಿಂದ ಮನೆಗೆ ಆಳೆತ್ತರದಷ್ಟು ನೀರು ನುಗ್ಗಿದಾಗ ಜೀವ ಉಳಿಸಿಕೊಳ್ಳಲೆತ್ನಿಸಿದ್ದು, ಕಣ್ಣೆದುರೇ ಮನೆ ವಸ್ತುಗಳು, ಆಹಾರ ಪದಾರ್ಥಗಳೆಲ್ಲ ಕೊಚ್ಚಿಹೋದಾಗ ಅನುಭವಿಸಿದ ಸಂಕಟದ ಕ್ಷಣಗಳನ್ನು ಮಹಿಳೆಯೊಬ್ಬರು ಎಳೆಎಳೆಯಾಗಿ ಬಿಚ್ಚಿಟ್ಟರು.ಕೆರೆ ನುಂಗಿದ ಪಾತಕಿಗಳಿಗೆ ಇವರ ಶಾಪ ತಟ್ಟದಿರದು ಎಂದಿದ್ದಾರೆ.
ರಕ್ಕಸ ಮಳೆಯಿಂದ ಮನೆಗೆ ಆಳೆತ್ತರದಷ್ಟು ನೀರು ನುಗ್ಗಿದಾಗ ಜೀವ ಉಳಿಸಿಕೊಳ್ಳಲೆತ್ನಿಸಿದ್ದು, ಕಣ್ಣೆದುರೇ ಮನೆ ವಸ್ತುಗಳು, ಆಹಾರ ಪದಾರ್ಥಗಳೆಲ್ಲ ಕೊಚ್ಚಿಹೋದಾಗ ಅನುಭವಿಸಿದ ಸಂಕಟದ ಕ್ಷಣಗಳನ್ನು ಈ ತಾಯಿ ಎಳೆಎಳೆಯಾಗಿ ಬಿಚ್ಚಿಟ್ಟರು.
— H D Kumaraswamy (@hd_kumaraswamy) May 22, 2022
ಕೆರೆ ನುಂಗಿದ ಪಾತಕಿಗಳಿಗೆ ಇವರ ಶಾಪ ತಟ್ಟದಿರದು. 6/6#ಬೆಂಗಳೂರು pic.twitter.com/9dPzwLnuzk