ಮಕ್ಕಳ ಪಠ್ಯಪುಸ್ತಕದಲ್ಲಿದ್ದ ಕೆಲ ತಪ್ಪುಗಳನ್ನು ಬದಲಿಸಿದ್ದೇವೆ: ತಜ್ಞರು
ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು, ಈ ನಡುವಲ್ಲೇ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ವಿರೋಧ ಪಕ್ಷಗಳ ನಾಯಕರು ಪಠ್ಯಪುಸ್ತಕಗಳನ್ನು ಕೇಸರೀಕರಣಗೊಳಿಸಲಾಗುತ್ತಿದೆ ಎಂದು ಆರೋಪಿಸುತ್ತಿದ್ದು, ಬಿಜೆಪಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದೆ.
Published: 22nd May 2022 01:02 PM | Last Updated: 22nd May 2022 01:02 PM | A+A A-

ರೋಹಿತ್ ಚಕ್ರತೀರ್ಥ
ಬೆಂಗಳೂರು: ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು, ಈ ನಡುವಲ್ಲೇ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ವಿರೋಧ ಪಕ್ಷಗಳ ನಾಯಕರು ಪಠ್ಯಪುಸ್ತಕಗಳನ್ನು ಕೇಸರೀಕರಣಗೊಳಿಸಲಾಗುತ್ತಿದೆ ಎಂದು ಆರೋಪಿಸುತ್ತಿದ್ದು, ಬಿಜೆಪಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದೆ.
ವಿವಾದ ಹಿನ್ನೆಲೆಯಲ್ಲಿ ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹಾಗೂ ಶಿಕ್ಷಣ ಅಭಿವೃದ್ಧಿ ತಜ್ಞ ಪ್ರೊಫೆಸರ್ ನಿರಂಜನಾರಾಧ್ಯ ಅವರು ದಿ ನ್ಯುೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಪಠ್ಯಪುಸ್ತಕಗಳನ್ನು ಪರಿಷ್ಕರಿಸುವುದು ಎಷ್ಟು ಮುಖ್ಯ? ಪಠ್ಯಪುಸ್ತಕದಲ್ಲಿದ್ದ ಕೆಲ ತಪ್ಪುಗಳನ್ನು ಬದಲಿಸಲಾಗಿದೆ ಎನ್ನುವುದಾದಾರೆ ಇಲ್ಲಿಯವರೆಗೆ ಮಕ್ಕಳು ಕಲಿಯುತ್ತಿದ್ದದ್ದು ತಪ್ಪುಗಳೇ?
ರೋಹಿತ್ ಚಕ್ರತೀರ್ಥ: ಪಠ್ಯಪುಸ್ತಕಗಳಲ್ಲಿ ಸಾಕಷ್ಟು ಸುಳ್ಳುಗಳಿರುವುದರಿಂದ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವ ಅವಶ್ಯಕತೆಯಿತ್ತು. 2017 ರಲ್ಲಿ ಬರಗೂರು ರಾಮಚಂದ್ರಪ್ಪ ಅವರು ಪಠ್ಯಪುಸ್ತಕ ಸಮಿತಿಯ ಮುಖ್ಯಸ್ಥರಾಗಿದ್ದಾಗ ಈ ತಪ್ಪುಗಳ ಸೇರ್ಪಡೆಗೊಳಿಸಲಾಗಿತ್ತು. ಇದಕ್ಕೂ ಮೊದಲು ಪಠ್ಯಪುಸ್ತಕಗಳಲ್ಲಿ ಸಮತೋಲಿತ ವಿಷಯಗಳಿದ್ದವು.
ಪ್ರೊ.ನಿರಂಜನರಾಧ್ಯ: ಜ್ಞಾನವನ್ನು ನವೀಕರಿಸಲು ಮತ್ತು ಜ್ಞಾನದ ನಿರ್ಮಾಣದಲ್ಲಿ ಹೊಸ ದೃಷ್ಟಿಕೋನಗಳನ್ನು ತರಲು ಪಠ್ಯಪುಸ್ತಕಗಳನ್ನು ನಿಯತಕಾಲಿಕವಾಗಿ ಪರಿಷ್ಕರಿಸುವುದು ಮುಖ್ಯವಾಗಿದೆ. ಅದೇನೇ ಇದ್ದರೂ, ಇದು ಸಂವಿಧಾನದಲ್ಲಿ ಅಂತರ್ಗತವಾಗಿರುವ ಮೌಲ್ಯಗಳನ್ನು ಪ್ರತಿಬಿಂಬಿಸುವ ಪ್ರಮಾಣಿತ ಚೌಕಟ್ಟನ್ನು ಆಧರಿಸಿರಬೇಕು ಮತ್ತು ಸತ್ಯಗಳು ಮತ್ತು ಪುರಾವೆಗಳ ಆಧಾರದ ಮೇಲೆ ವೈಜ್ಞಾನಿಕ ಸಂಶೋಧನೆಯ ಮೂಲಕ ವಿಷಯದ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿರುವ ತಜ್ಞರು ಒದಗಿಸಿದ ಚೌಕಟ್ಟನ್ನು ಆಧರಿಸಿರಬೇಕು. ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟ ಪರಿಷ್ಕರಣೆ ಹೆಸರಿನಲ್ಲಿ ಶಿಕ್ಷಣವು ಹದಗೆಡುತ್ತಿದೆ, ಒಂದು ಪಕ್ಷವು ತನ್ನ ರಾಜಕೀಯ ಸಿದ್ದಾಂತದ ಹುಸಿ ಉದ್ದೇಶ ಈಡೇರಿಸಲು ಮುಂದಾಗಿದೆ. ಇದು ಬೇರೇನೂ ಅಲ್ಲ. ಹಿಂದುಳಿದಿರುವುದನ್ನು ತೋರಿಸುತ್ತಿದೆ, ಕೆಸರು ಮತ್ತು ಪುರಾಣಗಳನ್ನು ತಲೆಗೆ ತುಂಬುವುದು ಹೊರತು ಇದರಲ್ಲಿ ಬೇರೇನೂ ಇಲ್ಲ. ಇದು ಯಾವುದೇ ಪರಿಷ್ಕರಣೆ ಪ್ರಕ್ರಿಯೆಗೆ ಅಗತ್ಯವಿರುವ ಪ್ರಜಾಸತ್ತಾತ್ಮಕ ಕಾರ್ಯವಿಧಾನ ಮತ್ತು ವಿಧಾನದ ಉಲ್ಲಂಘನೆಯಾಗಿದೆ.
ಕೆಲವು ವ್ಯಕ್ತಿಗಳಿಗೆ ಸಂಬಂಧಿಸಿದ ಭಾಗಗಳನ್ನು ತೆಗೆದುಹಾಕುವ ಪ್ರಯತ್ನ ಏಕೆ ನಡೆಯುತ್ತಿದೆ? ಇದು ಒಂದು ನಿರ್ದಿಷ್ಟ ಸಿದ್ಧಾಂತದ ಕಡೆಗೆ ಯುವಕರ ಮನಸ್ಸನ್ನು ಕೊಂಡೊಯ್ಯುವಂತೆ ಮಾಡುತ್ತದೆ ಅಲ್ಲವೇ?
ರೋಹಿತ್ ಚಕ್ರತೀರ್ಥ: ವಿಮರ್ಶಕರು ಕೆಲವು ಸೈದ್ಧಾಂತಿಕ ವಿಚಾರಗಳತ್ತ ಮಾತ್ರ ಬೆರಳಿಟ್ಟು ತೋರಿಸುತ್ತಿದ್ದಾರೆ. ಈ ವರೆಗೂ ಇದ್ದ ವಿಷಯಗಳು ಯುವ ಮನಸ್ಸಿನಲ್ಲಿ ಒಂದು ನಿರ್ದಿಷ್ಟ ಸಿದ್ಧಾಂತವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದರು ಎಂದು ಅರ್ಥವೇ? ನಾವು ಅದನ್ನು ಎಡ ಅಥವಾ ಬಲ ಎಂದು ಬ್ರಾಂಡ್ ಮಾಡುತ್ತಿಲ್ಲ. ಪಠ್ಯಪುಸ್ತಕಗಳಲ್ಲಿ ಅಂತಹ ವರ್ಗೀಕರಣಗಳು ಇರುವಂತಿಲ್ಲ. ನಾವು ಕೆಲವು ವಿಷಯಗಳ ಮೇಲೆ ಕೇಂದ್ರೀಕರಿಸಿದ್ದೇವೆ ಮತ್ತು ಭಾಷೆಯ ಬಳಕೆ ಸೇರಿದಂತೆ ಹೊಸ ವಿಷಯಗಳನ್ನು ಕಲಿಯುವಂತೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಹೊಸ ಆಲೋಚನೆಗಳೊಂದಿಗೆ ವಿಷಯವನ್ನು ಹುಡುಕುತ್ತಿದ್ದೇವೆ. ಆ ಮಾನದಂಡವನ್ನು ಪೂರೈಸಿದರೆ, ನಾವು ಪಠ್ಯಪುಸ್ತಕದಲ್ಲಿ ವಿಷಯವನ್ನು ಸೇರಿಸುತ್ತೇವೆ, ಇಲ್ಲದಿದ್ದರೆ ನಾವು ಅದನ್ನು ತೆಗೆದುಹಾಕುತ್ತೇವೆ.
ಪ್ರೊ.ನಿರಂಜನರಾಧ್ಯ: ನೀವು ಹೇಳಿದ್ದು ಸರಿ. ಚಿಕ್ಕ ಮಕ್ಕಳ ಮನಸ್ಸನ್ನು ಹದಗೊಳಿಸುವುದು ಮಾತ್ರವಲ್ಲ, ಅವರ ರಾಜಕೀಯ ಕಾರ್ಯಸೂಚಿಯನ್ನು ಪೂರೈಸಲು ಇತಿಹಾಸದ ಸುಳ್ಳು ಮತ್ತು ಕೋಮುವಾದ ವ್ಯಾಖ್ಯಾನದೊಂದಿಗೆ ಮಕ್ಕಳ ಮನಸ್ಸನ್ನು ವಿಷಪೂರಿತಗೊಳಿಸಲು ಇದು ಉತ್ತಮ ಸಮಯ ಎಂದು ತಿಳಿದಿದಿದ್ದಾರೆ.
ಪಠ್ಯಪುಸ್ತಕದಲ್ಲಿನ ಈ 'ಪರಿಷ್ಕರಣೆ'ಯ ವಿಧಾನವು ಶಿಕ್ಷಣದ ಪರಿಕಲ್ಪನೆಗೆ ಧಕ್ಕೆ ತರುವುದಿಲ್ಲವೇ?
ರೋಹಿತ್ ಚಕ್ರತೀರ್ಥ: ಇದು ಉತ್ಪ್ರೇಕ್ಷೆಯ ಬಗ್ಗೆ ಅಲ್ಲ. ನಾವು ಅಪ್ರಸ್ತುತವೆನಿಸಿದ್ದನ್ನು ತೆಗೆದುಹಾಕಿದ್ದೇವೆ. ಉದಾಹರಣೆಗೆ, ಯುದ್ಧದ ಪಾಠದಲ್ಲಿ, ಸಾಮಾಜಿಕ ಸುಧಾರಣೆಗಳ ಬಗ್ಗೆ ಭಾಗಗಳಿದ್ದವು. ಅವುಗಳನ್ನು ತೊಗೆಹಾಕಿದ್ದೇವೆ. ಕೆಲವು ಭಾಗಗಳಲ್ಲಿ ಅಗತ್ಯವಿಲ್ಲದ ಮೂರು ನಾಲ್ಕು ಪುಟಗಳ ಪಠ್ಯವಿತ್ತು. ಇದನ್ನು ತೆಗೆದು ಹಾಕಿದ್ದೇವೆ. ಇದರಿಂದ ಪುಟಗಳ ಸಂಖ್ಯೆಯನ್ನು ಕೂಡ ಕಡಿಮೆ ಮಾಡಿದ್ದೇವೆ. ವಾಸ್ತವವಾಗಿ, ಟಿಪ್ಪು ಸುಲ್ತಾನ್ಗೆ ನೀಡಿದ ಮೈಸೂರಿನ ಹುಲಿ ಬಿರುದು ಕುರಿತ ಪಠ್ಯವನ್ನು ಉಳಿಸಲಾಗಿದೆ.
ಪ್ರೊ.ನಿರಂಜನರಾಧ್ಯ: ನೀವು ಸಾಮುದಾಯಿಕ ಮತ್ತು ಧಾರ್ಮಿಕ ದೃಷ್ಟಿಯಿಂದ ವಿಷಯಗಳನ್ನು ನೋಡಿದಾಗ, ಅದು ಉತ್ಪ್ರೇಕ್ಷಿತವಾಗಿಯೇ ಕಾಣುತ್ತದೆ. ಭಾರತವನ್ನು ವಸಾಹತುಶಾಹಿ ದಾಸ್ಯದಿಂದ ಮುಕ್ತಗೊಳಿಸಲು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಒಬ್ಬರ ಕೊಡುಗೆ ಮತ್ತು ತ್ಯಾಗದ ಸನ್ನಿವೇಶದಿಂದ ವಿಷಯಗಳನ್ನು ನೋಡಬೇಕಾಗಿದೆ.
ಅಧಿಕಾರದಲ್ಲಿರುವ ಪಕ್ಷದ ರಾಜಕೀಯ ಸಿದ್ಧಾಂತದ ಆಧಾರದ ಮೇಲೆ ಪಠ್ಯಪುಸ್ತಕಗಳನ್ನು ಪದೇ ಪದೇ ಪರಿಷ್ಕರಿಸುವುದು ಅಪಾಯವೆಂದೆನಿಸುವುದಿಲ್ಲವೇ? ಇದು ವಿದ್ಯಾರ್ಥಿಗಳನ್ನು ಗೊಂದಲಗೊಳಿಸುವುದಿಲ್ಲವೇ?
ರೋಹಿತ್ ಚಕ್ರತೀರ್ಥ: ಗೊಂದಲ ಸೃಷ್ಟಿಸುತ್ತದೆ ಎಂಬ ಕಾರಣಕ್ಕೆ ನಾವು ಯುವ ಪೀಳಿಗೆಗೆ ಸುಳ್ಳು ಹೇಳಲು ಸಾಧ್ಯವಿಲ್ಲ. ಸುಳ್ಳು ಮತ್ತು ಪ್ರಮಾದಗಳನ್ನು ಸರಿಯಾದ ರೀತಿಯಲ್ಲಿ, ಸಂದರ್ಭದಲ್ಲಿ ಬದಲಾಯಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ನಾವು ಪಠ್ಯಪುಸ್ತಕಗಳಲ್ಲಿ ಸೇರಿಸುವ ಪ್ರತಿಯೊಂದು ಸಾಲಿಗೂ ಐತಿಹಾಸಿಕ ಪುರಾವೆಗಳನ್ನು ನೀಡಬೇಕಾಗಿದೆ. ಬರಗೂರು ರಾಮಚಂದ್ರಪ್ಪ ಅವರನ್ನೂ ನಮ್ಮೊಂದಿಗೆ ಚರ್ಚೆಗೆ ಆಹ್ವಾನಿಸಿದ್ದೆವು ಮತ್ತು ಒಳಗೊಂಡಿರುವ ಪಾಠಗಳ ಬಗ್ಗೆ ಸಾಕ್ಷ್ಯವನ್ನು ನೀಡುವಂತೆ ಕೇಳಿದೆವು. ಆದರೆ ಅವರು ಈ ಪ್ರಸ್ತಾಪವನ್ನು ಇಲ್ಲಿಯವರೆಗೆ ಒಪ್ಪಿಕೊಂಡಿಲ್ಲ.
ಪ್ರೊ.ನಿರಂಜನರಾಧ್ಯ: ಇದು ಪಠ್ಯಪುಸ್ತಕಗಳನ್ನು ರಾಜಕೀಯ ಪಕ್ಷಗಳ ಪ್ರಣಾಳಿಕೆಗಳನ್ನು ಮಾಡುತ್ತದೆ. ಸಮೀಪದೃಷ್ಟಿಯ ರಾಜಕೀಯ ಕಾರ್ಯಸೂಚಿಯೊಂದಿಗೆ ನಿರ್ದಿಷ್ಟ ಪ್ರಕಾರದ ಸಿದ್ಧಾಂತವು ಸಂವಿಧಾನದಲ್ಲಿ ಅನಗತ್ಯವಾಗಿ ಸಾಕಾರಗೊಂಡಿರುವ ದೊಡ್ಡ ಮೌಲ್ಯಗಳ ಮೇಲೆ ಮೇಲುಗೈ ಸಾಧಿಸುತ್ತದೆ ಮತ್ತು ಅದನ್ನು ಅನಗತ್ಯವಾಗಿಸುತ್ತದೆ. ಈ ಪ್ರಕ್ರಿಯೆಗಳು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿವೆ ಎಂದಿದ್ದಾರೆ.