ದಲಿತ ಸ್ವಾಮೀಜಿ ಬಾಯಿಂದ ಎಂಜಲು ಅನ್ನ ತಿಂದು ಶಾಸಕ ಜಮೀರ್ ಅಹ್ಮದ್ ಖಾನ್ ಅತಿರೇಕದ ವರ್ತನೆ!
ವೇದಿಕೆಯ ಮೇಲೆ ದಲಿತ ಸ್ವಾಮೀಜಿಗೆ ಅನ್ನ ತಿನ್ನಿಸಿದ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಬಳಿಕ ಅವರ ಬಾಯಿಯಲ್ಲಿದ್ದ ಎಂಜಲು ಅನ್ನವನ್ನು ತಿನ್ನುವ ಮೂಲಕ ಅತಿರೇಕದ ವರ್ತನೆ ತೋರಿದ್ದಾರೆ.
Published: 23rd May 2022 09:54 AM | Last Updated: 23rd May 2022 02:10 PM | A+A A-

ಎಂಜಲು ಅನ್ನ ತಿನ್ನುತ್ತಿರುವ ಜಮೀರ್ ಅಹ್ಮದ್ ಖಾನ್
ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ದಲಿತ ಸ್ವಾಮೀಜಿಯೊಬ್ಬರ ಎಂಜಲು ತಿಂದ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗೆ ಗ್ರಾಸವಾಗುತ್ತಿದೆ. ಕೆಲವರು ಇದನ್ನು ಅತಿರೇಕ ಎಂದು ಹೇಳಿದರೆ ಮತ್ತೆ ಕೆಲವರು ಅಸ್ಪೃಶ್ಯತೆಯ ಬಗ್ಗೆ ಅರಿವು ಮೂಡಿಸಲು ಈ ರೀತಿ ಮಾಡಿದ್ದಾರೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.
ವೇದಿಕೆಯ ಮೇಲೆ ದಲಿತ ಸ್ವಾಮೀಜಿಗೆ ಅನ್ನ ತಿನ್ನಿಸಿದ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಬಳಿಕ ಅವರ ಬಾಯಿಯಲ್ಲಿದ್ದ ಎಂಜಲು ಅನ್ನವನ್ನು ತಿನ್ನುವ ಮೂಲಕ ಅತಿರೇಕದ ವರ್ತನೆ ತೋರಿದ್ದಾರೆ.
ಪಾದರಾಯನಪುರದ ಅಲ್ ಅಜರ್ ಫೌಂಡೇಶನ್ ಶಾಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಮತ್ತು ಈದ್ ಮಿಲಾದ್ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಮೀರ್ ಸ್ವಾಮೀಜಿ ಬಾಯಲ್ಲಿದ್ದ ಅನ್ನವನ್ನು ತಿಂದಿದ್ದು, ಈ ಮೂಲಕ ಸೌಹಾರ್ದತೆ ಸಾರುವ ಪ್ರಯತ್ನ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಜಾತಿ, ಧರ್ಮಗಳಿಗೆ ಮಿಗಿಲಾದದ್ದು ಮಾನವೀಯತೆ. ನಮ್ಮೆಲ್ಲರ ಜಾತಿ ಒಂದೇ ಅದುವೇ ಮನುಷ್ಯ ಜಾತಿ. ಮನುಷ್ಯರಾಗಿ ಬಾಳುವುದೇ ನಿಜವಾದ ಧರ್ಮ. ಮನುಷ್ಯ ಸಂಬಂಧಗಳಿಗೆ ಜಾತಿ, ಧರ್ಮ ಎಂದಿಗೂ ಅಡ್ಡಿಯಾಗದು. ನಾವೆಲ್ಲರೂ ಸಹೋದರರಂತೆ ಬಾಳಬೇಕು. ಸ್ವಾಮೀಜಿ ಬಾಯಲ್ಲಿದ್ದ ಅನ್ನ ತಿಂದ ನಾನು ಸತ್ತು ಹೋದೆನಾ ಎಂದು ಜಮೀರ್ ಟೇಬಲ್ ಕುಟ್ಟಿ ಹೇಳಿರುವುದು ಈಗ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: ಪೆನ್ನು ಹಿಡಿಯುವ ಕೈಗಳಿಗೆ ಗನ್ ಕೊಡುವುದು ಸರ್ಕಾರದ ವಿಕೃತ ಮನಸ್ಥಿಗೆ ಸಾಕ್ಷಿ: ಜಮೀರ್ ಅಹ್ಮದ್ ಖಾನ್
ಮಾತ್ರವಲ್ಲದೇ ಮನುಷ್ಯರಾಗಿ ಬಾಳುವುದೇ ನಿಜವಾದ ಧರ್ಮ. ಮನುಷ್ಯ ಸಂಬಂಧಗಳಿಗೆ ಜಾತಿ, ಧರ್ಮ ಎಂದಿಗೂ ಅಡ್ಡಿಯಾಗದು. ನಾವೆಲ್ಲರೂ ಸಹೋದರರಂತೆ ಬಾಳಬೇಕು. ಉತ್ತರ ಪ್ರದೇಶದಲ್ಲಿ ಸರ್ಕಾರಿ ಶಾಲೆಯೊಂದರಲ್ಲಿ ದಲಿತ ವ್ಯಕ್ತಿ ಮಾಡಿರುವ ಅಡುಗೆಯನ್ನು ಸೇವನೆ ಮಾಡದರೆ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಡೆಸಿದ್ದರು. ಈ ವಿವಾದದ ಹಿನ್ನೆಲೆಯಲ್ಲಿ ಜಮೀರ್ ಅಹ್ಮದ್ ಖಾನ್ ದಲಿತ ಸ್ವಾಮೀಜಿ ನಾಗರಾಜ್ ಎಂಬುವವರಿಗೆ ತುತ್ತನ್ನು ತಿನ್ನಿಸಿ ಬಳಿಕ ಎಂಜಲನ್ನು ತಿನ್ನುವ ಮೂಲಕ ನಾವು ಅಸ್ಪೃಶ್ಯತೆಯ ವಿರುದ್ಧ ತಮ್ಮ ಪ್ರತಿರೋಧವನ್ನು ಸಲ್ಲಿಸಿರುವುದಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಜಮೀರ್ ಅಹ್ಮದ್ ಖಾನ್ ಈ ನಡೆ ಪರ ಹಾಗೂ ವಿರೋಧ ಚರ್ಚೆಗೆ ಗ್ರಾಸವಾಗಿದೆ.
ಜಾತಿ, ಧರ್ಮಗಳೆಲ್ಲವನ್ನೂ ಮೀರಿದ್ದು ಮಾನವೀಯತೆ. ನಮ್ಮ ನಡುವಿನ ಮನುಷ್ಯ ಸಂಬಂಧಗಳಿಗೆ ಜಾತಿ, ಧರ್ಮಗಳು ಎಂದಿಗೂ ಅಡ್ಡಬರಬಾರದು.
— B Z Zameer Ahmed Khan (@BZZameerAhmedK) May 22, 2022
ನಾನು, ನೀವು, ಎಲ್ಲರೂ ಮನುಷ್ಯ ಜಾತಿ.
ಮನುಷ್ಯನಾಗಿ ಬಾಳುವುದೇ ನಿಜವಾದ ಧರ್ಮ.#ಸಾಮರಸ್ಯ #ಮಾನವೀಯತೆ pic.twitter.com/3qVCvA6XuO