ಕುವೆಂಪು ಪಾಠ ಇರುವ 4ನೇ ತರಗತಿ 'ಪರಿಸರ ಅಧ್ಯಯನ' ಪುಸ್ತಕದ ಪರಿಷ್ಕರಣೆ ಆಗಿಲ್ಲ: ಸಚಿವ ಬಿಸಿ ನಾಗೇಶ್ ಸ್ಪಷ್ಟನೆ
ಪಠ್ಯ ಪುಸ್ತಕದಲ್ಲಿ ರಾಷ್ಟ್ರಕವಿ ಕುವೆಂಪು (Kuvempu) ಅವರಿಗೆ ಅಪಮಾನ ಮಾಡಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ ನೀಡಿದ್ದು, ಕುವೆಂಪು ಪಾಠ ಇರುವ 4ನೇ ತರಗತಿ 'ಪರಿಸರ ಅಧ್ಯಯನ' ಪುಸ್ತಕದ ಪರಿಷ್ಕರಣೆ ಆಗಿಲ್ಲ ಎಂದು ಹೇಳಿದ್ದಾರೆ.
Published: 24th May 2022 02:11 PM | Last Updated: 24th May 2022 02:30 PM | A+A A-

ಸಚಿವ ಬಿಸಿ ನಾಗೇಶ್ ಸ್ಪಷ್ಟನೆ
ಬೆಂಗಳೂರು: ಪಠ್ಯ ಪುಸ್ತಕದಲ್ಲಿ ರಾಷ್ಟ್ರಕವಿ ಕುವೆಂಪು (Kuvempu) ಅವರಿಗೆ ಅಪಮಾನ ಮಾಡಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ ನೀಡಿದ್ದು, ಕುವೆಂಪು ಪಾಠ ಇರುವ 4ನೇ ತರಗತಿ 'ಪರಿಸರ ಅಧ್ಯಯನ' ಪುಸ್ತಕದ ಪರಿಷ್ಕರಣೆ ಆಗಿಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರ ಕುರಿತು ಪಾಠ ಇರುವ 4ನೇ ತರಗತಿ 'ಪರಿಸರ ಅಧ್ಯಯನ' ಪುಸ್ತಕದ ಪರಿಷ್ಕರಣೆ ಆಗಿಲ್ಲ.
— B.C Nagesh (@BCNagesh_bjp) May 24, 2022
ರಾಜ್ಯ @BJP4Karnataka ಸರ್ಕಾರದ ಜನಪರ ಕಾರ್ಯಗಳನ್ನು ಸಹಿಸದ ಕಾಂಗ್ರೆಸ್ ಪಕ್ಷದ ಮುಖಂಡರು ದಿನಕ್ಕೊಂದು ಸುಳ್ಳು ಹೇಳಿ ಜನರ ದಾರಿ ತಪ್ಪಿಸಲು ಸಾಧ್ಯವಿಲ್ಲ.
ಸುಳ್ಳನ್ನು ಎಷ್ಟು ಸಲ ಹೇಳಿದರು ಸತ್ಯವಾಗದು ! pic.twitter.com/8oXgofvbda
ಈ ಸಂಬಂಧ ಟ್ವಿಟರ್ ನಲ್ಲಿ ಸಚಿವ ಬಿಸಿ ನಾಗೇಶ್ ಪಠ್ಯ ಪುಸ್ತಕ ಸಂಘ ನೀಡಿರುವ ಸ್ಪಷ್ಟೀಕರಣವನ್ನು ಲಗತ್ತಿಸಿದ್ದು, 'ಪ್ರಸ್ತುತ ಸುದ್ದಿ ಮಾಧ್ಯಮಗಳಲ್ಲಿ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪುಠ್ಯ ಪುಸ್ತಕ ಸಮಿತಿಯವರು 4ನೇ ತರಗತಿ ಪರಿಸರ ಅಧ್ಯಯನ ಅಧ್ಯಯನ ಪಠ್ಯಪುಸ್ತಕವನ್ನು ಪರಿಷ್ಕರಿಸಿದ್ದು, ಕುವೆಂಪು ರವರ ಬಗ್ಗೆ ಇದ್ದ ವಿಷಯವನ್ನು ಕೈಬಿಡಲಾಗಿದೆ ಅಥವಾ ಅಪಮಾನಗೊಳಿಸಲಾಗಿದೆ ಎಂದು ಪ್ರಸಾರ ಮಾಡಲಾಗುತ್ತಿದೆ. ವಾಸ್ತವವಾಗಿ 4ನೇ ತರಗತಿ ಪರಿಸರ ಅಧ್ಯಯನ ಅಭ್ಯಾಸ ಸಹಿತ ಪಠ್ಯಪುಸ್ತಕವನ್ನು ರೋಹಿತ್ ಚಕ್ರತೀರ್ಥ ಸಮಿತಿಯವರು ಪರಿಷ್ಕರಿಸಿರುವುದಿಲ್ಲ. ಬರಗೂರು ರಾಮಚಂದ್ರಪ್ಪ ರವರ ಸಮಿತಿಯು 2017-18ನೇ ಸಾಲಿನಲ್ಲಿ ಪರಿಷ್ಕರಿಸಿದ್ದ 4ನೇ ತರಗತಿ ಪರಿಸರ ಅಧ್ಯಯನ ಅಭ್ಯಾಸ ಸಹಿತ ಪಠ್ಯಪುಸ್ತಕದ “ಪ್ರತಿಯೊಬ್ಬರೂ ವಿಶಿಷ್ಟ “ ಎಂಬ ಪಾಠದಲ್ಲಿ "ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ' (ಕುವೆಂಪು) ಶೀರ್ಷಿಕೆ ಅಡಿಯಲ್ಲಿ ಇದ್ದ - 9 ಸಾಲುಗಳ ವಿಷಯಾಂಶವನ್ನು 2022-23ನೇ ಸಾಲಿನ ಪರಿಸರ ಅಧ್ಯಯನ ಪಠ್ಯಪುಸ್ತಕದಲ್ಲೂ ಯಾವುದೇ ಬದಲಾವಣೆ ಇಲ್ಲದೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಕೂಡ ಇದೇ ವಿಚಾರವಾಗಿ ಸ್ಪಷ್ಟನೆ ನೀಡಿದ್ದ ಸಚಿವರು, 'ರಾಷ್ಟ್ರಕವಿ ಕುವೆಂಪುಗೆ ಅಪಮಾನ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಶುದ್ಧ ಸುಳ್ಳು, ಎಂದು ಪಠ್ಯಪುಸ್ತಕ ಸಮೇತ ಬಂದು ಸುದ್ದಿಗೋಷ್ಠಿ ನಡೆಸಿದರು. ಇವತ್ತು ಕುವೆಂಪು ಬಗ್ಗೆ ಅವಹೇಳನ ಮಾಡಿದ್ದಾರೆ ಅಂತಿದ್ದಾರೆ. ಅನೇಕ ಪಠ್ಯಗಳನ್ನ ಕೈಬಿಟ್ಟಿದ್ದಾರೆ, ಆಗ ಮಾತಾಡದವ್ರು ಈಗ ಧ್ವನಿ ಎತ್ತುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಇರುವುವಾಗಲೇ ಇತಿಹಾಸ ಪುಸ್ತಕದಲ್ಲಿ ಓವರ್ ಬರ್ಡನ್ ಆಗ್ತಿದೆ ಅಂತ ಶಿಕ್ಷಕರು ಹೇಳ್ತಿದ್ದರು. ಹತ್ತನೇ ತರಗತಿಯ ನಾರಾಯಣ ಗುರು ಅವ್ರ ಪಠ್ಯ ಇದೆ ಅದನ್ನ ಎಲ್ಲೂ ತೆಗೆದಿಲ್ಲ. ಸುಳ್ಳು ಪ್ರಚಾರ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ರಾಜಕೀಯ ನಾಯಕರೆಲ್ಲ, ಹಿರಿಯರು ಟೀಟ್ವ್ ಮಾಡ್ತಾರೆ. ಸುಳ್ಳುನ್ನ ನೂರು ಸರಿ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದರು.