19 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಿ, ಸಂಪರ್ಕ ರಸ್ತೆ, ಇಳಿಜಾರು ನಿರ್ಮಿಸಲು ಮರೆತ ಅಧಿಕಾರಿಗಳು!!
ಇದೊಂದು ವಿಶಿಷ್ಠ ಸೇತುವೆ.. ಸ್ಥಳೀಯರ ಅನುಕೂಲಕ್ಕಾಗಿ ಅಧಿಕಾರಿಗಳು ಹತ್ತಾರು ಕೋಟಿ ವೆಚ್ಚ ಮಾಡಿ ಸೇತುವೆ ನಿರ್ಮಿಸಿದರೂ ಅದನ್ನು ಸ್ಥಳೀಯ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ..
Published: 24th May 2022 12:24 PM | Last Updated: 24th May 2022 01:11 PM | A+A A-

ಸಂಪರ್ಕ ರಸ್ತೆಯೇ ಇಲ್ಲದ ಸೇತುವೆ
ಕಾರವಾರ: ಇದೊಂದು ವಿಶಿಷ್ಠ ಸೇತುವೆ.. ಸ್ಥಳೀಯರ ಅನುಕೂಲಕ್ಕಾಗಿ ಅಧಿಕಾರಿಗಳು ಹತ್ತಾರು ಕೋಟಿ ವೆಚ್ಚ ಮಾಡಿ ಸೇತುವೆ ನಿರ್ಮಿಸಿದರೂ ಅದನ್ನು ಸ್ಥಳೀಯ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ..
ಹೌದು.. ಕಾರವಾರದ ಬೊಗ್ರಿಬೈಲ್ ಗ್ರಾಮದ ನಿವಾಸಿಗಳಿಗೆ ಸಂಪರ್ಕ ಕಲ್ಪಿಸಲು 19.18 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಬೃಹತ್ ಸೇತುವೆ ಯೋಜನೆಯು ಅಘನಾಶಿನಿ ನದಿಯ ಮೇಲೆ ಹಾದು ಹೋಗಿದೆ. ಸೇತುವೆ ನಿರ್ಮಾಣ ಪೂರ್ಣಗೊಂಡಿದ್ದರೂ ಸ್ಥಳೀಯರು ಈ ಸೇತುವೆ ಬಳಕೆ ಮಾಡಲು ಆಗುತ್ತಿಲ್ಲ. ಕಾರಣ ಸಂಪರ್ಕ ಕಲ್ಪಿಸುವ ಇಳಿಜಾರು, ರಸ್ತೆಗಳನ್ನು ನಿರ್ಮಿಸಲು ಅಧಿಕಾರಿಗಳು ಮರೆತಿರುವುದು...
ಇದನ್ನೂ ಓದಿ: ಬೆಂಗಳೂರು: ಆರು ವರ್ಷದ ಬಾಲಕನ ಮೂರುವರೆ ಲಕ್ಷ ರು ಮೌಲ್ಯದ ಚಿನ್ನ ಸರ ದರೋಡೆ ಮಾಡಿದ ದುಷ್ಕರ್ಮಿಗಳು
ಅಧಿಕಾರಿಗಳ ಈ ಎಡವಟ್ಟಿನಿಂದಾಗಿ ಸ್ಥಳೀಯರು ಸಾಕಷ್ಟ ಅವಸ್ಥೆ ಪಡುತ್ತಿದ್ದಾರೆ. ಸಂಪರ್ಕಕ್ಕೆ ಸೇತುವೆ ನಿರ್ಮಾಣ ಆಗಿದೆ ಆದರೂ ಅದರ ಬಳಕೆಗೆ ಸೂಕ್ತ ಮೂಲಸೌಕರ್ಯ ಆಗಿಲ್ಲ. ಗ್ರಾಮದ ಕೊಂಚ ಸ್ಥಿತಿವಂತ ನಿವಾಸಿಗಳು ತಮ್ಮಲ್ಲಿನ ಹಣ ಉಪಯೋಗಿಸಿ ಈ ಸೇತುವೆಗೆ ಮರದ ಕೊಂಬೆಗಳಿಂದ ಇಳಿಜಾರಿ ನಿರ್ಮಿಸಿದ್ದಾರೆಯಾದರೂ ಮಳೆಗಾಲದಲ್ಲಿ ಉಂಟಾಗುವ ಪ್ರವಾಹದಿಂದಾಗಿ ಮತ್ತು ಭಾರಿ ಗಾಳಿ, ಮಳೆಯಿಂದಾಗಿ ಈ ಇಳಿಜಾರು ನಾಶವಾಗುತ್ತದೆ. ಈ ಕುರಿತು ಮಾತನಾಡಿರುವ ಬೊಗ್ರಿಬೈಲ್ ಗ್ರಾಮದ ನಿವಾಸಿ ಜಯಂತ್ ನಾಯ್ಕ್ ಅವರು, ಕಳೆದ ಮೂರು ವರ್ಷಗಳಿಂದ ನಮ್ಮದು ಇದೇ ಪರಿಸ್ಥಿತಿ.. ಬೈಕಿನಲ್ಲಿ ಸೇತುವೆಯ ತನಕ ಹೋಗಿ ನದಿಯ ಪಕ್ಕದ ದೊಡ್ಡ ಮರದ ಕೆಳಗೆ ನಿಲ್ಲಿಸಲಾಗುತ್ತದೆ. ನಂತರ ಅಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಅಲುಗಾಡುವ ಏಣಿಯನ್ನು (ಇಳಿಜಾರು) ಉಪಯೋಗಿಸಿ 30 ಅಡಿ ಎತ್ತರದ ಸೇತುವೆ ಮೇಲೆ ಹೋಗಿ ಏರಬೇಕು. ತನ್ನ ಗಮ್ಯಸ್ಥಾನವನ್ನು ತಲುಪಲು ಇನ್ನೊಂದು ಬದಿಗೆ ನಡೆದುಕೊಂಡುಹೋಗಬೇಕು. ಟೆರೇಸ್ ಇಲ್ಲದ ಮನೆಯಂತೆ. ಈ ಸೇತುವೆಯ ಮೇಲೆ ಯಾವುದೇ ವಾಹನ ಹೋಗಲು ಸಾಧ್ಯವಾಗದ ಕಾರಣ ಈ ಸೇತುವೆ ನಿರ್ಮಾಣದಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಲಾರಿ-ಪ್ರಯಾಣಿಕ ಬಸ್ ನಡುವೆ ಭೀಕರ ಅಪಘಾತ; 8 ಸಾವು. 26 ಮಂದಿಗೆ ಗಾಯ
ನದಿಗೆ ಅಡ್ಡಲಾಗಿ ಇರುವ ಬೊಗ್ರಿಬೈಲ್, ಉಪ್ಪಿನಕಟ್ಟೆ, ಐಗಳ್ ಕುರ್ವೆ ಗ್ರಾಮಗಳಿಗೆ ಸೇತುವೆ ಹಾಗೂ ರಸ್ತೆ ನಿರ್ಮಿಸಿ ಸಂಪರ್ಕ ಕಲ್ಪಿಸಲು ಐದು ವರ್ಷಗಳ ಹಿಂದೆ ಯೋಜನೆ ಆರಂಭಿಸಲಾಗಿತ್ತು. ಕಾಮಗಾರಿಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ವಹಿಸಲಾಗಿತ್ತು. ಈ ಬಗ್ಗೆ ಮಾಕನಾಡಿರುವ ಮತ್ತೋರ್ವ ನಿವಾಸಿ ಪ್ರವೀಣ್ ನಾಯ್ಕ ಅವರು, ನಾವು 25 ಕಿಮೀ ಉದ್ದದ ಹೊನ್ನಾವರ ಅಥವಾ ಕುಮಟಾವನ್ನು ತಲುಪಲು ವೃತ್ತದ ಮಾರ್ಗವನ್ನು ತೆಗೆದುಕೊಳ್ಳುತ್ತಿದ್ದೆವು. ಈ ಸೇತುವೆಯಿಂದ ನಮ್ಮ ಪ್ರಯಾಣದ ಅವಧಿ ಕಡಿಮೆಯಾಗಬಹುದು ಎಂದು ಭಾವಿಸಿದ್ದೆವು. ಆದರೆ ಈ ಸೇತುವೆಗೆ ಸಂಪರ್ಕ ರಸ್ತೆಯೇ ಇಲ್ಲದೇ ಇದು ಅಪ್ರಯೋಜಕವಾಗಿದೆ. ರಸ್ತೆ ನಿರ್ಮಾಣವಾದರೆ ಮಾತ್ರ ಈ ಸೇತುವೆ ಬಳಕೆ ಆಗುತ್ತದೆ’ ಎನ್ನುತ್ತಾರೆ.
ಪ್ರತಿ ವರ್ಷ ಪ್ರವಾಹಕ್ಕೆ ತುತ್ತಾಗುವ ಇಳಿಜಾರು
ವಿಪರ್ಯಾಸವೆಂದರೆ ಎರಡು ವರ್ಷಗಳ ಹಿಂದೆ ಉದ್ಘಾಟನೆಯಾಗಬೇಕಿದ್ದ ಈ ಸೇತುವೆ ಕಾಮಗಾರಿ ಪೂರ್ಣಗೊಂಡು ಇದಕ್ಕೆ ಬಿಳಿ ಬಣ್ಣ ಬಳಿಯಲಾಗಿದೆ. ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕಾಗಿ ಜನರು ತಮ್ಮ ಭೂಮಿಯನ್ನು ಕಳೆದುಕೊಂಡಿದ್ದಾರೆ. ಅವರು ಪರಿಹಾರವನ್ನು ಸಹ ಪಡೆದಿದ್ದಾರೆ, ಆದರೆ ರಸ್ತೆ ಮಾತ್ರ ಇನ್ನೂ ಮರೀಚಿಕೆಯಾಗಿದೆ. ಪ್ರತಿ ವರ್ಷ ಪ್ರವಾಹದಲ್ಲಿ ಕೊಚ್ಚಿ ಹೋಗುವುದರಿಂದ ಗ್ರಾಮಸ್ಥರು ತಾತ್ಕಾಲಿಕ ಇಳಿಜಾರು ನಿರ್ಮಿಸುತ್ತಾರೆ. ಅದು ಕೂಡ ಮತ್ತೊಂದು ಪ್ರವಾಹ ಬಂದಾಗ ಹಾಳಾಗುತ್ತದೆ. ಆಗ ನಾವು ದೋಣಿಗಳಲ್ಲಿ ಸೇತುವೆಗೆ ಹೋಗುತ್ತೇವೆ ಎಂದು ಜಯಂತ್ ಹೇಳಿದರು.
ಸ್ಥಳೀಯ ಶಾಸಕರ ಹೇಳಿಕೆ?
ಇನ್ನು ಈ ಸೇತುವೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಕುಮಟಾ ಶಾಸಕ ದಿನಕರ ಶೆಟ್ಟಿ ಅವರು, ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರೇ ಕಾರಣ ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ಶಂಕುಸ್ಥಾಪನೆ ನಡೆದು ಬಹಳ ದಿನಗಳಾದರೂ ಯೋಜನೆ ಆರಂಭವಾಗಿರಲಿಲ್ಲ. ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯೋಜನೆಗೆ ಹಣ ನೀಡಿದ್ದೇನೆ. ಆದರೆ ಭೂ ಸ್ವಾಧೀನ ಪ್ರಕ್ರಿಯೆ ತೀರಾ ವಿಳಂಬವಾಗಿದೆ. ಹಿಂದಿನ ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದೆ. ಹಣ ಮಂಜೂರು ಮಾಡುವುದಾಗಿ ಸಚಿವರು ಹೇಳಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಯೋಜನೆ ಪೂರ್ಣಗೊಳ್ಳಲಿದೆ' ಎಂದರು.
ಇದನ್ನೂ ಓದಿ: ಪಾಗಲ್ ಪ್ರೇಮಿಯ ಹುಚ್ಚಾಟ?: ಶಾಲೆಯಿಂದ ರಸ್ತೆಯುದ್ದಕ್ಕೂ Sorry, Sorry ಬರಹ!!
ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮಾತನಾಡಿ, ಸೇತುವೆ ಕಾಮಗಾರಿ ಪೂರ್ಣಗೊಳಿಸಲು ವಿಶೇಷ ಹಣ ಮಂಜೂರು ಮಾಡಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅತಿಳಿಸಿದ್ದಾರೆ.