ಗೂಗಲ್ ಮ್ಯಾಪ್ ನಲ್ಲಿ ಜ್ಞಾನವಾಪಿ ಮಸೀದಿಯನ್ನು ದೇವಸ್ಥಾನ ಎಂದು ಬದಲಾಯಿಸುವಂತೆ ಹಳೆ ವಿದ್ಯಾರ್ಥಿಗಳಿಗೆ ಸೂಚಿಸಿದ ಬೆಂಗಳೂರಿನ ಶಾಲೆ!
ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ವಾರಣಾಸಿಯ ಜ್ಞಾನವಾಪಿ ಮಸೀದಿಯ ಬಗ್ಗೆ ಬೆಂಗಳೂರಿನ ಖಾಸಗಿ ಶಾಲೆಯೊಂದು ವಿವಾದಾತ್ಮಕ ಸೂಚನೆ ನೀಡಿದ್ದು, ಗೂಗಲ್ ಮ್ಯಾಪ್ನಲ್ಲಿ ಜ್ಞಾನವಾಪಿ ಮಸೀದಿಯನ್ನು ಜ್ಞಾನವಾಪಿ ದೇವಸ್ಥಾನ...
Published: 24th May 2022 07:48 PM | Last Updated: 25th May 2022 01:36 PM | A+A A-

ಜ್ಞಾನವಾಪಿ ಮಸೀದಿ
ಬೆಂಗಳೂರು: ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ವಾರಣಾಸಿಯ ಜ್ಞಾನವಾಪಿ ಮಸೀದಿಯ ಬಗ್ಗೆ ಬೆಂಗಳೂರಿನ ಖಾಸಗಿ ಶಾಲೆಯೊಂದು ವಿವಾದಾತ್ಮಕ ಸೂಚನೆ ನೀಡಿದ್ದು, ಗೂಗಲ್ ಮ್ಯಾಪ್ನಲ್ಲಿ ಜ್ಞಾನವಾಪಿ ಮಸೀದಿಯನ್ನು ಜ್ಞಾನವಾಪಿ ದೇವಸ್ಥಾನ ಎಂದು ಬದಲಾಯಿಸುವಂತೆ ತನ್ನ ಹಳೆಯ ವಿದ್ಯಾರ್ಥಿಗಳಿಗೆ ಇ-ಮೇಲ್ ಮಾಡಿದೆ.
ಕೆಲವು ದಿನಗಳ ಹಿಂದೆ ಹಳೆಯ ವಿದ್ಯಾರ್ಥಿಗಳಿಗೆ ಕಳುಹಿಸಲಾದ ಇಮೇಲ್ ನಲ್ಲಿ ಗೂಗಲ್ ಮ್ಯಾಪನ್ ನಲ್ಲಿ ಸ್ಥಳವನ್ನು ಹೇಗೆ ಬದಲಾಯಿಸುವುದು ಎಂಬುದರ ಕುರಿತು ವಿವರವಾದ ಸೂಚನೆಗಳನ್ನು ನೀಡಿದ್ದು, ಅದರಲ್ಲಿ ಜ್ಞಾನವಾಪಿ ಮಸೀದಿಯನ್ನು ದೇವಸ್ಥಾನ ಎಂದು ಗುರುತಿಸುವಂತೆ ಸೂಚಿಸಲಾಗಿದೆ.
ಇದನ್ನು ಓದಿ: ಜ್ಞಾನವಾಪಿ ಪ್ರಕರಣ: ನಿರ್ವಹಣೆ ಕುರಿತು ಮೇ 26ಕ್ಕೆ ವಿಚಾರಣೆ ನಿಗದಿಪಡಿಸಿದ ವಾರಾಣಸಿ ನ್ಯಾಯಾಲಯ!
ಗೂಗಲ್ ಈ ಬದಲಾವಣೆಗಳನ್ನು ಅಪ್ ಡೇಟ್ ಮಾಡುವವರೆಗೆ ನೀವು ಹೀಗೆ ಮಾಡಿ ಮತ್ತು ನಿಮ್ಮ ಹಿಂದೂ ಸಹೋದರ, ಸಹೋದರಿಯರಿಗೆ ಜ್ಞಾನವಾಪಿ ದೇವಸ್ಥಾನ ಎಂದು ಬದಲಾಯಿಸುವಂತೆ ಸೂಚಿಸಬೇಕು ಎಂದು ಇಮೇಲ್ ನಲ್ಲಿ ಬರೆಯಲಾಗಿದೆ. ಇದಕ್ಕೆ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.
ಬೆಂಗಳೂರಿನ ನ್ಯೂ ಹೊರೈಜನ್ ಪಬ್ಲಿಕ್ ಸ್ಕೂಲ್ ಈ ವಿವಾದಾತ್ಮಕ ಇಮೇಲ್ ಮಾಡಿದ್ದು, ಈಗ ಸರಿಯಾದ ಸ್ಕ್ರೀನಿಂಗ್ ಕಾರ್ಯವಿಧಾನಗಳಿಲ್ಲದೆ ಅದನ್ನು ಕಳುಹಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
"ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಬಗ್ಗೆ ಕಳುಹಿಸಲಾದ ಇಮೇಲ್ನ ವರದಿಗಳು ನಮ್ಮ ಗಮನಕ್ಕೆ ಬಂದಿವೆ ಮತ್ತು ಸಮಸ್ಯೆಯನ್ನು ಹೆಚ್ಚಿನ ಆದ್ಯತೆಯೊಂದಿಗೆ ನಿರ್ವಹಿಸಲಾಗುತ್ತಿದೆ. ಅಗತ್ಯವಿರುವ ಸರಿಯಾದ ಸ್ಕ್ರೀನಿಂಗ್ ಕಾರ್ಯವಿಧಾನಗಳಿಲ್ಲದೆ ಇಮೇಲ್ ಕಳುಹಿಸಲಾಗಿದೆ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ ಎಂದು ಶಾಲೆ ಹೇಳಿದೆ.