ಗದಗ: ಮುಳುಗಡೆ ಭೀತಿಯಿಂದ ದೇವಸ್ಥಾನ ರಕ್ಷಣೆಗೆ ಗ್ರಾಮಸ್ಥರ ಹೋರಾಟ
ಸಿಂಗಟಾಲೂರು ಏತ ನೀರಾವರಿ ಯೋಜನೆ ಜಾರಿಯಿಂದ ಮುಂಡರಗಿಯ ಕೆಲವು ಐತಿಹಾಸಿಕ ದೇವಾಲಯಗಳು ಮುಳುಗಡೆಯಾಗುವ ಸಂಭವವಿದ್ದು, ದೇಗುಲಗಳ ರಕ್ಷಣೆಗೆ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿ ತಾಲೂಕಿನಲ್ಲಿ ಸರಣಿ ಪ್ರತಿಭಟನೆಗಳು ನಡೆಯುತ್ತಿವೆ.
Published: 25th May 2022 12:47 PM | Last Updated: 25th May 2022 12:47 PM | A+A A-

ದೇವಸ್ಥಾನ
ಗದಗ: ಸಿಂಗಟಾಲೂರು ಏತ ನೀರಾವರಿ ಯೋಜನೆ ಜಾರಿಯಿಂದ ಮುಂಡರಗಿಯ ಕೆಲವು ಐತಿಹಾಸಿಕ ದೇವಾಲಯಗಳು ಮುಳುಗಡೆಯಾಗುವ ಸಂಭವವಿದ್ದು, ದೇಗುಲಗಳ ರಕ್ಷಣೆಗೆ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿ ತಾಲೂಕಿನಲ್ಲಿ ಸರಣಿ ಪ್ರತಿಭಟನೆಗಳು ನಡೆಯುತ್ತಿವೆ.
ಸ್ಥಳೀಯ ಶಾಸಕ ರಾಮಣ್ಣ ಲಮಾಣಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತುಕತೆ ನಡೆಸಿ ದೇಗುಲಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದಾರೆ.
17ನೇ ಶತಮಾನದಲ್ಲಿ ನಿರ್ಮಾಣವಾದ ಗುಮ್ಮಗೋಳದ ಗೋಣಿ ಬಸವೇಶ್ವರ ದೇವಸ್ಥಾನ, ಬಿದರಳ್ಳಿಯ ಬಿದಿರೆಲ್ಲಮ್ಮ ದೇವಸ್ಥಾನ, ವಿಠಲಾಪುರದ ರಸಲಿಂಗ ದೇವಸ್ಥಾನಗಳು ಹಿನ್ನೀರಿನಲ್ಲಿ ಮುಳುಗುವ ಸಾಧ್ಯತೆ ಇದೆ. ಅವುಗಳನ್ನು ಉಳಿಸುವಂತೆ ಮುಂಡರಗಿ ತಾಲೂಕಿನ ಕಾರ್ಯಕರ್ತರು, ಇತಿಹಾಸ ಪ್ರೇಮಿಗಳು, ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೆಲ ವರ್ಷಗಳ ಹಿಂದೆ ಪ್ರತಿಭಟನೆ ಆರಂಭವಾಗಿದ್ದು, ಸೋಮವಾರ ಬಿದರಳ್ಳಿ, ವಿಠಲಾಪುರ, ಗುಮ್ಮಗೋಳ, ಮುಂಡರಗಿ ಗ್ರಾಮಸ್ಥರು ಮುಂಡರಗಿಯ ಕೊಪ್ಪಳ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. “ನಮ್ಮ ಮುಂದಿನ ಪೀಳಿಗೆಗಾಗಿ ಈ ದೇವಾಲಯಗಳನ್ನು ಉಳಿಸಲು ನಾವು ಬಯಸುತ್ತೇವೆ. ಲಿಫ್ಟ್ ನೀರಾವರಿ ಯೋಜನೆಗೆ ನಮ್ಮ ವಿರೋಧವಿಲ್ಲ ಎಂದು ನಿವಾಸಿಯೊಬ್ಬರು ಹೇಳುತ್ತಾರೆ.
ಶೀಘ್ರದಲ್ಲೇ ಸಿಎಂ ಜತೆ ಮಾತನಾಡುತ್ತೇನೆ. ದೇವಾಲಯಗಳ ಬಗ್ಗೆ ನಿವಾಸಿಗಳು ಚಿಂತಿಸುವ ಅಗತ್ಯವಿಲ್ಲ, ಆದಷ್ಟು ಬೇಗ ಪರಿಹಾರ ಕಂಡುಕೊಳ್ಳುವ ವಿಶ್ವಾಸ ನನಗಿದೆ ಎಂದು ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಹೇಳುತ್ತಾರೆ.