ರೈಲ್ವೆ ಸ್ಟೇಷನ್ ಮಾಸ್ಟರ್‌ಗಳಿಂದ ಮೇ 31 ರಂದು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ
ಖಾಲಿ ಇರುವ ಶೇ. 20 ರಷ್ಚು ಹುದ್ದೆಗಳ ಭರ್ತಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನೈರುತ್ಯ ರೈಲ್ವೆ(ಎಸ್‌ಡಬ್ಲ್ಯುಆರ್) ವಲಯದಾದ್ಯಂತ 1240 ಸ್ಟೇಷನ್ ಮಾಸ್ಟರ್‌ಗಳು(ಎಸ್‌ಎಂ) ಮೇ 31 ರಂದು ಸಾಮೂಹಿಕ ರಜೆ ಹಾಕುವ...
Published: 25th May 2022 08:09 PM | Last Updated: 25th May 2022 08:09 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಖಾಲಿ ಇರುವ ಶೇ. 20 ರಷ್ಚು ಹುದ್ದೆಗಳ ಭರ್ತಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನೈರುತ್ಯ ರೈಲ್ವೆ(ಎಸ್‌ಡಬ್ಲ್ಯುಆರ್) ವಲಯದಾದ್ಯಂತ 1240 ಸ್ಟೇಷನ್ ಮಾಸ್ಟರ್‌ಗಳು(ಎಸ್‌ಎಂ) ಮೇ 31 ರಂದು ಸಾಮೂಹಿಕ ರಜೆ ಹಾಕುವ ಮೂಲಕ ಒಂದು ದಿನ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಈ ವಲಯದಲ್ಲಿ ಎಸ್‌ಎಂ ಕೇಡರ್‌ನಲ್ಲಿ ಸುಮಾರು ಶೇ. 20 ರಷ್ಟು ಹುದ್ದೆಗಳು ಖಾಲಿ ಇದೆ ಎಂದು ಭಾರತೀಯ ರೈಲ್ವೆ ಅಡಿಯಲ್ಲಿ ನೋಂದಾಯಿತ ಟ್ರೇಡ್ ಯೂನಿಯನ್ ಹೇಳಿದೆ.
ಇದನ್ನು ಓದಿ: ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಗೆ ಬೆಂಗಳೂರು ರೈಲ್ವೆ ವಿಭಾಗ ಸೇರ್ಪಡೆ!
ಅಖಿಲ ಭಾರತ ಪ್ರತಿಭಟನೆಯ ಭಾಗವಾಗಿ ಅಖಿಲ ಭಾರತ ಸ್ಟೇಷನ್ ಮಾಸ್ಟರ್ಸ್ ಅಸೋಸಿಯೇಷನ್(AISMA) ಈ ಪ್ರತಿಭಟನೆಗೆ ಕರೆ ನೀಡಿದೆ.
ನಿಲ್ದಾಣದಲ್ಲಿ ಕರ್ತವ್ಯದಲ್ಲಿರುವ ಎಸ್‌ಎಂ ಅನುಮತಿ ನೀಡುವವರೆಗೆ ಲೊಕೊ ಪೈಲಟ್‌ಗಳು ಯಾವುದೇ ನಿಲ್ದಾಣದಾದ್ಯಂತ ರೈಲುಗಳನ್ನು ಓಡಿಸಲು ಸಾಧ್ಯವಿಲ್ಲದ ಕಾರಣ ಮೇ 31 ರಂದು ರೈಲು ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಇಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ, ಅಖಿಲ ಭಾರತ ಸ್ಟೇಷನ್ ಮಾಸ್ಟರ್ಸ್ ಅಸೋಸಿಯೇಷನ್(ಎಐಎಸ್‌ಎಂಎ) ಎಸ್‌ಡಬ್ಲ್ಯುಆರ್ ನ ಪ್ರಧಾನ ವ್ಯವಸ್ಥಾಪಕ ಬಿ ಎಂ ಜಯಣ್ಣ ಮತ್ತು ಎಐಎಸ್‌ಎಂಎ ಬೆಂಗಳೂರು ವಿಭಾಗದ ಅಧ್ಯಕ್ಷ ಸಿ ನೆಡುಮಾರನ್ ಅವರು, ಮೇ 31 ರಂದು ಸಾಮೂಹಿಕ ರಜೆ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದರು.
ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ಗಳು ಸೂಕ್ಷ್ಮ ಹಾಗೂ ಸುರಕ್ಷತಾ ವರ್ಗಕ್ಕೆ ಸೇರಿರುವುದರಿಂದ ಬಹಳ ಅಗತ್ಯವಿರುವ ಖಾಲಿ ಹುದ್ದೆಗಳ ಭರ್ತಿ ಕುರಿತಂತೆ ಹಲವಾರು ಬಾರಿ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರೂ ಸಕಾರಾತ್ಮಕ ಸ್ಪಂದನೆ ಸಿಗುತ್ತಿಲ್ಲ. ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದವರಿಗೆ ಈ ಹಿಂದೆ ನೀಡುತ್ತಿದ್ದಂತೆ ಭತ್ಯೆಯನ್ನು ಈಗ ನೀಡುತ್ತಿಲ್ಲ. ಈಗ ಮತ್ತೆ ಭತ್ಯೆ ಮುಂದುವರೆಸಬೇಕು.
ಸ್ಟೇಷನ್ ಮಾಸ್ಟರ್ಗಳ ಪ್ರವೇಶ ದರ್ಜೆಯ ವೇತನವನ್ನು ಪರಿಷ್ಕರಿಸಬೇಕು. ಸುರಕ್ಷತೆ ಅಥವಾ ಒತ್ತಡದ ಭತ್ಯೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.