ಜಿಪಿಎಸ್ ಫೋನ್ ಕೊಂಡೊಯ್ದ ಪಿಹೆಚ್ ಡಿ ವಿದ್ಯಾರ್ಥಿಗೆ ಬೆಂಗಳೂರು- ಭುವನೇಶ್ವರ ವಿಮಾನದಲ್ಲಿ ನೋ ಎಂಟ್ರಿ!
ಭಾರತದ ವಿಮಾನ ನಿಲ್ದಾಣಗಳಲ್ಲಿ ಸ್ಯಾಟಲೈಟ್ ಫೋನ್ ಗಳಿಗೆ ಸಂಬಂಧಿಸಿದ ನಿಯಮಗಳ ಬಗ್ಗೆ ಮಾಹಿತಿಯ ಕೊರತೆ ಒಡಿಶಾದ ಪಿಹೆಚ್ ಡಿ ವಿದ್ಯಾರ್ಥಿಗೆ ದುಬಾರಿ ಬೆಲೆ ತೆರುವಂತೆ ಮಾಡಿದ್ದು ಬೆಂಗಳೂರಿನಿಂದ ಒಡಿಶಾಗೆ ವಿಮಾನ ಏರದಂತೆ ಮಾಡಿದೆ.
Published: 25th May 2022 02:06 PM | Last Updated: 25th May 2022 02:38 PM | A+A A-

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA)
ಬೆಂಗಳೂರು: ಭಾರತದ ವಿಮಾನ ನಿಲ್ದಾಣಗಳಲ್ಲಿ ಸ್ಯಾಟಲೈಟ್ ಫೋನ್ ಗಳಿಗೆ ಸಂಬಂಧಿಸಿದ ನಿಯಮಗಳ ಬಗ್ಗೆ ಮಾಹಿತಿಯ ಕೊರತೆ ಒಡಿಶಾದ ಪಿಹೆಚ್ ಡಿ ವಿದ್ಯಾರ್ಥಿಗೆ ದುಬಾರಿ ಬೆಲೆ ತೆರುವಂತೆ ಮಾಡಿದ್ದು ಬೆಂಗಳೂರಿನಿಂದ ಒಡಿಶಾಗೆ ವಿಮಾನ ಏರದಂತೆ ಮಾಡಿದೆ.
ಜಿಪಿಎಸ್ ನ್ನು ಹೊಂದಿದ ಫೋನ್ ನ್ನು ಪಿಹೆಚ್ ಡಿ ವಿದ್ಯಾರ್ಥಿಯಾಗಿರುವ ಬಿಕಾಸ್ ಸಾಹು ಹೊಂದಿದ್ದರು. ಪರಿಣಾಮ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA) ದಲ್ಲಿ ಬೆಳಿಗ್ಗೆ 8:45 ಕ್ಕೆ ತಾವು ಹೊರಡಬೇಕಿದ್ದ ವಿಮಾನವನ್ನು ತಪ್ಪಿಸಿಕೊಂಡು ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿದ್ದರು.
ಖುರ್ದಾದಲ್ಲಿನ ರಾಷ್ಟ್ರೀಯ ವಿಜ್ಞಾನ, ಶಿಕ್ಷಣ ಮತ್ತು ಸಂಶೋಧನೆಯ ಜೈವಿಕ ವಿಜ್ಞಾನಗಳ ಸಂಸ್ಥೆಯಲ್ಲಿ ಪಿಹೆಚ್ ಡಿ ಮೂರನೇ ವರ್ಷ ಅಧ್ಯಯನ ಮಾಡುತ್ತಿರುವ ಬಿಕಾಸ್ ಸಾಹು, ಈ ಪ್ರಕರಣದ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, ನಾನು ನನ್ನ ಗ್ರಾಮೀಣ್ ಜಿಪಿಎಸ್ ಫೋನ್ ನ್ನು ಬ್ಯಾಗ್ ನಲ್ಲಿಟ್ಟಿದ್ದೆ. ಸಿಐಎಸ್ ಎಫ್ ತಪಾಸಣೆ ವೇಳೆ ಅದನ್ನು ಹೊರತೆಗೆದು ಈ ನಿರ್ದಿಷ್ಟ ಮಾದರಿಯ ಫೋನ್ ಗೆ ವಿಮಾನ ನಿಲ್ದಾಣದ ಒಳಗೆ ನಿರ್ಬಂಧವಿದೆ ಎಂದು ಹೇಳಿ ನನ್ನನ್ನು ವಶಕ್ಕೆ ಪಡೆದರು" ಎಂದು ಹೇಳಿದ್ದಾರೆ.
ಈ ಬಳಿಕ ಸಿಐಎಸ್ಎಫ್ ಏರ್ಪೋರ್ಟ್ ಪೊಲೀಸರನ್ನು ಕರೆದು ದೂರು ನೀಡಿದರು. ಬಳಿಕ ವಿದ್ಯಾರ್ಥಿ ಪೋನ್ ಗೆ ಸಂಬಂಧಿಸಿದ ದಾಖಲೆಗಳು ಹಾಗೂ ಅವರ ಗುರುತಿನ ಕುರಿತ ದಾಖಲೆಗಳನ್ನು ನೀಡಬೇಕಾಯಿತು.
ನನ್ನ ಕೋರ್ಸ್ ನ ಭಾಗವಾಗಿ ನಾನು ಮಣ್ಣು ಪರೀಕ್ಷೆ ನಡೆಸುತ್ತೇನೆ, ಇದಕ್ಕಾಗಿ ಲೊಕೇಷನ್ ಇಂಡಿಕೇಟರ್ ಗಾಗಿ ಈ ಫೋನ್ ನನಗೆ ಅತ್ಯಗತ್ಯ ಆದ್ದರಿಂದ ಈ ಫೋನ್ ನ್ನು ನಾನು ಯಾವಾಗಲೂ ಜೊತೆಗಿರಿಸಿಕೊಳ್ಳುತ್ತೇನೆ. ವಿಮಾನ ನಿಲ್ದಾಣದಲ್ಲಿ ಈ ಫೋನ್ ನ್ನು ನಿರ್ಬಂಧಿಸಲಾಗಿದೆ ಎಂಬ ಮಾಹಿತಿ ನನಗೆ ಇರಲಿಲ್ಲ ಎಂದು ಬಿಕಾಸ್ ಸಾಹು ಹೇಳಿದ್ದಾರೆ.
ದಾಖಲೆಗಳು, ವಿವರಣೆಗಳನ್ನು ನೀಡಿದ ಬಳಿಕ, ಹೆಚ್ಚಿನ ತಪಾಸಣೆ ಬಳಿಕ ವಿದ್ಯಾರ್ಥಿಯನ್ನು ಬಿಡುಗಡೆ ಮಾಡಲಾಗಿದೆ.