ಬೆಂಗಳೂರು: ದೊಡ್ಡಗುಬ್ಬಿ ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರು ಪಾಲು
ದೊಡ್ಡ ಗುಬ್ಬಿ ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ಮುಳುಗಿ ನೀರುಪಾಲಾಗಿರುವ ಘಟನೆ ಗುರುವಾರ ನಡೆದಿದೆ. ಮೃತರನ್ನು ಇಮ್ರಾನ್ ಪಾಷಾ (19) ಮುಬಾರಕ್ (18) ಸಾಹಿಲ್ (18 ) ಗುರುತಿಸಲಾಗಿದೆ.
Published: 26th May 2022 11:48 PM | Last Updated: 26th May 2022 11:50 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ದೊಡ್ಡ ಗುಬ್ಬಿ ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ಮುಳುಗಿ ನೀರುಪಾಲಾಗಿರುವ ಘಟನೆ ಗುರುವಾರ ನಡೆದಿದೆ. ಮೃತರನ್ನು ಇಮ್ರಾನ್ ಪಾಷಾ (19) ಮುಬಾರಕ್ (18) ಸಾಹಿಲ್ (18 ) ಗುರುತಿಸಲಾಗಿದೆ.
ಸಾರಾಯಿಪಾಳ್ಯದ ಐವರು ಯುವಕರು ದೊಡ್ಡಗುಬ್ಬಿ ಕೆರೆಗೆ ಈಜಲು ತೆರಳಿದಾಗ ಈ ದುರ್ಘಟನೆ ಸಂಭವಿಸಿದೆ. ಈಜಾಡುತ್ತಿದ್ದಾಗ ಇಮ್ರಾನ್, ಮುಬಾರಕ್, ಸಾಹಿಲ್ ನೀರಿನಲ್ಲಿ ಮುಳುಗಿದ್ದಾರೆ. ಅವರು ಮುಳುಗಿದ್ದನ್ನು ಗಮನಿಸಿ ಕೆರೆಯ ದಡದಲ್ಲಿದ್ದ ಅಬ್ದುಲ್ ರೆಹಮಾನ್, ಶಾಹಿದ್ ಕೆರೆಯಿಂದ ಮೇಲೆ ಬಂದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ರಾತ್ರಿವರೆಗೂ ಶೋಧ ಕಾರ್ಯಾಚರಣೆ ನಡೆಸಿದ್ದು, ಯಾರೊಬ್ಬರ ಸುಳಿವು ಪತ್ತೆಯಾಗಿಲ್ಲ. ಶುಕ್ರವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.