ಖಾಸಗಿ ಶಾಲೆಯ ಗುಮಾಸ್ತನ ವಿರುದ್ಧ 10 ನೇ ತರಗತಿ ವಿಜ್ಞಾನದ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ
10 ನೇ ತರಗತಿ ಪರೀಕ್ಷೆಗಳು ಮುಗಿದು ಫಲಿತಾಂಶವೂ ಪ್ರಕಟವಾಗಿದ್ದು, ರಾಮನಗರದ ಡಿಡಿಪಿಐ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಬಳಿಕ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
Published: 26th May 2022 02:28 PM | Last Updated: 26th May 2022 02:28 PM | A+A A-

ಸಾಂಕೇತಿಕ ಚಿತ್ರ
ಬೆಂಗಳೂರು: 10 ನೇ ತರಗತಿ ಪರೀಕ್ಷೆಗಳು ಮುಗಿದು ಫಲಿತಾಂಶವೂ ಪ್ರಕಟವಾಗಿದ್ದು, ರಾಮನಗರದ ಡಿಡಿಪಿಐ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಬಳಿಕ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪೊಲೀಸರು 8 ಮಂದಿಯನ್ನು ಬಂಧಿಸುವ ಪ್ರಕ್ರಿಯೆಯಲ್ಲಿದ್ದಾರೆ. ಹೆಚ್ ಜಿ ಗಂಗಣ್ಣಸ್ವಾಮಿ, ದೂರನ್ನು ದಾಖಲಿಸಿರುವ ಡಿಡಿಪಿಐ ಆಗಿದ್ದು ಕ್ಲೆರಿಕಲ್ ಸಿಬ್ಬಂದಿ ಹಾಗೂ ಇನ್ನಿತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಾಗಡಿಯಲ್ಲಿ ಈ ಖಾಸಗಿ ಶಾಲೆ ಇದ್ದು, ಗುಮಾಸ್ತನನ್ನು ರಂಗೇ ಗೌಡ ಎಂದು ಗುರುತಿಸಲಾಗಿದೆ. ಏ.11 ರಂದು ಪರೀಕ್ಷೆಯ ದಿನದಂದೇ ವಿಜ್ಞಾನದ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿದ್ದ ಶಂಕೆ ವ್ಯಕ್ತವಾಗಿದೆ. ಪರೀಕ್ಷೆಯ ಸಮಯ ಬೆಳಿಗ್ಗೆ 10.30 ರಿಂದ 1.45 ವರೆಗೆ ಇತ್ತು. ಬೆಳಿಗ್ಗೆ 10.30 ರ ವೇಳೆಗೆ ಮಾಗಡಿ ಟೌನ್ ನ ವಾಟ್ಸ್ ಆಪ್ ಗ್ರೂಪ್ ನಲ್ಲಿ ಪ್ರಶ್ನೆ ಪತ್ರಿಕೆ ಲಭ್ಯವಿತ್ತು.
ಗೌಡ ಪ್ರಶ್ನೆಪತ್ರಿಕೆಯ ಫೋಟೋವನ್ನು ವಾಟ್ಸ್ ಆಪ್ ಗ್ರೂಪ್ ನಲ್ಲಿ ಹಣ ಪಡೆದು ಹಾಕಿದ್ದರು. ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡುವುದಕ್ಕೂ ಮುನ್ನವೇ ಅದು ಸಾರ್ವಜನಿಕವಾಗಿತ್ತು.