ಮೆದುಳು ನಿಷ್ಕ್ರಿಯಗೊಂಡ ಬಾಲಕನ ಅಂಗಾಂಗ ದಾನ ಮಾಡಿದ ಕುಟುಂಬ, ಆಸ್ಪತ್ರೆ ಶುಲ್ಕ ಮನ್ನಾ ಮಾಡಿದ ಆರೋಗ್ಯ ಇಲಾಖೆ!
ಮನೆಯ ಮಗು ತೀರಿಕೊಂಡರೂ ತಮ್ಮ ದುಃಖವನ್ನು ಬದಿಗಿಟ್ಟು, ಮೆದುಳು ನಿಷ್ಕ್ರಿಯಗೊಂಡ 12 ವರ್ಷದ ಸಂಜಯ್‌ನ ಕುಟುಂಬವು ನಗರದ ಖಾಸಗಿ ಆಸ್ಪತ್ರೆಗೆ ಹೃದಯ ಕವಾಟಗಳನ್ನು ದಾನ ಮಾಡಲು ನಿರ್ಧರಿಸಿದೆ. ಅಲ್ಲದೆ ಇಬ್ಬರು ಮಕ್ಕಳನ್ನು ಉಳಿಸಬಲ್ಲ ಮೂತ್ರಪಿಂಡ ಮತ್ತು ಯಕೃತ್ತನ್ನು ದಾನ ಮಾಡಲು ನಿರ್ಧರಿಸಿದೆ.
Published: 28th May 2022 02:08 PM | Last Updated: 28th May 2022 02:47 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಮನೆಯ ಮಗು ತೀರಿಕೊಂಡರೂ ತಮ್ಮ ದುಃಖವನ್ನು ಬದಿಗಿಟ್ಟು, ಮೆದುಳು ನಿಷ್ಕ್ರಿಯಗೊಂಡ 12 ವರ್ಷದ ಸಂಜಯ್‌ನ ಕುಟುಂಬವು ನಗರದ ಖಾಸಗಿ ಆಸ್ಪತ್ರೆಗೆ ಹೃದಯ ಕವಾಟಗಳನ್ನು ದಾನ ಮಾಡಲು ನಿರ್ಧರಿಸಿದೆ. ಅಲ್ಲದೆ ಇಬ್ಬರು ಮಕ್ಕಳನ್ನು ಉಳಿಸಬಲ್ಲ ಮೂತ್ರಪಿಂಡ ಮತ್ತು ಯಕೃತ್ತನ್ನು ದಾನ ಮಾಡಲು ನಿರ್ಧರಿಸಿದೆ.
ಕಳೆದ ಭಾನುವಾರ ಮುಂಜಾನೆ ಜಕ್ಕೂರು ಮೇಲ್ಸೇತುವೆ ಅಪಘಾತದಲ್ಲಿ ಸಂಜಯ್ ಗಂಭೀರವಾಗಿ ಗಾಯಗೊಂಡಿದ್ದರು. ಆಂಧ್ರಪ್ರದೇಶದ ದಿನಗೂಲಿ ಕಾರ್ಮಿಕರಾಗಿರುವ ಅವರ ಬಡ ಪೋಷಕರಿಗೆ 1.35 ಲಕ್ಷ ರೂಪಾಯಿ ಮೊತ್ತದ ಬಿಲ್ ಅನ್ನು ಭರಿಸುವ ಚಿಂತೆ ಒಂದೆಡೆಯಾದರೆ ಮೆದುಳಿನ ಸಾವು ಮತ್ತೊಂದು ಆಘಾತವಾಗಿತ್ತು. ಇಂತಹ ಸಂಗರ್ಭದಲ್ಲಿ ಪರೋಪಕಾರವಾಗಿ ಸಂಜಯ್ ನ ಹೃದಯ ಕವಾಟ, ಮೂತ್ರಪಿಂಡ ಮತ್ತು ಯಕೃತ್ತನ್ನು ದಾನ ಮಾಡುವಂತೆ ಬಾಲಕನ ಚಿಕ್ಕಪ್ಪ ಗೋವಿಂದಪ್ಪ ಸಿ ಟಿ ಹೇಳಿದರು.
ಸಂಜಯ್ ಕುಟುಂಬಸ್ಥರು ಆಂಧ್ರ ಪ್ರದೇಶ ಮೂಲದವರು. ಅಲ್ಲಿನ ಸರ್ಕಾರದ ಹೆಲ್ತ್ ಕಾರ್ಡು ಕರ್ನಾಟಕಕ್ಕೆ ಅನ್ವಯವಾಗುವುದಿಲ್ಲ. ಸಂಜಯ್ ನ ತಾಯಿಯ ಚಿನ್ನವನ್ನು ಒತ್ತೆಗಿಟ್ಟು 65 ಸಾವಿರ ರೂಪಾಯಿ ಭರಿಸಿದರು. ಆರೋಗ್ಯ ಇಲಾಖೆ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಇತರ ಒಂದೂವರೆ ಲಕ್ಷ ಬಿಲ್ ನ್ನು ಮನ್ನಾ ಮಾಡಲಾಯಿತು ಎಂದು ನಾಗರಾಜು ತಿಳಿಸಿದ್ದಾರೆ.
5ನೇ ತರಗತಿಯಲ್ಲಿ ಓದುತ್ತಿರುವ ನಾಗರಾಜ್ ಕಳೆದ ಶನಿವಾರ ಸಂಜೆ ಜಕ್ಕೂರು ಸಮೀಪವಿರುವ ಚಿಕ್ಕಮ್ಮನ ಮನೆಗೆ ಆಂಧ್ರ ಪ್ರದೇಶದ ಹಳ್ಳಿಯಿಂದ ಬಂದಿದ್ದ. ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಮರುದಿನ ಭಾನುವಾರ ಬೆಳಗ್ಗೆ 7.30ಕ್ಕೆ ಸಂಭವಿಸಿದ್ದು ಸಂಜಯ್ ನ ಅಂಕಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಸಂಜಯ್ ನನ್ನು ಬೈಕ್ ಎಳೆದುಕೊಂಡು ಹೋಗಿತ್ತು. ನಿನ್ನೆ ಸಂಜಯ್ ನ ಮೃತದೇಹವನ್ನು ಹುಟ್ಟೂರಿಗೆ ಕೊಂಡೊಯ್ಯಲಾಗಿತ್ತು. ಸಂಜಯ್ ಅವರ ಅಂಗಾಂಗಗಳನ್ನು ದಾನ ಮಾಡಲು ಅವರ ಕುಟುಂಬವನ್ನು ಮನವೊಲಿಸಲು ಕರ್ನಾಟಕ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (SOTTO) ಅಧಿಕಾರಿಗಳಿಗೆ ಸ್ವಲ್ಪ ಸಮಯ ಹಿಡಿಯಿತು.
ಇದನ್ನೂ ಓದಿ: ಬೆಂಗಳೂರು: ಜಕ್ಕೂರು ಮೇಲ್ಸೇತುವೆ ಮೇಲೆ ಅಪಘಾತ: ಗಾಯಗೊಂಡಿದ್ದ ಬಾಲಕನ ಮಿದುಳು ನಿಷ್ಕ್ರಿಯ!
ಆತನ ಅಂಗಾಂಗಗಳನ್ನು ದಾನ ಮಾಡಿದರೆ ಗ್ರಾಮಸ್ಥರು ಆರೋಪ ಮಾಡುತ್ತಾರೆ ಎಂದು ಪೋಷಕರು ಆತಂಕಗೊಂಡಿದ್ದರು. ಆದರೆ ದಾನಿಯು ಸರ್ಕಾರದಿಂದ ಅಥವಾ ಫಲಾನುಭವಿಯಿಂದ ಯಾವುದೇ ಪ್ರಯೋಜನವನ್ನು ಪಡೆಯುವುದಿಲ್ಲ ಅಥವಾ ಫಲಾನುಭವಿಗಳಿಗೆ ಅಂಗಗಳಿಗೆ ಶುಲ್ಕ ವಿಧಿಸಲಾಗುವುದಿಲ್ಲ ಎಂದು SOTTO ಮೂಲಗಳು ಸ್ಪಷ್ಟಪಡಿಸಿವೆ.
ಅಪಘಾತಕ್ಕೀಡಾದವರ ಚಿಕಿತ್ಸಾ ವಿಧಾನಗಳಿಗೆ ಆಸ್ಪತ್ರೆಯ ಶುಲ್ಕವನ್ನು ಅವರು ಬ್ರೈನ್‌ಡೆಡ್ ಎಂದು ಘೋಷಿಸುವವರೆಗೆ ಮತ್ತು ಕನಿಷ್ಟ ಅಂಗಾಂಗ ಮರುಪಡೆಯುವಿಕೆ ಶುಲ್ಕವನ್ನು SOTT O ನಿಂದ ಭರಿಸಲಾಗುವುದು. ಸ್ವೀಕರಿಸುವವರು ಶಸ್ತ್ರಚಿಕಿತ್ಸೆಯ ಶುಲ್ಕವನ್ನು ಮಾತ್ರ ಭರಿಸಬೇಕಾಗುತ್ತದೆ ಎಂದು BGS ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷ ಭರತೀಶ್ ರೆಡ್ಡಿ ಹೇಳುತ್ತಾರೆ.
ಶುಲ್ಕ ಭರಿಸಿದ ರಾಜ್ಯ ಸರ್ಕಾರ: ಅಪಘಾತದ ಸಂದರ್ಭದಲ್ಲಿ, ಆರೋಗ್ಯ ಕರ್ನಾಟಕ ಕಾರ್ಡ್ ಹೊಂದಿರುವ ವ್ಯಕ್ತಿಯು ತುರ್ತು ಆಧಾರದ ಮೇಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ಸರ್ಕಾರಿ ಆಸ್ಪತ್ರೆಯಿಂದ ಉಲ್ಲೇಖಿಸಿದ್ದರೆ ಮತ್ತು ವ್ಯಕ್ತಿಯು ಬಿಪಿಎಲ್ ಕುಟುಂಬದವರಾಗಿದ್ದರೆ, ಸಂಪೂರ್ಣ ಬಿಲ್ ಮೊತ್ತವನ್ನು ಸರ್ಕಾರ ಭರಿಸುತ್ತದೆ.
ವ್ಯಕ್ತಿ ಎಪಿಎಲ್ ಕುಟುಂಬದವರಾಗಿದ್ದರೆ ಶೇ.30ರಷ್ಟು ಮೊತ್ತವನ್ನು ಸರಕಾರವೇ ಭರಿಸಲಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಅಂಗಾಂಗಗಳನ್ನು ದಾನ ಮಾಡುವ ಎಪಿಎಲ್ ಕುಟುಂಬಗಳಿಂದ ಅಪಘಾತಕ್ಕೀಡಾದವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಲು ಕನಿಷ್ಠ ಎನ್‌ಜಿ ಓಎಸ್‌ಗಳು ಮುಂದೆ ಬರಬೇಕು, ಇದು ಮೃತರ ಕುಟುಂಬಕ್ಕೆ ಸ್ವಲ್ಪ ಸಾಂತ್ವನ ನೀಡುತ್ತದೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.