ಬೆಂಗಳೂರು: ಎನ್ಸಿಬಿ ಯಿಂದ 52 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್'ಸಿಬಿ), ಬೆಂಗಳೂರು ವಲಯ ಘಟಕದ ಎನ್ಸಿಬಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಬರೋಬ್ಬರಿ ರೂ.52 ಕೋಟಿ ಮೌಲ್ಯದ ಅಂದರೆ, 34.89 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.
Published: 28th May 2022 08:04 AM | Last Updated: 28th May 2022 01:37 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್'ಸಿಬಿ), ಬೆಂಗಳೂರು ವಲಯ ಘಟಕದ ಎನ್ಸಿಬಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಬರೋಬ್ಬರಿ ರೂ.52 ಕೋಟಿ ಮೌಲ್ಯದ ಅಂದರೆ, 34.89 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.
ಜಿಂಬಾಬ್ವೆಯಿಂದ ಬೆಂಗಳೂರಿಗೆ ಬಂದ ನೈಜೀರಿಯಾ ಮೂಲದ ಮಹಿಳೆಯೊಬ್ಬಳು ಸೂಟ್ ಕೇಸ್ ತಳಭಾಗದಲ್ಲಿ 7ಕೆಜಿ ಹೆರಾಯಿನ್ ಸಾಗಾಟ ಮಾಡುತ್ತಿದ್ದಳು. ನಗರದ ಕೆಐಎಎಲ್ ಏರ್ಪೋರ್ಟ್ ನಲ್ಲಿ ಮಹಿಳೆಯನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಮಹಿಳಾ ಡ್ರಗ್ ಪೆಡ್ಲರ್ ಮಾಹಿತಿ ಆಧರಿಸಿ ಮತ್ತಿಬ್ಬರು ಪೆಡ್ಲರ್ ಗಳನ್ನ ಬಂಧಿಸಿದ್ದಾರೆ.
ಸಧ್ಯ ಎನ್ಸಿಬಿ ಅಧಿಕಾರಿಗಳನ್ನು ಈ ಇಬ್ಬರು ಮಹಿಳಾ ಪೆಡ್ಲರ್ ಗಳನ್ನ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಇಬ್ಬರು ಮಹಿಳೆಯರು ಮತ್ತಷ್ಟು ಮಾಹಿತಿ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕೆ.ಆರ್.ಮಾರುಕಟ್ಟೆಯಲ್ಲಿ ಮಾದಕವಸ್ತು ಮಾರುತ್ತಿದ್ದ ಆರೋಪಿ ಬಂಧನ
ಎನ್ಸಿಬಿ ಅಧಿಕಾರಿಗಳು ಮಹಿಳೆಯರು ತಂಗಿದ್ದ ಲಾಡ್ಜ್ ನಲ್ಲಿ ಪರಿಶೀಲನೆ ನಡೆಸಿ, ಅದೇ ಮಾದರಿಯ ಬ್ಯಾಗ್ ನಲ್ಲಿ 6.890 ಕೆಜಿ ಹೆರಾಯಿನ್ ಪತ್ತೆಯಾಗಿದೆ. ಕೂಡಲೇ ಅಧಿಕಾರಿಗಳು ತಾಂತ್ರಿಕ ತನಿಖೆ ನಡೆಸಿದರು. ಈ ವೇಳೆ ಇನ್ನೂ ಮೂವರ ಬಗ್ಗೆ ಮಾಹಿತಿ ಪತ್ತೆಯಾಗಿದೆ. ಇವರು ರಾಜಧಾನಿ ಎಕ್ಸ್ಪ್ರೆಸ್ ರೈಲಿನ ಮೂಲಕ ಬೆಂಗಳೂರಿಂದ ದೆಹಲಿಗೆ ತರಳಿರೊ ಮಾಹಿತಿ ಪಡೆದು, ಕೂಡಲೇ ಇಂದೋರ್ ಎನ್ಸಿಬಿ ಟೀಂಗೆ ಮಾಹಿತಿ ರವಾನೆ ಮಾಡಿದರು.
ಇಟಾರ್ಸಿಯ ಲಾಡ್ಜ್ ನಲ್ಲಿ 21 ಕೆಜಿ ಹೆರಾಯಿನ್ ವಶ ಪಡೆಸಿಕೊಂಡು, ಮೂವರು ಮಹಿಳೆಯರನ್ನ ಬಂಧಿಸಿದ್ದಾರೆ. ಮಹಿಳೆಯರನ್ನ ವಿಚಾರಣೆ ನಡೆಸಿದಾಗ ನೈಜೀರಿಯಾದ ಕಿಂಗ್ ಪಿನ್ ಮತ್ತು ದೆಹಲಿಯ ಆತನ ಜಾಲದ ಬಗ್ಗೆ ಮಾಹಿತಿ ಸಿಕ್ಕಿದೆ. ಈಗ ಎನ್ಸಿಬಿ ಅಧಿಕಾರಿಗಳು ನೈಜೀರಿಯಾ ಮೂಲದ ಮಹಿಳೆ ಸೇರಿ ಒಂಭತ್ತು ಜನರನ್ನ ಬಂಧಿಸಿದ್ದಾರೆ.