
ಆತ್ಮಹತ್ಯೆಗೆ ಶರಣಾಗಿರುವ ಪರಸಪ್ಪ ಕೊನ್ನೂರು
ಮೈಸೂರು: ಪೊಲೀಸ್ ಪೇದೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಜಲಪುರಿ ಪೊಲೀಸ್ ಕ್ವಾಟ್ರಸ್ ನಲ್ಲಿ ನಡೆದಿದೆ.
ಪರಸಪ್ಪ ಕೊನ್ನೂರು (27) ಮೃತ ಪೊಲೀಸ್ ಪೇದೆ ಎಂದು ಹೇಳಲಾಗುತ್ತಿದೆ. ಪರಸಪ್ಪ ಅವರು ಮೈಸೂರಿನ ದೇವರಾಜ ಠಾಣೆ ಕರ್ತವ್ಯ ನಿರ್ವಹಿಸುತ್ತಿದ್ದರು. ಉತ್ತರ ಕರ್ನಾಟಕ ಮೂಲದ ಪರಸಪ್ಪ ಕೊನ್ನೂರು 2016ನೇ ಬ್ಯಾಚ್ ನಲ್ಲಿ ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದರು.
ಇದನ್ನೂ ಓದಿ: ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದ ಉತ್ತರಖಂಡ ಮಾಜಿ ಸಚಿವ ಆತ್ಮಹತ್ಯೆ
ಪತ್ನಿ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಕ್ವಾಟ್ರಸ್ ನಲ್ಲಿ ನೇಣುಬಿಗಿದುಕೊಂಡು ಪರಸಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ.
ಒಂದೂವರೆ ವರ್ಷಗಳ ಹಿಂದಷ್ಟೇ ಪರಸಪ್ಪ ಅವರು ಮದುವೆಯಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ನಜರ್ ಬಾದ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.