ರಾಜ್ಯದಲ್ಲಿ 30 ಮಂದಿ ಕೋವಿಡ್ ಅನಾಥ ಮಕ್ಕಳಿಗೆ 'ಪಿಎಂ ಕೇರ್ಸ್ ಕಾರ್ಡ್'
ಕೋವಿಡ್ ನಿಂದ ತಮ್ಮ ಪೋಷಕರನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ ಆರ್ಥಿಕ, ಶೈಕ್ಷಣಿಕ ಮತ್ತಿತರ ಆಸರೆ ನೀಡುವ ಮಹತ್ವದ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಚಾಲನೆ ನೀಡಿದ್ದು, ನಗರದ 30 ಮಂದಿ ಯೋಜನೆಯ ಫಲಾನುಭವಿಗಳಾಗಿದ್ದಾರೆ.
Published: 31st May 2022 12:44 PM | Last Updated: 31st May 2022 01:55 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕೋವಿಡ್ ನಿಂದ ತಮ್ಮ ಪೋಷಕರನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ ಆರ್ಥಿಕ, ಶೈಕ್ಷಣಿಕ ಮತ್ತಿತರ ಆಸರೆ ನೀಡುವ ಮಹತ್ವದ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಚಾಲನೆ ನೀಡಿದ್ದು, ನಗರದ 30 ಮಂದಿ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 8 ವರ್ಷ ಪೂರೈಸಿದ ದಿನವೇ ಮೋದಿಯವರು ವರ್ಚುವಲ್ ಆಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಜನೆಗೆ ಚಾಲನೆ ನೀಡಿದರು.
ಕಾರ್ಯಕ್ರಮದ ಬಳಿಕ ಬೆಂಗಳೂರು ನಗರ ಉಪ ಆಯುಕ್ತ ಜೆ.ಮಂಜುನಾಥ್ ಅವರು, ಫಲಾನುಭವಿಸಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು.
ಕೆಲ ಫಲಾನುಭವಿಗಳು ಪ್ರಧಾನಿ ಮೋದಿಯವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಮಕ್ಕಳಿಗೆ ಸಮಗ್ರ ಪ್ಯಾಕೇಜ್ ನಲ್ಲಿ ರೂ.5 ಲಕ್ಷ ಆರೋಗ್ಯ ವಿಮಾ ಪಕ್ಷಣೆ ಮತ್ತು ರೂ.50,000 ಪರಿಹಾರವನ್ನು ನೀಡಲಾಗಿದೆ ಎಂದು ಮಂಜುನಾಥ್ ಅವರು ಹೇಳಿದ್ದಾರೆ.
ಶಿಕ್ಷಣದೊಂದಿಗೆ ಮಕ್ಕಳು ಸಬಲರಾಗುತ್ತಾರೆ. ಆರ್ಥಿಕ ಬೆಂಬಲ ಅವರ ಶಕ್ತಿಯನ್ನು ಹೆಚ್ಚಿಸಲಿದೆ. ಇದಕ್ಕಾಗಿ ಮಕ್ಕಳ ಹೆಸರಿನಲ್ಲಿ ಖಾತೆಗಲ ತೆರೆಯಲಾಗಿದ್ದು ರೂ.10 ಲಕ್ಷ ಠೇವಣಿ ಇಡಲಾಗಿದೆ. ಈ ಸಂಬಂಧ ಅಂಚೆ ಕಚೇರಿಯ ಕಾರ್ಡ್ ಗಳನ್ನು ಹಸ್ತಾಂತರಿಸಲಾಗಿದೆ. ಮಕ್ಕಳಿಗೆ 18 ವರ್ಷಗಳಾದ ಬಳಿಕ ಅವರಿಗೆ ಈ ಹಣದಿಂದ ಬಂದ ಬಡ್ಡಿಯನ್ನು ಪಡೆದುಕೊಳ್ಳಬಹುದು. 23ನೇ ವಯಸ್ಸಿಗೆ ಈ ಹಣವನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 'ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್' ಯೋಜನೆಯ ಸೌಲಭ್ಯಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿ: ಏನಿದು, ಯಾರಿಗೆ ಪ್ರಯೋಜನ?
ಪ್ರತೀ ರಾಜ್ಯದಲ್ಲಿ ಮಕ್ಕಳ ಕಲ್ಯಾಣ ಸಮಿತಿಯು ಅನಾಥ ಮಕ್ಕಳನ್ನು ಗುರ್ತಿಸುವ ಕೆಲಸ ಮಾಡಿತು. ಜಿಲ್ಲಾಧಿಕಾರಿಗಳು ತ್ವರಿತ ಮೌಲ್ಯಮಾಪನ ಮಾಡಿ ಕಡತಗಳನ್ನು ತೆರವುಗೊಳಿಸಿದರು. ಯೋಜನೆಯ ಫಲಾನುಭವಿಗಳಿಗೆ ತಮ್ಮ ಅರ್ಹತೆಗಳನ್ನು ಪರಿಶೀಲಿಸಲು ಲಾಗಿನ್ ವ್ಯವಸ್ಥೆಯನ್ನೂ ಕೂಡ ರಚಿಸಲಾಗಿದೆ ಎಂದಿದ್ದಾರೆ.
ಯೋಜನೆಯಡಿ ದೇಶದಾದ್ಯಂತ, 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 9,041 ಕೋವಿಡ್ ಅನಾಥ ಮಕ್ಕಳನ್ನು ತುರ್ತಿಸಲಾಗಿದ್ದು, ಬೆಂಗಳೂರು ನಗರದಿಂದ 30 ಮಕ್ಕಳು ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಕೊರೋನಾದಿಂದ ತಂದೆ-ತಾಯಿ ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಪಿಎಂ ಕೇರ್ಸ್ ನಿಧಿಯಿಂದ ಶಿಕ್ಷಣ ಹಾಗೂ ಆರೋಗ್ಯಕ್ಕೆ ನೆರವು ನೀಡುವ ಯೋಜನೆಯೇ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್. ಓದುವ ಮಕ್ಕಳಿಗೆ ಇದರಡಿ ಪ್ರತಿ ವರ್ಷ ರೂ.20,000 ವಿದ್ಯಾರ್ಥಿವೇತನ ನೀಡಲಾಗುತ್ತದೆ. ನಂತರ ಅವರಿಗೆ ರೂ.23 ವರ್ಷ ತುಂಬಿದಾಗ ರೂ.10 ಲಕ್ಷ ಠೇವಣಿ ಮಾಡಲಾಗುತ್ತದೆ. ಇವುಗಳಿಗೆ ಸಂಬಂಧಿಸಿದ ಪಾಸ್ ಬುಕ್ ನ್ನು ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಜೊತೆಗೆ ಉನ್ನತ ವಿದ್ಯಾಭ್ಯಾಸಕ್ಕೆ ಸಾಲದ ಅಗತ್ಯವಿದ್ದರೆ ಶೈಕ್ಷಣಿಕ ಸಾಲ ಕೊಡಿಸಲಾಗುತ್ತದೆ. ಆಯುಷ್ಮಾನ್ ಆರೋಗ್ಯ ಕಾರ್ಡ್, ಸಂವಾದ ಹೆಲ್ಪ್ ಲೈನ್ ಮೂಲಕ ಕೌನ್ಸೆಲಿಂಗ್, ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಲಾಭವನ್ನೂ ನೀಡಲಾಗುತ್ತದೆ.