ಇನ್ಫೋಸಿಸ್ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣಕ್ಕೆ ಗ್ರೀನ್ ಟ್ಯಾಗ್
18 ಕಿಮೀ ಉದ್ದದ ಆರ್ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿರುವ ಇನ್ಫೋಸಿಸ್ ಕೋನಪ್ಪನ ಅಗ್ರಹಾರ ನಿಲ್ದಾಣ (ಮೊದಲು ಎಲೆಕ್ಟ್ರಾನಿಕ್ ಸಿಟಿ-2 ಎಂದು ಕರೆಯಲಾಗುತ್ತಿತ್ತು) ನಮ್ಮ ಮೆಟ್ರೋಗೆ ಮೊದಲ ಬಾರಿಗೆ ಪ್ರತಿಷ್ಠಿತ ಭಾರತೀಯ ಹಸಿರು ಕಟ್ಟಡ ಮಂಡಳಿಯ (ಐಜಿಬಿಸಿ-Indian Green Building Council) ಪ್ರಮಾಣೀಕರಣ ಸಿಗುವ ಸಾಧ್ಯತೆಯಿದೆ.
Published: 31st May 2022 02:00 PM | Last Updated: 31st May 2022 03:25 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: 18 ಕಿಮೀ ಉದ್ದದ ಆರ್ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿರುವ ಇನ್ಫೋಸಿಸ್ ಕೋನಪ್ಪನ ಅಗ್ರಹಾರ ನಿಲ್ದಾಣ (ಮೊದಲು ಎಲೆಕ್ಟ್ರಾನಿಕ್ ಸಿಟಿ-2 ಎಂದು ಕರೆಯಲಾಗುತ್ತಿತ್ತು) ನಮ್ಮ ಮೆಟ್ರೋಗೆ ಮೊದಲ ಬಾರಿಗೆ ಪ್ರತಿಷ್ಠಿತ ಭಾರತೀಯ ಹಸಿರು ಕಟ್ಟಡ ಮಂಡಳಿಯಿಂದ (ಐಜಿಬಿಸಿ-Indian Green Building Council) ಪ್ರಮಾಣೀಕರಣವನ್ನು ಪಡೆಯುವ ಸಾಧ್ಯತೆಯಿದೆ.
ಇಂಧನ ದಕ್ಷತೆಯ ಮೌಲ್ಯಮಾಪನಕ್ಕಾಗಿ ಪ್ರಮಾಣೀಕರಣ ನೀಡುವ ಭಾರತದ ಪ್ರಧಾನ ಸಂಸ್ಥೆ ಇದಾಗಿದೆ. ನೋಂದಣಿ ನಮೂನೆಗಳನ್ನು ಇನ್ಫೋಸಿಸ್ ಫೌಂಡೇಶನ್ ಸಲ್ಲಿಸಿದ್ದು, ದಾಖಲೆಗಳನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು ಎಂದು ಮೆಟ್ರೋದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೆಟ್ರೋದ ಒಂದು ಮತ್ತು ಎರಡನೇ ಹಂತದಲ್ಲಿರುವ 142 ಮೆಟ್ರೋ ನಿಲ್ದಾಣಗಳಲ್ಲಿ, ಕೋನಪ್ಪನ ಅಗ್ರಹಾರ ನಿಲ್ದಾಣಕ್ಕೆ ಈ ಸೌಲಭ್ಯ ಮೊದಲಿಗೆ ಸಿಗಲಿದೆ. ಅಕ್ಟೋಬರ್ ವೇಳೆಗೆ ನಿಲ್ದಾಣ ಸಿದ್ಧಗೊಂಡ ನಂತರ ಇದು ಕಾರ್ಯಗತಗೊಳ್ಳಲಿದೆ ಎಂದು ಉಪ ಮುಖ್ಯ ಎಂಜಿನಿಯರ್, ರೀಚ್-5 (ಪ್ಯಾಕೇಜ್ 3), ಕರ್ನಲ್ ವಿನೋದ್ ಎಂ ಸಾಲಸಟ್ಟಿ ತಿಳಿಸಿದ್ದಾರೆ.
ಸೌರಶಕ್ತಿ, ತ್ಯಾಜ್ಯ ನಿರ್ವಹಣೆ, ಗಾಳಿಯ ಗುಣಮಟ್ಟ, ಸುರಕ್ಷತೆ, ಆರೋಗ್ಯ ಮತ್ತು ಪರಿಸರದ ಅಂಶಗಳು ಪ್ರಮಾಣೀಕರಣವನ್ನು ನೀಡುವಾಗ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದರು.
ಇನ್ಫೋಸಿಸ್ ಫೌಂಡೇಶನ್ ನಿಲ್ದಾಣವನ್ನು ನಿರ್ಮಿಸಲು 100 ಕೋಟಿ ರೂಪಾಯಿಗಳನ್ನು ನೀಡಿದ್ದು, ಸೆಪ್ಟೆಂಬರ್ 2017 ರಲ್ಲಿ ಕೆಲಸ ಪ್ರಾರಂಭವಾಗಿತ್ತು. ಆದರೆ ಕೋವಿಡ್ ಸಾಂಕ್ರಾಮಿಕ ರೋಗದಿಂದ ಇತರ ಮೆಟ್ರೋ ಯೋಜನೆಗಳಂತೆ ವಿಳಂಬವಾಯಿತು. ಛಾವಣಿಯ ಅಡಿಯಲ್ಲಿ ರಾಕ್ ವುಲ್ ಪದರವನ್ನು ಮತ್ತು ಅದರ ಕೆಳಗೆ ಇನ್ನೊಂದು ಛಾವಣಿಯನ್ನು ಹೊಂದಿರುತ್ತದೆ. ಪ್ರಯಾಣಿಕರು ನಿಲ್ದಾಣದ ಒಳಗೆ ತಂಪು ಅನುಭವಿಸುವುದನ್ನು ಪಡೆಯಬಹುದು. ಕಾಲ್ಜಿಪ್ ರೂಫಿಂಗ್ ಎಂದು ಕರೆಯಲ್ಪಡುವ ಈ ವ್ಯವಸ್ಥೆಯು ವಿಮಾನ ನಿಲ್ದಾಣಗಳಲ್ಲಿ ಕಂಡುಬರುತ್ತದೆ ಎಂದು ಕರ್ನಲ್ ವಿನೋದ್ ತಿಳಿಸಿದರು.
What a charming view of the City from atop the Metro station pic.twitter.com/ViErNJn4QK
— S. Lalitha (@Lolita_TNIE) May 31, 2022
ನಿಲ್ದಾಣದ ಮುಂಭಾಗವು ಕಲಾತ್ಮಕವಾಗಿ ಸುಂದರವಾಗಿರುತ್ತದೆ. ಇದು ಸಂಪೂರ್ಣವಾಗಿ ಮುಚ್ಚಿದ ನಿಲ್ದಾಣವಾಗಿದೆ. BMRCL ಗೆ ಸುಮಾರು 30,000 ಚದರಡಿಯನ್ನು ಬೃಹತ್ ವಾಣಿಜ್ಯ ಉದ್ಯಮಗಳಿಗಾಗಿ ಮೀಸಲಿಡಲಾಗಿದೆ, ಆದರೆ ಇನ್ಫೋಸಿಸ್ ಫೌಂಡೇಶನ್ 3,000 ಚದರಡಿಯನ್ನು ಹೊಂದಿರುತ್ತದೆ. ಮೆಟ್ರೋ ನಿಲ್ದಾಣದಿಂದ ನೌಕರರನ್ನು ನೇರವಾಗಿ ಕ್ಯಾಂಪಸ್ಗೆ ಕರೆದೊಯ್ಯುವ 350 ಮೀಟರ್ ವಾಕ್ವೇ ಅನ್ನು ಇನ್ಫೋಸಿಸ್ ಲಿಮಿಟೆಡ್ ನಿರ್ಮಿಸಲಿದೆ ಎಂದು ಇನ್ಫೋಸಿಸ್ ಫೌಂಡೇಶನ್ ನ ಸ್ಥಳೀಯ ವ್ಯವಸ್ಥಾಪಕ ಮನೋಜ್ ಹೆಗ್ಡೆ ತಿಳಿಸಿದ್ದಾರೆ.
ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಬೊಮ್ಮಸಂದ್ರದವರೆಗಿನ 5 ಸಾಲಿನ ಒಂದು ಭಾಗವು ಜೂನ್ 2023 ರ ವೇಳೆಗೆ ಸೇವೆಗೆ ಸಿದ್ಧವಾಗಲಿದೆ, ಆದರೆ ಉಳಿದ ಮಾರ್ಗವನ್ನು 2023 ರ ಅಂತ್ಯದ ವೇಳೆಗೆ ತೆರೆಯಬಹುದು ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ ತಿಳಿಸಿದರು.