ಮುಸ್ಲಿಂ ಟೋಪಿ ಧರಿಸಿದ್ದಕ್ಕೆ ಥಳಿತ ಪ್ರಕರಣ: ತನಿಖೆಗೆ ವಿದ್ಯಾರ್ಥಿ ಸಹಕರಿಸುತ್ತಿಲ್ಲ- ಪೊಲೀಸರು

ವಿದ್ಯಾರ್ಥಿಯೋರ್ವ ಮುಸ್ಲಿಂ ಟೋಪಿ ಧರಿಸಿದ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ.

Published: 31st May 2022 02:00 PM  |   Last Updated: 01st June 2022 07:30 AM   |  A+A-


File photo

ಸಂಗ್ರಹ ಚಿತ್ರ

The New Indian Express

ಬಾಗಲಕೋಟೆ: ವಿದ್ಯಾರ್ಥಿಯೋರ್ವ ಮುಸ್ಲಿಂ ಟೋಪಿ ಧರಿಸಿದ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ. 

ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ಎಸ್'ಪಿ ಲೋಕೇಶ್ ಜಗಳಸರ್ ಅವರು, ತನಿಖೆಗೆ ಸಹಕಾರ ನೀಡುವಂತೆ ಪೊಲೀಸರ ತಂಡ 2-3 ಬಾರಿ ವಿದ್ಯಾರ್ಥಿ ಸಂಪರ್ಕಿಸಲು ಪ್ರಯತ್ನಿಸಿತ್ತು. ಆದರೆ, ಆತ ಆರೋಗ್ಯ ಸಮಸ್ಯೆ ಹೇಳಿಕೊಂಡು ತನಿಖೆಗೆ ಸಹಕಾರ ನೀಡುತ್ತಿಲ್ಲ. ಕಾಲೇಜು ವಿರುದ್ಧ ನ್ಯಾಯಾಲಯದಲ್ಲಿ ಯುವಕ ಪ್ರಕರಣ ದಾಖಲಿಸಿದ್ದು, ಜಮಖಂಡಿ ಡಿವೈಎಸ್ಪಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆಂದು ಹೇಳಿದ್ದಾರೆ.

ಪಿಎಫ್ಐ ಜಿಲ್ಲಾಧ್ಯಕ್ಷ ಅಸಗರ್ ಅಲಿ ಮಾತನಾಡಿ, ನವೀದ್ ಹಾಗೂ ಆತನ ಕುಟುಂಬಕ್ಕೆ ನಾವು ನೈತಿಕ ಬೆಂಬಲವನ್ನು ನೀಡುತ್ತಿದ್ದೇವೆ. ಹಲ್ಲೆ ಸಂಬಂಧ ನವೀದ್ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದಾಗ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಹೀಗಾಗಿ ಅನಿವಾರ್ಯವಾಗಿ ಆತ ನ್ಯಾಯಾಲಯದ ಮೆಟ್ಟಿಲೇರಬೇಕಾಗಿ ಬಂತು. ನ್ಯಾಯ ಸಿಗುವವರೆಗೂ ನಾವು ಹೋರಾಟ ಮಾಡುತ್ತೇವೆಂದು ಹೇಳಿದ್ದಾರೆ. 

ಇದನ್ನೂ ಓದಿ: ಮಂಗಳೂರು ಹಿಜಾಬ್ ವಿವಾದ: ಹೈಕೋರ್ಟ್ ಆದೇಶ ಪಾಲಿಸುವಂತೆ ಮುಸ್ಲಿಂ ವಿದ್ಯಾರ್ಥಿಗಳಿಗೆ ಡಿಸಿ ಸೂಚನೆ

ಕಾಲೇಜು ಪ್ರಾಂಶುಪಾಲ ಎಎಸ್.ಪೂಜಾರಿ ಮಾತನಾಡಿ, ಘಟನೆ ನಡೆದಿದೆ ಎನ್ನಲಾದ ಸಂದರ್ಭದಲ್ಲಿ ಹಿಜಾಬ್ ಹಾಗೂ ಕೇಸರಿ ವಸ್ತ್ರ ವಿವಾದ ತಾರಕಕ್ಕೇರಿತ್ತು. ಈ ಪರಿಸ್ಥಿತಿಯಲ್ಲಿ ನಾವು ನವೀದ್ ಮೇಲೆ ಹಲ್ಲೆ ನಡೆಸಲು ಹೇಗೆ ಸಾಧ್ಯ. ಆತನ ಮೇಲೆ ನಾನಾಗಲೀ, ಕಾಲೇಜಿನ ಸಿಬ್ಬಂದಿಗಳಾಗಲೀ ಹಲ್ಲೆ ನಡೆಸಿಲ್ಲ. ಯಾವುದೇ ಧರ್ಮದ ವಸ್ತ್ರ ಧರಿಸದೆ ಕಾಲೇಜಿಗೆ ಬರುವಂತೆ ಆತನಿಗೆ ಸೂಚಿಸಲಾಗಿತ್ತು. ಹೈಕೋರ್ಟ್ ಹಾಗೂ ರಾಜ್ಯ ಸರ್ಕಾರದ ಆದೇಶವನ್ನು ಆತನಿಗೆ ಅರ್ಥ ಮಾಡಿಸಲು ನಾನು ಪ್ರಯತ್ನಿಸಿದ್ದೆ. ಆದರೆ, ಆತ ಕೇಳಲಿಲ್ಲ. ಘಟನೆ ವೇಳೆ ನವೀದ್ ತಂದೆ ಕೂಡ ಸ್ಥಳದಲ್ಲಿದ್ದರು. ಎಷ್ಟು ಹೇಳಿದರೂ ಕೇಳದೆ, ಕಾಲೇಜಿನ ಒಳಗೆ ಬರಲು ಯತ್ನಿಸಿದ್ದರು. ನಮಗೆ ಬೇರೆ ದಾರಿಯಿಲ್ಲದೆ ಅವರನ್ನು ಪೊಲೀಸರ ವಶಕ್ಕೆ ನೀಡಿದ್ದೆವು. ನಾವು ಯಾರ ಮೇಲೂ ಹಲ್ಲೆ ನಡೆಸಿಲ್ಲ. ಇನ್ನೂ ಅವರೇ ನಮ್ಮನ್ನು ಕೆಟ್ಟಪದಗಳಿಂದ ನಿಂದಿಸಿದ್ದಾರೆಂದು ಹೇಳಿದ್ದಾರೆ. 

ಇದನ್ನೂ ಓದಿ: ಬಾಗಲಕೋಟೆ: ಟೋಪಿ ಧರಿಸಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿಗೆ ಥಳಿತ, ಏಳು ಜನರ ವಿರುದ್ಧ ಎಫ್ ಐಆರ್ ದಾಖಲು

ನ್ಯಾಯಾಲಯದಿಂದ ಸಮನ್ಸ್ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಪೊಲೀಸರಿಂದಾಗಲೀ, ನ್ಯಾಯಾಲಯದಿಂದಾಗಲೀ ನನಗೆ ಯಾವುದೇ ಸಮನ್ಸ್ ಬಂದಿಲ್ಲ. ನಾನು ಯಾವ ತಪ್ಪನ್ನೂ ಮಾಡಿಲ್ಲ. ನ್ಯಾಯಾಲಯ ಸಮನ್ಸ್ ಜಾರಿ ಮಾಡಿದರೂ, ಸಾಕ್ಷಿ ಹಾಗೂ ಸತ್ಯಾಸತ್ಯತೆಗಳೊಂದಿಗೆ ನ್ಯಾಯಾಲಯದ ಮುಂದೆ ಹಾಜರಾಗುತ್ತೇನೆಂದು ಹೇಳಿದ್ದಾರೆ. 

ಕಾಲೇಜು ಪ್ರಾಂಶುಪಾಲರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ಸಂಬಂಧ ನವೀದ್ ಹಾಗೂ ಆತನ ತಂದೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.


Stay up to date on all the latest ರಾಜ್ಯ news
Poll
CM Basavaraja Bommai is press meet

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಕಾಲ ಸನ್ನಿಹಿತ ಎಂಬ ಭಾವನೆ ಇದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp