ಆ್ಯಸಿಡ್‌ ದಾಳಿ ಸಂತ್ರಸ್ತೆಗೆ ಸರ್ಕಾರಿ ಉದ್ಯೋಗ, ಮನೆ ಕಲ್ಪಿಸಿ ಕೊಡುವ ಭರವಸೆ ನೀಡಿದ ಸಿಎಂ ಬೊಮ್ಮಾಯಿ

ತಮ್ಮನ್ನು ಭೇಟಿ ಮಾಡಲು ಬಂದ ಆ್ಯಸಿಡ್ ದಾಳಿ ಸಂತ್ರಸ್ತ ಯುವತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸರ್ಕಾರಿ ಉದ್ಯೋಗ ಹಾಗೂ ಮನೆ ಕಲ್ಪಿಸಿಕೊಡುವ ಭರವಸೆ ನೀಡಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ತಮ್ಮನ್ನು ಭೇಟಿ ಮಾಡಲು ಬಂದ ಆ್ಯಸಿಡ್ ದಾಳಿ ಸಂತ್ರಸ್ತ ಯುವತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸರ್ಕಾರಿ ಉದ್ಯೋಗ ಹಾಗೂ ಮನೆ ಕಲ್ಪಿಸಿಕೊಡುವ ಭರವಸೆ ನೀಡಿದ್ದಾರೆ.

ಕಳೆದ ಏಪ್ರಿಲ್ 28 ರಂದು ಯುವತಿಯೊಬ್ಬಳ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ನಾಗೇಶ್ ಎಂಬಾತ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಯುವತಿ, ಇದೀಗ ಗುಣಮುಖಳಾಗಿದ್ದಾಳೆ.

ಇದರಂತೆ ಇಂದು ಯುವತಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ತೆರಳಿದ್ದು, ಈ ವೇಳೆ ಮುಖ್ಯಮಂತ್ರಿಗಳು ಅನುಕಂಪದ ಆಧಾರದಲ್ಲಿ ಕೆಲಸ, ಮನೆ, ಪರಿಹಾರ ನೀಡುವ ಭರವಸೆಯನ್ನು ನೀಡಿದ್ದಾರೆ.

ಆ್ಯಸಿಡ್‌ ಸಂತ್ರಸ್ತೆ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ ಅವರು. ಇಂದು ಯುವತಿ ಮತ್ತು ಅವರ ಕುಟುಂಬದವರು ಭೇಟಿ ಮಾಡಿದ್ದರು. ಇಂದೇ ಮುಖ್ಯ ಕಾರ್ಯದರ್ಶಿ ಅವರ ಜತೆ ಯುವತಿ ಬಗ್ಗೆ ಮಾತನಾಡುತ್ತೇನೆ.  ಕೆಲಸ ಕೊಡಿಸುವ ವ್ಯವಸ್ಥೆ ಮಾಡಲಾಗುತ್ತದೆ. ಈಗಾಗಲೇ ಸರ್ಕಾರ ಆ್ಯಸಿಡ್ ದಾಳಿಗೆ ಒಳಗಾಗಿರುವವರಿಗೆ ಮಾಸಾಶನ ಹೆಚ್ಚಿಸಿದೆ. ರೂ.3 ರಿಂದ 10 ಸಾವಿರಕ್ಕೆ ಮಾಸಾಶನ ಏರಿಸಲಾಗಿದೆ. ಯುವತಿಗೆ ಮಾಸಾಶನವನ್ನೂ ಕೊಡಲಾಗುತ್ತದೆ. ಬೆಂಗಳೂರು ಸಮೀಪ 40 ಸಾವಿರ ಮನೆಗಳ ನಿರ್ಮಾಣ ಆಗುತ್ತಿದೆ. ಈ ಯುವತಿಗೂ ಒಂದು ಮನೆ ಕೊಡಲಾಗುತ್ತದೆ. ವಸತಿ ಸಚಿವರ ಜತೆ ನಿವಾಸ ಕಲ್ಪಿಸಿಕೊಡುವ ಕುರಿತು ಮಾತುಗತೆ ನಡೆಸಲಾಗುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com