ಬೆಂಗಳೂರಿನ ಸರ್ಕಾರಿ ಶಾಲೆಗಳಲ್ಲಿ ಶೀಘ್ರ 'ಬ್ಯಾಗ್ ಮುಕ್ತ ಶನಿವಾರ'

ಶಾಲಾ ವಿದ್ಯಾರ್ಥಿಗಳ ಭಾರವಾದ ಬ್ಯಾಗ್ ಗಳ ಕುರಿತ ಅಭಿಯಾನಗಳ ಪರಿಣಾಮ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇದೀಗ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, 'ಬ್ಯಾಗ್ ಮುಕ್ತ ಶನಿವಾರ' ಪರಿಚಯಿಸಲು ಶಾಲೆಗಳಿಗೆ ಶಿಫಾರಸು ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಶಾಲಾ ವಿದ್ಯಾರ್ಥಿಗಳ ಭಾರವಾದ ಬ್ಯಾಗ್ ಗಳ ಕುರಿತ ಅಭಿಯಾನಗಳ ಪರಿಣಾಮ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇದೀಗ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, 'ಬ್ಯಾಗ್ ಮುಕ್ತ ಶನಿವಾರ' ಪರಿಚಯಿಸಲು ಶಾಲೆಗಳಿಗೆ ಶಿಫಾರಸು ಮಾಡಿದೆ.

ತಿಂಗಳಿಗೆ ಒಂದು ದಿನವಾದರೂ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳು ತಮ್ಮ ಭಾರದ ಬ್ಯಾಗ್‌ಗಳನ್ನು ಮನೆಯಲ್ಲಿಯೇ ಇಟ್ಟು ಮೋಜಿನ ಕಲಿಕಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಹೇಳಿದೆ. ಸಂಭ್ರಮ ಶನಿವಾರದ ಅಡಿಯಲ್ಲಿ ತಿಂಗಳಿಗೆ ಒಂದು ಶನಿವಾರದಂದು ಬ್ಯಾಗ್ ರಹಿತ ದಿನವನ್ನು ಪರಿಚಯಿಸಲು ಶಾಲೆಗಳಿಗೆ ಇಲಾಖೆ ಶಿಫಾರಸು ಮಾಡಿದೆ.

ಇಲಾಖೆಯ ಪ್ರಕಾರ, ಕಲಿಕಾ ಚೇತರಿಕೆ ಭಾಗವಾಗಿ ಈ ಉಪಕ್ರಮವನ್ನು ಪರಿಚಯಿಸಲಾಗಿದ್ದು, ಎಲ್ಲಾ ಶಾಲೆಗಳು ಪ್ರತಿ ತಿಂಗಳ ಒಂದು ಶನಿವಾರದಂದು ಸಂಭ್ರಮ ಶನಿವಾರ ಆಚರಿಸಲು ನಾವು ಸೂಚಿಸುತ್ತೇವೆ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳಲ್ಲಿ ಸಕ್ರಿಯ ಕಲಿಕೆಯನ್ನು ಉತ್ತೇಜಿಸಲು ಹತ್ತು ವಿಷಯಗಳಲ್ಲಿ ಚಟುವಟಿಕೆ ಪುಸ್ತಕಗಳನ್ನು ಬಳಸಬಹುದು ಎಂದು ಅದು ಹೇಳಿದೆ.

ಬ್ಯಾಗ್ ರಹಿತ ದಿನದಂದು ವಿದ್ಯಾರ್ಥಿಗಳು ಡಿಎಸ್‌ಇಆರ್‌ಟಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದ ಚಟುವಟಿಕೆ ಪುಸ್ತಕಗಳು ಮತ್ತು ಇತರ ವಸ್ತುಗಳನ್ನು ಬಳಸಿಕೊಳ್ಳುವಂತೆ ಡಿಎಸ್‌ಇಆರ್‌ಟಿ ಸೂಚಿಸಿದೆ. ಉಪಕ್ರಮದ ಅಡಿಯಲ್ಲಿ, ಶಿಕ್ಷಕರು ಡೌನ್‌ಲೋಡ್ ಮಾಡಬಹುದಾದ ಮತ್ತು ಮುದ್ರಿಸಬಹುದಾದ ಹಲವಾರು ನಾಗರಿಕ ವಿಷಯಗಳಿಗೆ ಸಂಬಂಧಿಸಿದ ವಿಷಯವನ್ನು DSERT ಅಪ್‌ಲೋಡ್ ಮಾಡಿದೆ. ವಿಷಯಗಳು ಸುರಕ್ಷತೆ ಮತ್ತು ಭದ್ರತೆ, ಘನತ್ಯಾಜ್ಯ ನಿರ್ವಹಣೆ, ತಂತ್ರಜ್ಞಾನದ ಸುರಕ್ಷಿತ ಬಳಕೆ, ರಸ್ತೆ ಸುರಕ್ಷತೆ, ಲಿಂಗ ಸಮಾನತೆ, ವಿಕಲಾಂಗತೆಗಳು, ಆರೋಗ್ಯಕರ ಜೀವನಶೈಲಿ, ಸಾರ್ವಜನಿಕ ಸೇವೆಗಳು, ಪೋಷಣೆ ಮತ್ತು ಸ್ವಚ್ಛತೆ ಮತ್ತು ಮಾದಕ ದ್ರವ್ಯಗಳ ವಿರುದ್ಧ ಜಾಗೃತಿಗೆ ಸಂಬಂಧಿಸಿದೆ. 

ಚಟುವಟಿಕೆ ಪುಸ್ತಕಗಳನ್ನು ಬಳಸಿಕೊಂಡು ಶಿಕ್ಷಕರು ಹೇಗೆ ಮುನ್ನಡೆಯಬಹುದು ಮತ್ತು ಮಕ್ಕಳಿಗೆ ಹೇಗೆ ಕಲಿಸಬಹುದು ಎಂಬ ಮಾರ್ಗದರ್ಶಿ ಪುಸ್ತಕವನ್ನು ಇಲಾಖೆಯು ಅಪ್‌ಲೋಡ್ ಮಾಡಿದೆ. ಕಡಿಮೆ ಸಂಖ್ಯೆಯ ಶಿಕ್ಷಕರಿರುವಾಗ ಶನಿವಾರದಂದು ಬ್ಯಾಗ್ ರಹಿತ ದಿನವಾಗಿರಬಹುದು. ಈ ಉಪಕ್ರಮವು ಕಲಿಕಾ ಕೇಂದ್ರಗಳು ಮತ್ತು ಶಾಲೆಗಳಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಕಲಿಕೆಯ ಚೇತರಿಕೆಯ ಚಟುವಟಿಕೆಗಳಿಗೆ ಪೂರಕವಾಗಿದೆ ಎಂದು ಇಲಾಖೆ ಹೇಳಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com