ಪಿಎಸ್ ಐ ನೇಮಕಾತಿ ಪ್ರಕರಣದ ಸಂತ್ರಸ್ತರಿಗೆ ಡಿವೈಎಸ್ಪಿ ಕಪಾಳ ಮೋಕ್ಷ, ಮನುಷ್ಯತ್ವವಿಲ್ಲದ ಸರ್ಕಾರ- ಸಿದ್ದು
ಪಿಎಸ್ ಐ ನೇಮಕಾತಿ ಪ್ರಕರಣದ ಸಂತ್ರಸ್ತರಿಗೆ ತುಮಕೂರು ಡಿವೈಎಸ್ಪಿ ಪಿ. ಶ್ರೀನಿವಾಸ್ ಕಪಾಳ ಮಾಡಿದ್ದಾರೆ ಎಂದು ಆರೋಪಿಸಲಾದ ವಿಡಿಯೋ ವೈರಲ್ ಆಗಿದೆ.
Published: 01st November 2022 03:27 PM | Last Updated: 01st November 2022 03:29 PM | A+A A-

ಡಿವೈಎಸ್ಪಿ ಕಪಾಳ ಮೋಕ್ಷ, ಸಿದ್ದರಾಮಯ್ಯ
ತುಮಕೂರು: ಪಿಎಸ್ ಐ ನೇಮಕಾತಿ ಪ್ರಕರಣದ ಸಂತ್ರಸ್ತರಿಗೆ ತುಮಕೂರು ಡಿವೈಎಸ್ಪಿ ಪಿ. ಶ್ರೀನಿವಾಸ್ ಕಪಾಳ ಮಾಡಿದ್ದಾರೆ ಎಂದು ಆರೋಪಿಸಲಾದ ವಿಡಿಯೋ ವೈರಲ್ ಆಗಿದೆ.
ನೇಮಕಾತಿ ಹಗರದಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಹೇಳಿಕೊಳ್ಳಲು ಬಂದವರಿಗೆ ಡಿವೈಎಸ್ಪಿ ಕಪಾಳ ಮೋಕ್ಷ ಮಾಡಿದ್ದಾರೆ.
ಇದನ್ನೂ ಓದಿ: ಮಹಿಳೆಗೆ ಕಪಾಳ ಮೋಕ್ಷ ಪ್ರಕರಣ: ಕ್ಷಮೆ ಕೋರಿದ ಸಚಿವ ಸೋಮಣ್ಣ
ಈ ಕುರಿತಂತೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಇದು ಮನುಷ್ಯತ್ವವಿಲ್ಲದ ಸರ್ಕಾರ, ಈ ರೀತಿಯ ಘಟನೆಗಳು ಯಾವಾಗಲೂ ನಡೆಯುತ್ತಲೇ ಇವೆ. ವಾರದ ಹಿಂದಷ್ಟೇ ವಸತಿ ಸಚಿವ ವಿ. ಸೋಮಣ್ಣ ಅವರು ಮಹಿಳೆಯರೊಬ್ಬರಿಗೆ ಕಪಾಳ ಮೋಕ್ಷ ಮಾಡಿದ್ದರು. ಈ ರೀತಿಯ ಸಚಿವರು ರಾಜ್ಯದಲ್ಲಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
Karnataka | This is an inhuman govt. They always do this. A week ago, V Somanna, being a responsible minister, slapped a woman. She fell down. These are the type of ministers in Karnataka, says former CM & LoP Siddaramaiah pic.twitter.com/Z30zeMNy3k
— ANI (@ANI) November 1, 2022