ಕರ್ನಾಟಕ- ಭಾರತ್ ಗೌರವ್ ಕಾಶಿ ದರ್ಶನದ ಮೊದಲ ರೈಲು
ಕರ್ನಾಟಕ- ಭಾರತ್ ಗೌರವ್ ಕಾಶಿ ದರ್ಶನದ ಮೊದಲ ರೈಲು

ಕರ್ನಾಟಕ- ಭಾರತ್ ಗೌರವ್ ಕಾಶಿ ದರ್ಶನ: ಮೊದಲ ರೈಲು ನ.11 ರಂದು ಬೆಂಗಳೂರಿನಿಂದ ಪ್ರಯಾಣ

ಕರ್ನಾಟಕ- ಭಾರತ್ ಗೌರವ್ ಕಾಶಿ ದರ್ಶನದ ಮೊದಲ ರೈಲು ಇದೇ ತಿಂಗಳ 11 ರಂದು ಬೆಂಗಳೂರಿನಿಂದ ಹೊರಡಲು ಸಜ್ಜಾಗಿದೆ. ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಮೊದಲು ರೈಲು ಕೇವಲ ಮೂರು ದಿನಗಳಲ್ಲಿ ಸಂಪೂರ್ಣ ಭರ್ತಿ ಆಗಿದೆ.

ಬೆಂಗಳೂರು: ಕರ್ನಾಟಕ- ಭಾರತ್ ಗೌರವ್ ಕಾಶಿ ದರ್ಶನದ ಮೊದಲ ರೈಲು ಇದೇ ತಿಂಗಳ 11 ರಂದು ಬೆಂಗಳೂರಿನಿಂದ ಹೊರಡಲು ಸಜ್ಜಾಗಿದೆ. ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಮೊದಲು ರೈಲು ಕೇವಲ ಮೂರು ದಿನಗಳಲ್ಲಿ ಸಂಪೂರ್ಣ ಭರ್ತಿ ಆಗಿದೆ.

 ಅಕ್ಟೋಬರ್ 30 ರಂದು ಬುಕ್ಕಿಂಗ್ ಪ್ರಾರಂಭಿಸಲಾಗಿತ್ತು. ಮೊದಲ ದಿನವೇ 200 ಬುಕ್ಕಿಂಗ್ ಮಾಡಲಾಗಿತ್ತು. ಮೂರನೇ ದಿನ ಎಲ್ಲಾ 540 ಸೀಟ್ ಗಳು ಭರ್ತಿಯಾಗಿವೆ ಇದೊಂದು ನೂತನ ದಾಖಲೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. 

ಈ ಯಾತ್ರೆಗೆ ಹೊರಡುತ್ತಿರುವ ರೈಲು ನವೆಂಬರ್ 11 ರಂದು ಬೆಂಗಳೂರಿನಿಂದ ಹೊರಡಲಿದ್ದು, ಕಾಶಿ, ಅಯೋಧ್ಯೆ ಮತ್ತು ಪ್ರಯಾಗ್ ರಾಜ್ ಗಳ ಪ್ರವಾಸ ಮುಗಿಸಿ ನವೆಂಬರ್ 18 ರಂದು ವಾಪಸ್ ಬೆಂಗಳೂರಿಗೆ ಬರಲಿದೆ. ಈ ರೈಲು ಬೆಂಗಳೂರು, ಬಿರೂರ್, ಹಾವೇರಿ, ಹುಬ್ಬಳ್ಳಿ. ಬೆಳಗಾವಿ ಹಾಗೂ ರಾಯಭಾಗ ಮಾರ್ಗವಾಗಿ ಕಾಶಿ, ಅಯೋಧ್ಯ ಮತ್ತು ಪ್ರಯಾಗ್ ರಾಜ್ ಗೆ ಸಂಚರಿಸಲಿದೆ. 

ಅತ್ಯಂತ ಕಡಿಮೆ ವೆಚ್ಚದಲ್ಲಿ ಕಾಶಿ ವಿಶ್ವನಾಥ ಹಾಗೂ ಅಯೋಧ್ಯ ರಾಮಲಲ್ಲಾ ದೈವ ಭೂಮಿಯ ವೈಭವ ಸವಿಯಬಹುದಾಗಿದೆ. 8 ದಿನಗಳ ಕಾಲದ ಈ ಟೂರ್ ಪ್ಯಾಕೇಜ್ ನಲ್ಲಿ ಎಲ್ಲಾ ಸವಲತ್ತು ಇರಲಿದೆ. ರೈಲು ದರ, ಪ್ರವಾಸಿ ಸ್ಥಳಗಳಲ್ಲಿ ಅಗತ್ಯವಿರುವ ಬಸ್ ವ್ಯವಸ್ಥೆ, ಉಳಿದುಕೊಳ್ಳಲು ಹೋಟೆಲ್, ಊಟೋಪಚಾರದ ವ್ಯವಸ್ಥೆ ಹಾಗೂ ವಿಮೆ ಸೌಲಭ್ಯ ಕೂಡಾ ಇರಲಿದೆ. 

Related Stories

No stories found.

Advertisement

X
Kannada Prabha
www.kannadaprabha.com