ಪಿಎಸ್ಐ ಅಕ್ರಮ ನೇಮಕ ತನಿಖೆ ಚುರುಕುಗೊಳಿಸಿದ ಸಿಐಡಿ: ಮತ್ತೊಬ್ಬ ಆರೋಪಿ ಸುಪ್ರಿಯಾ ಮಲ್ಲಿಕಾರ್ಜುನ ವಶಕ್ಕೆ
ಪಿಎಸ್ಐ ಅಕ್ರಮ ನೇಮಕ ಕುರಿತು ತನಿಖೆ ಕೈಗೊಂಡಿರುವ ಸಿಐಡಿ ಅಧಿಕಾರಿಗಳ ತಂಡವು ಬುಧವಾರ ಜೇವರ್ಗಿ ತಾಲ್ಲೂಕಿನ ಸುಪ್ರಿಯಾ ಮಲ್ಲಿಕಾರ್ಜುನ ಹುಂಡೆಕರ್ (26) ಎಂಬುವರನ್ನು ವಶಕ್ಕೆ ಪಡೆದಿದೆ.
Published: 03rd November 2022 12:18 PM | Last Updated: 03rd November 2022 12:18 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಪಿಎಸ್ಐ ಅಕ್ರಮ ನೇಮಕ ಕುರಿತು ತನಿಖೆ ಕೈಗೊಂಡಿರುವ ಸಿಐಡಿ ಅಧಿಕಾರಿಗಳ ತಂಡವು ಬುಧವಾರ ಜೇವರ್ಗಿ ತಾಲ್ಲೂಕಿನ ಸುಪ್ರಿಯಾ ಮಲ್ಲಿಕಾರ್ಜುನ ಹುಂಡೆಕರ್ (26) ಎಂಬುವರನ್ನು ವಶಕ್ಕೆ ಪಡೆದಿದೆ.
ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಡಿವೈಸ್ ಬಳಸಿದ ಪ್ರಕರಣದಡಿ ಸುಪ್ರಿಯಾ ಅವರನ್ನು ಸಿಐಡಿ ತನಿಖಾಧಿಕಾರಿಗಳಾದ ಶಂಕರಗೌಡ ಪಾಟೀಲ, ಪ್ರಕಾಶ ರಾಠೋಡ ಅವರು ವಶಕ್ಕೆ ಪಡೆದಿದ್ದಾರೆ.
‘ಸರ್ಕಾರಿ ಪದವಿ ಕಾಲೇಜಿನಲ್ಲಿ ಬ್ಲೂಟೂತ್ ಡಿವೈಸ್ ಬಳಸಿ ಪಿಎಸ್‌ಐ ನೇಮಕ ಪರೀಕ್ಷೆ ಬರೆದ ಆರೋಪದಡಿ ದೂರು ದಾಖಲಾಗಿತ್ತು. ಈ ಬಗ್ಗೆ ನಡೆಸುತ್ತಿದ್ದ ತನಿಖೆಯಲ್ಲಿ ಸುಪ್ರಿಯಾ ಅವರ ಮೇಲಿದ್ದ ಸಂಶಯ ಖಚಿತವಾದ ಕಾರಣ ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.