ಎಲ್ಎಲ್ ಸಿ ಕಾಲುವೆಯ ದುರಸ್ತಿ ಕಾರ್ಯ ಪೂರ್ಣ: ಸಚಿವ ಶ್ರೀರಾಮುಲು ಘೋಷಣೆ

ಸಚಿವ ಶ್ರೀರಾಮುಲು ಮೊಕ್ಕಾಂ ಹೂಡಿದ್ದ ಬಳ್ಳಾರಿಯ ಬೈರದೇವನಹಳ್ಳಿಯ ಎಲ್ಎಲ್ ಸಿ ಕಾಲುವೆಯ ದುರಸ್ತಿ ಕಾರ್ಯ ಪೂರ್ಣಗೊಂಡಿದೆ ಎಂದು ಹೇಳಲಾಗಿದೆ.
ಸಚಿವ ಶ್ರೀರಾಮುಲು
ಸಚಿವ ಶ್ರೀರಾಮುಲು

ಬಳ್ಳಾರಿ: ಸಚಿವ ಶ್ರೀರಾಮುಲು ಮೊಕ್ಕಾಂ ಹೂಡಿದ್ದ ಬಳ್ಳಾರಿಯ ಬೈರದೇವನಹಳ್ಳಿಯ ಎಲ್ಎಲ್ ಸಿ ಕಾಲುವೆಯ ದುರಸ್ತಿ ಕಾರ್ಯ ಪೂರ್ಣಗೊಂಡಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಸ್ವತಃ ಸಚಿವ ಶ್ರೀರಾಮುಲು ಅವರು ಟ್ವಿಟರ್ ನಲ್ಲಿ ಘೋಷಣೆ ಮಾಡಿದ್ದು, 'ಕೊನೆಗೂ ಬಳ್ಳಾರಿ ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಬೈರದೇವನಹಳ್ಳಿ  ಎಲ್ ಎಲ್ ಸಿ ಕಾಲುವೆಯ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಭವಿಷ್ಯದಲ್ಲಿ ಯಾವುದೇ ಅಡ್ಡಿ, ಆತಂಕಗಳು ಎದುರಾಗದಂತೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು ಎಂದಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ ಕಳೆದ 20 ದಿನಗಳಿಂದ ನೀರು ಹರಿಯದ ಪರಿಣಾಮ ಈ ಭಾಗದ ರೈತರು ಬೆಳೆದಿದ್ದ ಬೆಳೆಗಳು ಒಣಗಿ‌ ಹೋಗುವ ಆತಂಕ ಎದುರಾಗಿತ್ತು.‌ ಅಧಿಕಾರಿಗಳ ಇಚ್ಛಾಶಕ್ತಿ, ಕಾರ್ಮಿಕರ ಸತತ ಪರಿಶ್ರಮದಿಂದ ಕಾಲುವೆಯ ದುರಸ್ತಿ ಕಾರ್ಯವನ್ನು ಮುಗಿಸಿಕೊಟ್ಡಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸುವೆ. ನೀರು ಹರಿಸಿ ನಿಮ್ಮ ಬೆಳೆಗಳನ್ನು ರಕ್ಷಣೆ ಮಾಡುವುದಾಗಿ  ನಾನು ರೈತರಿಗೆ ವಾಗ್ದಾನ ಮಾಡಿದ್ದೆ. ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದ್ದು ಮುಂದೆಯೂ ಕೂಡ ಈ ಭಾಗದ ರೈತರ ಹಿತಕಾಪಾಡಲು ನಾನು ಸದಾ ಸಿದ್ದನಿದ್ದೇನೆ. ಅಧಿಕಾರ ಇರಲಿ, ಇಲ್ಲದಿರಲಿ, ನಿಮ್ಮ ರಕ್ಷಣೆಗೆ ನಾನು ಬದ್ದನಾಗಿರುವೆ ಎಂದು ಟ್ವೀಟ್ ಮಾಡಿದ್ದಾರೆ.

ಬಿ.ಡಿ.ಹಳ್ಳಿ ವೇದಾವತಿ ನದಿ ಸೇತುವೆ ಕಾಮಗಾರಿ ವಿಳಂಬದ ಬಗ್ಗೆ ನಿವಾಸಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸಚಿವ ಶ್ರೀರಾಮುಲು ಭೇಟಿ ನೀಡಿದ್ದರು. ಹದಿನೈದು ದಿನದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕಾಮಗಾರಿ ಕೈಗೆತ್ತಿಕೊಂಡಿರುವ ಸಂಸ್ಥೆಯ ಪ್ರತಿನಿಧಿಗಳು ಶ್ರೀರಾಮುಲು ಅವರಿಗೆ ತಿಳಿಸಿದರು. ಆದರೆ ಕಾಮಗಾರಿ ಮುಗಿಯುವವರೆಗೂ ಸ್ಥಳದಲ್ಲಿಯೇ ಇರುವುದಾಗಿ ಶ್ರೀರಾಮುಲು ತಿಳಿಸಿದ್ದರು. ಬಳಿಕ ಪೂಜೆ ಸಲ್ಲಿಸಿ, ಕಾರ್ಮಿಕರೊಂದಿಗೆ ಊಟ ಮಾಡಿ ಸ್ಥಳದಲ್ಲೇ ಮಲಗಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com